Connect with us

    LATEST NEWS

    Udupi: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪತ್ನಿ..!

    Published

    on

    ಪತ್ನಿಯೊಬ್ಬಳು ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪರಿಣಾಮ ಪತಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ಸಂಭವಿಸಿದೆ.

    ಉಡುಪಿ: ಪತ್ನಿಯೊಬ್ಬಳು ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪರಿಣಾಮ ಪತಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ಸಂಭವಿಸಿದೆ.

    ಮೊಹಮ್ಮದ್ ಅಶ್ರಫ್  (22) ಗೆ ಅವರ ಪತ್ನಿ ಅಫ್ರೀನ್, ಅತ್ತೆ, ಮಾವ ಮತ್ತಿತರರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

    ಮೊಹಮ್ಮದ್‌ ಆಸೀಫ್‌ ಅವರ ಎಡ ಬದಿಯ ಮುಖ, ದೇಹ, ಎಡಗೈ, ಎಡ ಬದಿಯ ಎದೆ, ಬೆನ್ನು ಬಲಕೈ ಗೆ ಗುಳ್ಳೆ ಎದ್ದಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೊಹಮ್ಮದ್‌ ಆಸೀಫ್‌ ಕಾರ್ಕಳ ತಾಲೂಕಿನವರಾಗಿದ್ದು 11 ತಿಂಗಳ ಹಿಂದೆ ಉಡುಪಿ ತಾಲೂಕು ಮಣಿಪುರ ಗ್ರಾಮದ ಗುಜ್ಜಿ ಎಂಬಲ್ಲಿನ ನಿವಾಸಿ ಅಫ್ರೀನ್‌ ಅವರನ್ನು ಮದುವೆಯಾಗಿದ್ದರು.

    ಮದುವೆಯಾದ ಬಳಿಕ ಅಫ್ರೀನ್‌ ಳು ಒಂದೂವರೆ ತಿಂಗಳು ಗಂಡನ ಮನೆಯಲ್ಲಿದ್ದು, ಬಳಿಕ ಅಲ್ಲಿ ಇರಲು ಇಷ್ಟವಿಲ್ಲವೆಂದು ಮಣಿಪುರದ ತನ್ನ ತವರು ಮನೆಗೆ ಬಂದಿದ್ದಳು.

    ಗಂಡ ಮೊಹಮ್ಮದ್‌ ಆಸೀಫ್‌ ಕೂಡಾ ತನ್ನ ಮನೆಯಲ್ಲಿಯೇ ಇರ ಬಹುದೆಂದು ತಿಳಿಸಿದ ಮೇರೆಗೆ ಅವರು ಸುಮಾರು 9 ತಿಂಗಳುಗಳಿಂದ ಹೆಂಡತಿಯ ಮನೆಯಲ್ಲಿಯೇ ವಾಸವಿದ್ದಾರೆ.

    ಅಫ್ರೀನ್‌ ಳಿಗೆ ಗಂಡ ಮೊಹಮ್ಮದ್‌ ಆಸೀಫ್‌ ಗೆ ಬೇರೆ ಹುಡುಗಿಯ ಜತೆ ಸಂಬಂಧ ಇದೆ ಎಂಬ ಅನುಮಾನವಿದ್ದು, ಈ ಬಗ್ಗೆ ಯಾವಾಗಲೂ ಗಂಡನ ಜತೆ ಜಗಳವಾಡುತ್ತಿದ್ದಳು.

    ಸೆ. 17 ರಂದು ಸಂಜೆ 6:45 ಗಂಟೆಗೆ ಮೊಹಮ್ಮದ್‌ ಆಸೀಫ್‌ ಬಾತ್‌ ರೂಮ್‌ ನಲ್ಲಿ ಸ್ನಾನ ಮಾಡುತ್ತಿದ್ದ ಸಮಯ ಪತ್ನಿ ಅಫ್ರೀನ್‌ ಹೊರಗಿನಿಂದ ಬಾಗಿಲು ಬಡಿದಿದ್ದು, ಮೊಹಮ್ಮದ್‌ ಆಸೀಫ್‌ ಬಾಗಿಲನ್ನು ತೆರೆದಾಗ ಆಕೆ ತನ್ನ ಕೈಯಲ್ಲಿದ್ದ ಸ್ಟೀಲಿನ ಪಾತ್ರೆಯಲ್ಲಿದ್ದ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರನ್ನು ಗಂಡನ ಮೈ ಮೇಲೆ ಎರಚಿದ್ದಾಳೆ.

    ಮೊಹಮ್ಮದ್‌ ಆಸೀಫ್‌ ಕೂಗಾಡುತ್ತಾ ಮನೆಯಿಂದ ಹೊರಗಡೆ ಓಡಿದ್ದು, ಆಗ ಮಾವ ಹುಸೈನ್‌ ಅವರು ಮೊಹಮ್ಮದ್‌ ಆಸೀಫ್‌ ಅವರನ್ನು ಸಮಧಾನಪಡಿಸಿ ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ.

    ಮೈಮೇಲೆ ಬಿಸಿ ನೀರನ್ನು ಹಾಕಿದ ಪರಿಣಾಮ ಮೊಹಮ್ಮದ್‌ ಆಸೀಫ್‌  ಅವರ ದೇಹದಲ್ಲಿ  ಗುಳ್ಳೆ ಎದ್ದಿದ್ದು, ಈ ಬಗ್ಗೆ ಆಸ್ಪತ್ರೆಗೆ ಹೋಗುತ್ತೇನೆಂದು ತಿಳಿಸಿದಾಗ ಅಫ್ರೀನ್‌, ಅತ್ತೆ ಮೈಮುನಾ, ಮಾವ ಹುಸೈನ್‌ ಹಾಗೂ ನೆರೆಮನೆಯ ಲತೀಫ್‌ ಆವರು ಸೇರಿ ಹೊರಗಡೆ ಹೋಗಲು ಬಿಡದೆ ಅವರನ್ನು ಮನೆಯ ರೂಮಿನಲ್ಲಿಯೇ ಕೂಡಿ ಹಾಕಿರುತ್ತಾರೆ.

    ಅಲ್ಲದೆ ಅಫ್ರೀನ್‌ಳು ಮೊಹಮ್ಮದ್‌ ಆಸೀಫ್‌ ರವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ.

    ಅಷ್ಟೆಯಲ್ಲದೆ  ಸೆ. 18 ರಂದು ಮಧ್ಯಾಹ್ನ 3 ಗಂಟೆಗೆ ಉಳ್ಳಾಲದ ನಿವಾಸಿ ಜಮಾತ್‌ ಎಂಬಾತ ಮೊಹಮ್ಮದ್‌ ಆಸೀಫ್‌ ಅವರಿಗೆ ಕರೆ ಮಾಡಿ ಪೊಲೀಸ್‌ ಕೇಸ್‌ ಕೊಟ್ಟರೆ ನಿನ್ನನ್ನು ಬಿಡುವುದಿಲ್ಲ, ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಕಾಪು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

     

    LATEST NEWS

    ಮೊದಲ ಸಭೆಯಲ್ಲೇ ಮಿಂಚಿದ ಚೌಟ..! ಬೆನ್ನು ತಟ್ಟಿದ ಕೇಂದ್ರ ಸಚಿವ..!!

    Published

    on

    ಮಂಗಳೂರು: ಮಂಗಳೂರು ಜಿಲ್ಲಾ ಪಂಚಾಯತ್‌ನಲ್ಲಿ ಇಂದು(ಜು.17) ನಡೆದಿದ್ದ ರೈಲ್ವೇ ಸಚಿವರ ಸಭೆಯಲ್ಲಿ ಸಂಸದ ಬ್ರಿಜೇಶ್‌ ಚೌಟ ಎಲ್ಲರ ಗಮನ ಸೆಳೆದಿದ್ದಾರೆ. ದಕ್ಷಿಣ, ನೈರುತ್ಯ ಹಾಗೂ ಕೊಂಕಣ ರೈಲ್ವೇ ವಿಭಾಗವನ್ನು ಒಳಗೊಂಡಿರುವ ಮಂಗಳೂರಿನಲ್ಲಿ ಸ್ಥಳೀಯ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದಾರೆ.

    ನೂತನ ಸಂಸದರಾಗಿ ಆಯ್ಕೆಯಾದ ಬ್ರಿಜೇಶ್ ಚೌಟ ರೈಲ್ವೇ ಇಲಾಖೆಯ ರಾಜ್ಯ ಸಚಿವ ಸೋಮಣ್ಣ ಅವರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ರೈಲ್ವೇ ಇಲಾಖೆಯ ಹತ್ತು ಹಲವು ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲೆಯಿಂದ ರೈಲ್ವೇ ಇಲಾಖೆಗಳಿಗೆ ಇರುವ ಆದಾಯದ ಬಗ್ಗೆ ಸಂಸದರು ವಿವರಿಸಿರುವುದೇ ಈ ಮೆಚ್ಚುಗೆ ಸಿಗಲು ಕಾರಣವಾಗಿದೆ. ಚತುರ್ವಿಧ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಮಂಗಳೂರಿನಂತ ನಗರದಲ್ಲಿ ರೈಲ್ವೇ ಪ್ರತ್ಯೇಕ ವಿಭಾಗ ಇಲ್ಲದ ಕಾರಣ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ರೈಲ್ವೇ ಇಲಾಖೆಯಲ್ಲಿ ಸ್ಥಳೀಯ ಜನರಿಗೆ ಯಾವುದೇ ನೌಕರಿ ಸಿಗದೇ ಇರುವುದು, ಕನಿಷ್ಟ ರೈಲ್ವೇ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸ್ಟಾಲ್‌ಗೆ ಅವಕಾಶ ಸಿಗದೆ ಇರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

     

    ಇನ್ನು ಈ ಮೂರು ರೈಲ್ವೇ ವಿಭಾಗದಲ್ಲಿರುವ ಸಿಬ್ಬಂದಿಗಳು ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಭೆಯಲ್ಲಿ ಅಧಿಕಾರಿಗಳಿಗೆ ಸ್ಥಳೀಯರಿಗೆ ನೌಕರಿಯ ಜೊತೆಗೆ ಇರುವ ಸಿಬ್ಬಂದಿಗೆ ಕನ್ನಡ ಭಾಷೆಯನ್ನು ಕಲಿಸುವಂತೆ ಸೂಚನೆ ನೀಡಿದ್ದಾರೆ. ಇದು ಭಾಷಾ ತಾರತಮ್ಯದ ವಿಚಾರವಾಗಿ ಅಲ್ಲದೇ ಇದ್ದು, ಸ್ಥಳೀಯ ಜನರಿಗೆ ಇದರಿಂದ ಸಮಸ್ಯೆ ಆಗುತ್ತಿರುವ ಕಾರಣ ಇದು ಅಗತ್ಯ ಎಂದು ಅವರು ಹೇಳಿದ್ದಾರೆ. ಸಂಸದ ಬ್ರಿಜೇಶ್ ಚೌಟರ ಮಾತಿಗೆ ಸಚಿವ ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚೌಟರನ್ನು ಪ್ರಶಂಸಿದ್ದಾರೆ. ಸಭೆಯಲ್ಲಿದ್ದ ಮೂರು ರೈಲ್ವೇ ವಿಭಾಗದ ಮುಖ್ಯಾಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆಯನ್ನು ಅರಿತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲು ಸಚಿವ ಸೋಮಣ್ಣ ಸೂಚಿಸಿದ್ದಾರೆ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ಬಳಕೆದಾರರ ಸಮಸ್ಯೆಯನ್ನು ಬಗೆ ಹರಿಸುವುದು ಹಾಗೂ ರೈಲು ನಿಲ್ದಾಣವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    Continue Reading

    DAKSHINA KANNADA

    ಕಂಬಳ ಕ್ಷೇತ್ರದಲ್ಲಿ ಹಲವು ಮೆಡಲ್‌ಗಳನ್ನು ಗಳಿಸಿದ “ಲಕ್ಕಿ” ಇನ್ನಿಲ್ಲ..

    Published

    on

    ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್ ಗಳನ್ನು ತನ್ನದಾಗಿಸಿದ ಕೋಣ  ಲಕ್ಕಿ ಸಾವನ್ನಪ್ಪಿದೆ. ಐಕಳ ದಿವಾಕರ ಚೌಟ ಮಾಲಕತ್ವದ ಕೋಣ ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ(ಜು.16) ಕಾರ್ಕಳದಲ್ಲಿ ಲಕ್ಕಿಗೆ ಅಪರೇಷನ್ ಕೂಡ ನಡೆದಿತ್ತು.

    ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

    ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು, ಮತ್ತೆ ಇಂದು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತ್ತು. ಲಕ್ಕಿಯ ಮಾಲಕರು ಮತ್ತು ಒಡನಾಡಿಗಳಿಗೂ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸು ನೀಗಿದೆ. ಲಕ್ಕಿ ಒಬ್ಬಂಟಿ ಕೋಣವಾಗಿದ್ದು ಕಂಬಳ ಸಂದರ್ಭ ಅದಕ್ಕೆ ಸರಿಯಾದ ಜೊತೆ ಹುಡುಕಿ ಕಂಬಳದಲ್ಲಿ ಓಡಿಸಲಾಗುತ್ತಿತ್ತು. ಈ ಬಾರಿ 5 ಮತ್ತು ಕಳೆದ ವರ್ಷ 5 ಮೆಡಲ್ ಗಳನ್ನು ತನ್ನದಾಗಿಸಿದ್ದ ಲಕ್ಕಿ ಹಲವಾರು ಮೆಡಲ್ ಗಳನ್ನು ಪಡೆದುಕೊಂಡಿತ್ತು.

    Continue Reading

    LATEST NEWS

    ಮಳೆ ಸೃಷ್ಟಿಸಿದ ಅವಾಂತರ.. ಲಾರಿ ಏರಿ ಜಿಲ್ಲಾಧಿಕಾರಿ ಪ್ರಯಾಣ..!!

    Published

    on

    ಉತ್ತರ ಕನ್ನಡ/ಮಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಆರು ಜನರನ್ನು ಬಲಿ ತೆಗೆದುಕೊಂಡಿದ್ದ ಗುಡ್ಡ ಕುಸಿತದ ಜಾಗಕ್ಕೆ ರಕ್ಷಣಾ ತಂಡ ತಲುಪಲು ಕೂಡಾ ಸಾಧ್ಯವಾಗದ ರೀತಿಯಲ್ಲಿ ಮಳೆ ಸುರಿದಿತ್ತು. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಸಣ್ಣ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ದೇವಸ್ಥಾನದಲ್ಲಿ ಜಾರಿ ಬಿದ್ದ ಹೆಚ್.ಡಿ ರೇವಣ್ಣ..!

    ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಜಿಲ್ಲಾ ಪಂಚಾಯತ್ ಸಿಸಿಒ ಈಶ್ವರ್‌ ಕಾಂದೂ ಹಾಗೂ ಎಸ್‌ಪಿ ಎಂ ನಾರಾಯಣ್ ಅವರು ಲಾರಿಯಲ್ಲಿ ಪ್ರಯಾಣಿಸಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಶಿರೂರು ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐದು ಜನ ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಗ್ಯಾಸ್‌ ಟ್ಯಾಂಕರ್‌ಗಳು, ಮೂರು ಮನೆ ಮತ್ತು ಒಂದು ಕಾರು ಮಣ್ಣಿನೊಂದಿಗೆ ಕೊಚ್ಚಿ ಹೋಗಿ ನದಿ ಪಾಲಾಗಿತ್ತು. ಘೋರ ದುರಂತ ನಡೆದ ಸ್ಥಳಕ್ಕೆ ತೆರಳುತ್ತಿದ್ದ ಅಧಿಕಾರಿಗಳ ವಾಹನಗಳೂ ಕೂಡಾ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸಲು ಆಗದೆ ನಿಂತಿತ್ತು. ಈ ವೇಳೆ ದುರ್ಘಟನೆ ನಡೆದ ಸ್ಥಳಕ್ಕೆ ತೆರಳಲು ಅಧಿಕಾರಿಗಳು ಲಾರಿಯೊಂದರ ಸಹಾಯ ಪಡೆದುಕೊಂಡಿದ್ದಾರೆ.

    Continue Reading

    LATEST NEWS

    Trending