Connect with us

    LATEST NEWS

    Udupi: ಸ್ವರ್ಣಾ ನದಿಯ ಬಜೆ ಡ್ಯಾಮ್ ಭರ್ತಿ – ಮಿಗತೆ ನೀರು ಹೊರಕ್ಕೆ

    Published

    on

    ಸ್ವರ್ಣ ನದಿಗೆ ಹಿರಿಯಡ್ಕದಲ್ಲಿ ಅಡ್ಡವಾಗಿ ನಿರ್ಮಿಸಿರುವ ಉಡುಪಿ ನಗರದ ಜೀವನಾಡಿಯಾಗಿರುವ ಬಜೆ ಡ್ಯಾಮ್ ನಲ್ಲಿ ನೀರು ಭರ್ತಿಯಾಗಿದ್ದು ಮಿಗತೆ ನೀರನ್ನು  ಹೊರಕ್ಕೆ ಬಿಡಲಾಗಿದೆ.

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದರೆಡು ದಿನಗಳಿಂದ ಮಳೆ ಸುರಿಯುತ್ತಾ ಇದ್ದು, ಇಂದು ಕೂಡ ಮಳೆ ಮತ್ತೆ ಮುಂದುವರಿದಿದೆ.

    ಜಿಲ್ಲೆಯ ಸ್ವರ್ಣಾ ನದಿ ತುಂಬಿ ಹರಿಯುತ್ತಿರುವ  ದೃಶ್ಯ ಕಂಡು ಬಂದಿದೆ.

    ಇನ್ನು ಸ್ವರ್ಣ ನದಿಗೆ ಹಿರಿಯಡ್ಕದಲ್ಲಿ ಅಡ್ಡವಾಗಿ ನಿರ್ಮಿಸಿರುವ ಉಡುಪಿ ನಗರದ ಜೀವನಾಡಿಯಾಗಿರುವ ಬಜೆ ಡ್ಯಾಮ್ ನಲ್ಲಿ ನೀರು ಭರ್ತಿಯಾಗಿದ್ದು ಮಿಗತೆ ನೀರನ್ನು  ಹೊರಕ್ಕೆ ಬಿಡಲಾಗಿದೆ.

    ಜಿಲ್ಲೆಯಲ್ಲಿ ಕೆಲವು ಕಡೆ ಭಾರೀ ಮಳೆ ಸುರಿಯುತ್ತಾ ಇರುವ ಕಾರಣ  ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಲಭ್ಯವಾಗಿದೆ.

    ಸಮುದ್ರ ಹಾಗೂ ನದಿ ಪಾತ್ರದ ನಿವಾಸಿಗಳು ಮಳೆಯ ಕುರಿತು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮಾಧ್ಯಮಗಳ ಮೂಲಕ ಮನವಿ ಮಾಡಿದೆ.

    ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಕೆಲವು ನಿರ್ದೇಶನಗಳನ್ನು ನೀಡಿದ್ದು, ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ.

    ಮಳೆಗಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯವನ್ನು ಶನಿವಾರ ಮದ್ಯಾಹ್ನ ಹಾಗೂ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ವವನ್ನು ಸರಿದೂಗಿಸುವಂತೆ ತಿಳಿಸಿದೆ.

    ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳಬೇಕು.

    ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಬೇಕು.

    ಕಠಿಣವಾದ ತೋಡು, ಹಳ್ಳಗಳನ್ನು ದಾಟಿ ಬರುವ ಸಂದರ್ಭಗಳು ಇರುವಂತಹ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುಂತೆ ಒಟ್ಟು ಏಳು ಅಂಶಗಳ ಸುತ್ತೋಲೆಯನ್ನು ಜಿಲ್ಲಾಡಳಿತ ಹೊರಡಿಸಿದೆ.

    ಜಿಲ್ಲೆಯಲ್ಲಿ ಇನ್ನೂ ಕೆಲವು ದಿನಗಳ  ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

     

    Click to comment

    Leave a Reply

    Your email address will not be published. Required fields are marked *

    LATEST NEWS

    ನವೆಂಬರ್ 25ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ

    Published

    on

    ಮಂಗಳೂರು/ನವದೆಹಲಿ: ಚಳಿಗಾಲದ ಅಧಿವೇಶನದ ವೇಳಾಪಟ್ಟಿಯನ್ನು ಪ್ರಕಟಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನವೆಂಬರ್ 26ರಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ‘ಸಂವಿಧಾನ ದಿನ’ ವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.

    “ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25ರಂದು ಪ್ರಾರಂಭವಾಗಲಿದ್ದು, ಡಿಸೆಂಬರ್ 20ರಂದು ಮುಕ್ತಾಯವಾಗಲಿದೆ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಇಂದು ಪ್ರಕಟಿಸಿದ್ದಾರೆ.

    ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳ ನಂತರ ಪ್ರಾರಂಭವಾಗುವ ಅಧಿವೇಶನದಲ್ಲಿ ಸರ್ಕಾರವು ವಕ್ಫ್ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಉಭಯ ಸದನಗಳು ಅಂಗೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಂದು ರಾಷ್ಟ್ರ ಒಂದು ಚುನಾವಣಾ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೈಲೈಟ್ ಮಾಡಿದ್ದು, ಇದರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯಲಿದೆ.

    Continue Reading

    LATEST NEWS

    ರೈಲ್ವೆ ನಿಲ್ದಾಣದಲ್ಲಿ ಸೂಟ್​ಕೇಸ್​ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!

    Published

    on

    ಮಂಗಳೂರು/ತಮಿಳುನಾಡು : ತಮಿಳುನಾಡಿನ ರೈಲ್ವೆ ನಿಲ್ದಾಣದೊಳಗೆ ಸೂಟ್​ಕೇಸ್​ವೊಂದರಲ್ಲಿ ಮಹಿಳೆಯ ಶ*ವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿರುವ ಮಿಂಜೂರ್ ರೈಲ್ವೇ ನಿಲ್ದಾಣದಲ್ಲಿ ಸೂಟ್‌ಕೇಸ್‌ನಲ್ಲಿ ಶ*ವ ಪತ್ತೆಯಾಗಿದೆ.

    ತಂದೆ – ಮಗಳು ಅರೆಸ್ಟ್ :

    ನವೆಂಬರ್ 4 ರ ಸೋಮವಾರ ತಡರಾತ್ರಿ 43 ವರ್ಷದ ಬಾಲಸುಬ್ರಮಣ್ಯಂ ಮತ್ತು ಅವರ 17 ವರ್ಷದ ಮಗಳು ದೊಡ್ಡ ಸೂಟ್‌ಕೇಸ್‌ನೊಂದಿಗೆ ನಿಲ್ದಾಣಕ್ಕೆ ಬಂದಿದ್ದರು. ಬಾಲಸುಬ್ರಹ್ಮಣ್ಯಂ ಆ ಸೂಟ್​ಕೇಸ್​ನ್ನು ಅಲ್ಲಿಯೇ ಬಿಟ್ಟು ರೈಲ್ವೆ ನಿಲ್ದಾಣದಿಂದ ಹೊರಹೋಗಲು ಯತ್ನಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.

    ಸಾಮಾನು ಸರಂಜಾಮು ಬಿಟ್ಟು ಹೋಗಿರುವ ಬಗ್ಗೆ ಆತಂಕಗೊಂಡ ಪ್ರಯಾಣಿಕರು ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳಿಗೆ  ಮಾಹಿತಿ ನೀಡಿದ್ದಾರೆ. ಸೂಟ್‌ಕೇಸ್ ತುಂಬಾ ದೊಡ್ಡದಾಗಿದ್ದ ಕಾರಣ, ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಆರ್‌ಪಿಎಫ್ ಅಧಿಕಾರಿಗಳು ಅನುಮಾನಗೊಂಡು ಕೊರುಕ್ಕುಪೇಟೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
    ಅನುಮಾನಗೊಂಡ ಅಧಿಕಾರಿಗಳು ಸೂಟ್‌ಕೇಸ್‌ನ ವಿಷಯಗಳ ಬಗ್ಗೆ ವಿಚಾರಿಸಲು ಬಾಲಸುಬ್ರಮಣ್ಯಂನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಅವರು ಕೊಟ್ಟ ವಿವರಣೆ ಅಸ್ಪಷ್ಟವಾಗಿತ್ತು. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತ್ತು. ಹೀಗಾಗಿ ಸೂಟ್ ಕೇಸ್ ತೆರೆಯಲಾಗಿದೆ. ಈ ವೇಳೆ ಅದರಲ್ಲಿ ಮಹಿಳೆಯ ಶ*ವ ಕಂಡು ಬಂದಿದೆ.

    ಇದನ್ನೂ ಓದಿ : ಆತ್ಮಹ*ತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್

    ಪ್ಲಾಸ್ಟಿಕ್‌ ಕವರ್​ನಲ್ಲಿ ಸುತ್ತಲಾಗಿದ್ದ ಶ*ವದ ತಲೆಯಲ್ಲಿ  ಗಾ*ಯಗಳಿದ್ದವು. ತಕ್ಷಣವೇ ಪೊಲೀಸರು ಬಾಲಸುಬ್ರಮಣ್ಯಂ ಮತ್ತು ಅವರ ಪುತ್ರಿ ಇಬ್ಬರನ್ನೂ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

    ಕೊ*ಲೆ ಮಾಡಿದ್ಯಾಕೆ?

    ತಂದೆ ಮತ್ತು ಮಗಳು ತಾವೇ ಕೊ*ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಹಿಳೆ ಮಗಳನ್ನು ವೇ*ಶ್ಯಾವಾಟಿಕೆಗೆ ಬಲವಂತಪಡಿಸಲು ಯತ್ನಿಸಿದಾಗ ಕೋಪದಿಂದ ಕೊಂ*ದಿರುವುದಾಗಿ ಹೇಳಿದ್ದಾರೆ. ಮೃ*ತಳನ್ನು ಮಾನ್ಯಂ ರಮಣಿ ಎಂದು ಪೊಲೀಸರು ಗುರುತಿಸಿದ್ದು, ಆಕೆ ಚೆನ್ನೈನಲ್ಲಿರುವ ಆರೋಪಿಗಳ ಮನೆಯ ಬಳಿ ವಾಸಿಸುತ್ತಿದ್ದಳು. ಮಹಿಳೆಯ ಕೊರಳಲ್ಲಿ 50 ಗ್ರಾಂ ಚಿನ್ನಾಭರಣವಿದ್ದು, ಆರೋಪಿಗಳು ಅದನ್ನು ಕದ್ದು ಬಾರ್‌ಗಳನ್ನಾಗಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

    Continue Reading

    LATEST NEWS

    ಮಂಗಳೂರು: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

    Published

    on

    ಮಹಾನಗರ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ರಾತ್ರಿ ವೇಳೆ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಆಟೋ ಚಾಲಕರು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದ್ದಾರೆ.

    ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರವೇ ಪ್ರಿ ಪೇಯ್ಡ್ ಆಟೋ ವ್ಯವಸ್ಥೆ ಇದೆ. ಅನಂತರ ವಂದೇಭಾರತ್‌ ರೈಲುಗಳು ಸಹಿತ ಹಲವಾರು ರೈಲುಗಳು ನಿಲ್ದಾಣಕ್ಕೆ ಬರುತ್ತವೆ. ಅದರಲ್ಲಿ ಬರುವ ಪ್ರಯಾಣಿಕರಿಗೆ ಪ್ರೀ ಪೇಯ್ಡ್ ಆಟೋ ಸಿಗುತ್ತಿಲ್ಲ. ಈ ಪ್ರಯಾಣಿಕರಿಂದ ಕೆಲವು ಆಟೋರಿಕ್ಷಾ ಚಾಲಕರು ತೀರಾ ಹೆಚ್ಚಿನ ಬಾಡಿಗೆಯನ್ನು ವಸೂಲಿ ಮಾಡುತ್ತಾರೆ. ಆಟೋರಿಕ್ಷಾ ನಿಲ್ದಾಣದಲ್ಲಿ ಬಾಡಿಗೆದರದ ವಿಷಯವಾಗಿ ಚರ್ಚೆ, ಗಲಾಟೆಗಳು ನಡೆಯುತ್ತವೆ. ಪೊಲೀಸರು ಕೂಡ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರು ಬೇರೆ ಉಪಾಯವಿಲ್ಲದೆ ಹೆಚ್ಚಿನ ಬಾಡಿಗೆಗೆ ಒಪ್ಪಿಕೊಂಡು ಮನೆ ಸೇರುವಂತಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

    ಯಾಕೆ ಇಲ್ಲ?

    ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 9.30ರ ವರೆಗೂ ಪ್ರಿ ಪೇಯ್ಡ ಆಟೋರಿಕ್ಷಾ ಕೌಂಟರ್‌ ತೆರೆದಿರುತ್ತದೆ.

    ಮನಬಂದಂತೆ ಬಾಡಿಗೆ ದರ

    ನಾನು ರಾತ್ರಿ 11.30ಕ್ಕೆ ವಂದೇಭಾರತ್‌ ರೈಲಿನಲ್ಲಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಬಂದಾಗ ಅಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್‌ ಇರಲಿಲ್ಲ. ಇದರಿಂದ ನನಗೆ ತುಂಬಾ ತೊಂದರೆಯಾಗಿದೆ. ರಾತ್ರಿ ವೇಳೆಯೂ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯ ರೈಲುಗಳು ಬರುತ್ತವೆ. ಸಾವಿರಾರು ಮಂದಿ ಪ್ರಯಾಣಿಕರು ಆಗಮಿಸುತ್ತಾರೆ. ಹಾಗಾಗಿ ಕೂಡಲೇ ರಾತ್ರಿಯೂ ಪ್ರಿಪೇಯ್ಡ್ ಆಟೋ ಕೌಂಟರ್‌ ಆರಂಭಿಸಬೇಕು.

    Continue Reading

    LATEST NEWS

    Trending