ಉಡುಪಿ: ರಾಜ್ಯದಲ್ಲಿ ಉಡುಪಿ ಜಿಲ್ಲೆ ಸೇರಿ 19 ಜಿಲ್ಲೆಗಳಲ್ಲಿ ಸೋಮವಾರ ದಿಂದ ಭಾಗಶಃ ಅನ್ಲಾಕ್ ಜಾರಿಯಾಗಲಿದ್ದು, ಆದರೆ ಉಡುಪಿ-ಮಂಗಳೂರು ಸಂಪರ್ಕಿಸುವ ಹೆಜಮಾಡಿ ಚೆಕ್‌ಪೋಸ್ಟ್ ಇನ್ನಷ್ಟು ಬಿಗಿಯಾಗಲಿದೆ. ಉಡುಪಿ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಚಾಲನೆ ಸಿಗುವುದರಿಂದ ಆರ್ಥಿಕತೆ ಚೇತರಿಸಿಕೊಳ್ಳುವ ಬಹುದು ಎಂಬ ನಿರೀಕ್ಷೆ ಇದೆ.
ಉಡುಪಿ ಜಿಲ್ಲೆಯ ಗಡಿಭಾಗದ ಕೆಲವೊಂದು ಜಿಲ್ಲೆ ಲಾಕ್ಡೌನ್ ನಾಗಿ ಮುಂದುವರೆದಿದ್ದರಿಂದ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ. ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಯಲ್ಲಿ ಚೆಕ್ಪೋಸ್ಟ್ ಇನ್ನಷ್ಟು ಬಿಗಿ ಪಡಿಸಲಾಗಿದ್ದು, ಅಂತರ್ ಜಿಲ್ಲೆ ಪ್ರವೇಶ ನಿರ್ಬಂಧಿಸಲಾಗಿದೆ. ಅನ್ಲಾಕ್ ಜಾರಿಯಾಗಿದೆ ಎಂದು ಯಾರು ಮೈಮರೆಯುವುದು ಬೇಡ ಜಿಲ್ಲಾಡಳಿತ ನೀಡಿದ ಸೂಚನೆಗಳನ್ನು ಪಾಲಿಸಿ ಪಾಲಿಸಬೇಕು, ಅನ್ಲಾಕ್ ಪ್ರಕ್ರಿಯೆಯಲ್ಲೂ ಮತ್ತೆರಡು ತಾಸು ಅವಧಿ ವಿಸ್ತರಿಸಲಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರ ಮತ್ತು ಸಂಬಂಧಿತ ಕ್ಷೇತ್ರದವರಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಎಚ್ಚರವಹಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.