Wednesday, July 28, 2021

ಉಡುಪಿ : ಟಗ್ ತೆರವು ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತ..!

ಉಡುಪಿ : ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಕಾಡಿಪಟ್ಣ ಕಡಲತೀರ ಸೇರಿದ ಅಲಯನ್ಸ್ ಟಗ್ ತೆವು ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಮಳೆಗಾಲ ಕಳೆದ ಮೇಲೆ ಈ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸುಮಾರು 8-10 ಕೋಟಿ ರೂ. ಮೌಲ್ಯದ ಟಗ್ ದುರಂತ ನಡೆದು ಒಂದು ತಿಂಗಳು ಸಂದಿದೆ.

ಟಗ್ ಸುಸ್ಥಿತಿಗೆ ತಂದು ಸ್ಥಳಾಂತರಿಸುವ ನಿಟ್ಟಿನಲ್ಲಿ ಬೇಕಾದ ಎಲ್ಲಾ  ಸಿದ್ಧತೆಗಳನ್ನು ಮಾಡಲಾಗಿತ್ತು.ಟಗ್ ತೆರವಿಗೆ ಮುಖ್ಯ ಅಡಚಣೆಯಾಗಿದ್ದ ತೈಲವನ್ನು ಮಂಗಳೂರಿನ ಮೊಹಮ್ಮದ್ ಖಲಂದರ್ ತಂಡ ನಡೆಸಿತ್ತು.

ಈ ಸಂಬಂಧ ಟಗ್ ಕಂಪನಿ ಮರ್ಕೆಂಟೈಲ್ ಮರೈನ್  ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಕೂಡ  ಸಲ್ಲಿಸಿತ್ತು. ಆದರೆ  ಮುಂಗಾರು ಮತ್ತು ಕಡಲಿನಲ್ಲಿನ ಪ್ರತಿಕೂಲ ಹವಮಾನಗಳಿಂದ ಸದ್ಯಕ್ಕೆ ಒಪ್ಪಿಗೆ ಸಿಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಟಗ್ ತೆರವಿನ ಹೊಣೆ ಹೊತ್ತಿರುವ ಮಂಗಳೂರು ಬದ್ರಿಯಾ ಕಂಪನಿಯ ಬಿಲಾಲ್ ಮೊಯ್ದೀನ್ ತಂಡ ಮೇ 17ರಿಂದ ನಿತ್ಯ ಕಾಡಿಪಟ್ಣಕ್ಕೆ ಆಗಮಿಸಿ ಟಗ್‌ನಲ್ಲಿ ತುಂಬಿದ್ದ ಸಮುದ್ರ ನೀರು ಮತ್ತು ಮರಳು ತೆರವಿಗೆ ಶ್ರಮ ವಹಿಸುತ್ತಿದೆ. ನಿರಾಕ್ಷೇಪಣಾ ಪತ್ರ ದೊರೆತಲ್ಲಿ ನಮ್ಮ ತಂಡ ಮಂಗಳೂರು ಅಥವಾ ಗುಜರಾತ್‌ಗೆ ಟಗ್ ಕೊಂಡೊಯ್ಯಲಿದೆ ಎನ್ನುತ್ತಾರೆ ಬಿಲಾಲ್.

ಟಗ್ ಇರುವ ಜಾಗ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡಚಣೆ ಉಂಟು ಮಾಡುವುದರಿಂದ ಶೀಘ್ರ ತೆರವಿಗೆ ಮೀನುಗಾರರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಶ್ರೀವಿಷ್ಣು ಭಜನಾ ಮಂದಿರದಲ್ಲಿ ಅಧ್ಯಕ್ಷ ಲೀಲಾಧರ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಟಗ್ ತೆರವು ಬಗ್ಗೆ ಟಗ್ ಮಾಲೀಕರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದೆ.

 

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...