ಕೆಲಸದಾಕೆಯ ಆರೈಕೆಗೆ ಮನ ಸೋತು ಶ್ವಾನವೊಂದು ಆಕೆಯೊಂದಿಗೆ ಮಾಲೀಕರನ್ನು ಬಿಟ್ಟು ಬಸ್ ಏರಿ ಹೊರಟ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ: ಕೆಲಸದಾಕೆಯ ಆರೈಕೆಗೆ ಮನ ಸೋತು ಶ್ವಾನವೊಂದು ಆಕೆಯೊಂದಿಗೆ ಮಾಲೀಕರನ್ನು ಬಿಟ್ಟು ಬಸ್ ಏರಿ ಹೊರಟ ಘಟನೆ ಉಡುಪಿಯಲ್ಲಿ ನಡೆದಿದೆ.
ಶ್ವಾನದ ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉಡುಪಿ ಅಮ್ಮುಂಜೆಯ ಸರಸ್ವತಿ ನಗರದಲ್ಲಿ ಮನೆ ಕೆಲಸದಾಕೆಯ ಪ್ರೀತಿಯ ಆರೈಕೆಗೆ ಶ್ವಾನ ಮನಸೋತು ಆಕೆಯೊಂದಿಗೆ ತೆರಳಲು ನಿರ್ಧರಿಸಿದೆ.
ಅದರಂತೆ ಮಹಿಳೆಯೊಂದಿಗೆ ಬಸ್ ನಿಲ್ದಾಣದವರೆಗೂ ತೆರಳಿದ್ದು, ಬಸ್ ಬರುತ್ತಿದ್ದಂತೆ ಮಹಿಳೆಯೊಂದಿಗೆ ಬಸ್ ಏರಿದೆ.
ಬಸ್ ನಿರ್ವಾಹಕ ಶ್ವಾನವನ್ನು ಇಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್ನಿಂದ ಕೆಳಗೆ ಇಳಿಯದೇ ಮನೆ ಕೆಲಸದಾಕೆಯ ಜೊತೆ ನಿಂತುಕೊಂಡಿದೆ.
ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್ನಿಂದ ಇಳಿದ ಕೂಡಲೇ ಶ್ವಾನ ಕೂಡ ಇಳಿದಿದೆ. ನಾಯಿ ತನ್ನನ್ನು ಆರೈಕೆ ಮಾಡಿದವರನ್ನು ಮರಿಯಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.