ಕೃಷ್ಣ ಮಠದ ನಾಮಫಲಕ ವಿವಾದ: ಗೋಪುರದಲ್ಲೇ ಕನ್ನಡ ಫಲಕ ಅಳವಡಿಸಿದ ಪರ್ಯಾಯ ಅದಮಾರು ಮಠ..!
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸಂಸ್ಕೃತ ಮತ್ತು ತುಳು ಲಿಪಿಯಲ್ಲಿ ಬರೆಯಲಾಗಿದ್ದ ಫಲಕ ಅಳವಡಿಸಿದ್ದಕ್ಕೆ ಬಹಳಷ್ಟು ಪರ ವಿರೋಧ ಚರ್ಚೆಗಳು ವಿವಾದಗಳು ನಡೆದಿದ್ದವು.
ಕರ್ನಾಟಕದ ಆಡು ಭಾಷೆ ಕನ್ನಡವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಹಾಗೂ ಬೇರೆ ಬೇರೆ ಕಡೆಯ ಜನರು ಕೃಷ್ಣ ಮಠಕ್ಕೆ ಆಗಮಿಸುವುದರಿಂದ ನಾಮಫಲಕವನ್ನು ಕನ್ನಡದಲ್ಲೇ ಅಳವಡಿಸಬೇಕು ಎನ್ನುವ ಆಗ್ರಹಗಳು ಕೇಳಿ ಬಂದಿದ್ದುವು.
ಹಿನ್ನೆಲೆಯಲ್ಲಿ ಮಠಾಧೀಶರು ಖುದ್ದಾಗಿ ಕೃಷ್ಣ ಮಠದ ಮುಂದಿನ ಮಹಾದ್ವಾರದಲ್ಲಿ ಎತ್ತರದ ಗೋಪುರದಲ್ಲೇ ಕನ್ನಡ ಫಲಕವನ್ನು ಅಳವಡಿಸಿದ್ದಾರೆ.
ಗೋಪುರದ ಒಳಭಾಗದಲ್ಲಿ ಸಂಸ್ಕೃತ ಮತ್ತು ತುಳು ಬರಹದ ಫಲಕಗಳಿವೆ.