ರವಿವಾರ ಸಂಜೆ ಊರಿನ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದ ಶರತ್ ಶೆಟ್ಟಿ ಅವರನ್ನು ಮಾತುಕತೆಗೆಂದು ಕರೆದು ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇದೀಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಉಡುಪಿ : ರವಿವಾರ ಸಂಜೆ ಊರಿನ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದ ಶರತ್ ಶೆಟ್ಟಿ ಅವರನ್ನು ಮಾತುಕತೆಗೆಂದು ಕರೆದು ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇದೀಗ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಕೊಲೆ ನಡೆಸಿದ ಆರೋಪಿಗಳು ಪಾಂಗಾಳ ಆಲಡೆ ರಸ್ತೆಯತ್ತ ತೆರಳಿರುವ ಸಾಧ್ಯತೆಗಳಿದ್ದು, ಘಟನೆ ನಡೆದ ಸಂದರ್ಭದಲ್ಲಿ ಆ ಕಡೆಗೆ ಬೈಕ್‌ನಲ್ಲಿ ಮೂವರು ಕತ್ತಿ ಹಿಡಿದುಕೊಂಡು ಮತ್ತು ಓರ್ವ ನಡೆದುಕೊಂಡು ಓಡಿ ಹೋಗಿರುವುದು ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಶ್ವಾನ ದಳದ ನಾಯಿ ಕೂಡಾ ಆಲಡೆ ರಸ್ತೆಯವರೆಗೂ ಓಡಿ ಬಳಿಕ ಹಿಂದೆ ಬಂದಿದ್ದು, ಕೃತ್ಯದಲ್ಲಿ ನಾಲ್ಕು ಮಂದಿ ಪಾಲ್ಗೊಂಡಿರುವ ಬಗ್ಗೆ ಪೊಲೀಸರಿಗೆ ಸಂಶಯ ಕಾಡಿದೆ.
ಸಿಸಿ ಕ್ಯಾಮೆರಾದ ದೃಶ್ಯಾವಳಿ ಎಲ್ಲೆಡೆ ವೈರಲ್ ಆಗಿದೆ. ಪೊಲೀಸರು ಇದನ್ನು ದೃಢಪಡಿಸಿಲ್ಲವಾದರೂ ಸ್ಥಳೀಯರು ಇದನ್ನು ಪಾಂಗಾಳ ಆಲಡೆ ರಸ್ತೆಯ ಬಳಿಯ ದೃಶ್ಯಾವಳಿ ಎಂದು ಗುರುತಿಸಿದ್ದಾರೆ.
ಭೂವ್ಯವಹಾರ, ಗುತ್ತಿಗೆದಾರಿಕೆ ಸಹಿತ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದ ಶರತ್ ವಿ ಶೆಟ್ಟಿ ಅವರ ಮೊಬೈಲ್‌ಗೆ ಕರೆ ಮಾಡಿದ್ದ ಪರಿಚಿತರು ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿ ಕಾಂಪ್ಲೆಕ್ಸ್‌ವೊಂದರ ಬಳಿಗೆ ಮಾತುಕತೆಗೆಂದು ಆಹ್ವಾನಿಸಿದ್ದು, ಮಾತುಕತೆ ನಡೆಸುತ್ತಿದ್ದಂತೆಯೇ ಹರಿತವಾದ ಆಯುಧದಿಂದ ಇರಿದು ಪರಾರಿಯಾಗಿದ್ದರು.
ಇವನ್ನು ಕಂಡ ಸಾರ್ವಜನಿಕರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು. ಎರಡು ತಿಂಗಳ ಹಿಂದೆ ನಡೆದಿರುವ ಭೂವ್ಯವಹಾರದ ಬಗೆಗಿನ ಗಲಾಟೆಯ ಹಿಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.