Connect with us

    LATEST NEWS

    ಉಡುಪಿ : ಕಾಪು ಪಾಂಗಾಳದಲ್ಲಿ ವ್ಯಕ್ತಿಯನ್ನು ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು..!

    Published

    on

    ಉಡುಪಿ ಜಿಲ್ಲೆಯಲ್ಲಿ ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದಾರೆ. ಉಡುಪಿ ಜಿಲ್ಲೆಉ ಕಾಪು ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು 39 ವರ್ಷದ ಶರತ್ ಶೆಟ್ಟಿ ಎಂದು ಗುರುತ್ತಿಸಲಾಗಿದೆ. 

    ಉಡುಪಿ :  ಉಡುಪಿ ಜಿಲ್ಲೆಯಲ್ಲಿ ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದಾರೆ. ಉಡುಪಿ ಜಿಲ್ಲೆಉ ಕಾಪು ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು 39 ವರ್ಷದ ಶರತ್ ಶೆಟ್ಟಿ ಎಂದು ಗುರುತ್ತಿಸಲಾಗಿದೆ.

    ಭೂ ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶರತ್ ಶೆಟ್ಟಿ ಭೂ ವ್ಯವಹಾರ ಮಾಡಿಕೊಂಡಿದ್ದರು ಎನ್ನಲಾಗಿದೆ.

    ಪಾಂಗಾಳದಲ್ಲಿ ನೇಮೋತ್ಸದಲ್ಲಿದ್ದ ಶರತ್ ಶೆಟ್ಟಿಯಲ್ಲಿ ಕರೆ ಮಾಡಿ ಪಾಂಗಾಳ ಸೇತುವೆ ಬಳಿ ಬರಲು ಹೇಳಿದ ದುಷ್ಕರ್ಮಿಗಳು ಅಲ್ಲಿ ಬಂದ ಶೆಟ್ಟರ ಮೇಲೆ ಡ್ರಾಗರ್‌ನಿಂದ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ,

    ತೀವ್ರ ರಕ್ತ ಸ್ರಾವದಲ್ಲಿ ಬಿದಿದ್ದ ಶರತ್‌ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶ್ವಾನ ದಳ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪ*ಲ್ಟಿ; ಓರ್ವ ಸಾ*ವು, ಹಲವರ ಸ್ಥಿತಿ ಗಂಭೀ*ರ

    Published

    on

    ಶಿವಮೊಗ್ಗ: ಶಿವಮೊಗ್ಗದ ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರೊಂದು ಪ*ಲ್ಟಿಯಾಗಿರುವ ಘಟನೆ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಬೆಂಗಳೂರು ಮೂಲದ ಯುವಕ ಮೃ*ತಪಟ್ಟಿದ್ದಾನೆ. ನೆಲಮಂಗಲದ ಚಂದನ್‌ (26) ಮೃ*ತ ಯುವಕ.

    ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಭತ್ತದ ಗದ್ದೆಗೆ ಪ*ಲ್ಟಿಯಾಗಿದೆ.  ಕೊಡುಗು ಮೂಲದ ನಂದನ್‌, ಕೋಲಾರದ ಕೋದಂಡ, ಹಾಸನದ ಭರತ್‌, ಮಂಡ್ಯ ಜಿಲ್ಲೆಯ ಯೋಗೇಶ್‌ ಎಂಬವರಿಗೆ ಗಂ*ಭೀರ ಗಾ*ಯವಾಗಿದೆ.

    ಇದನ್ನೂ ಓದಿ : ನಟಿ ಓವಿಯಾ ಖಾಸಗಿ ವಿಡಿಯೋ ಲೀಕ್​? ನಿಜಾನಾ ಎಂದು ಕೇಳಿದ್ದಕ್ಕೆ ಎಂಜಾಯ್​ ಮಾಡಿ ಎಂದ ಕಿರಾತಕ ಬೆಡಗಿ

    ಯುವಕರ ತಂಡ ಬೆಂಗಳೂರಿನಿಂದ ಸಿಗಂದೂರಿಗೆ ಪ್ರವಾಸಕ್ಕೆ ಬಂದಿತ್ತು. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    Continue Reading

    LATEST NEWS

    ಪೊಳಲಿ ಸೇತುವೆ ಬಂದ್: ಮಂಗಳವಾರ ಗ್ರಾಮಸ್ಥರಿಂದ ಪ್ರತಿಭಟನೆ

    Published

    on

    ಮಂಗಳೂರು: ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಸೇತುವೆಯ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಪೊಳಲಿ – ಅಡ್ಡೂರಿನ ಪಲ್ಗುಣಿ ನದಿಯ ಸೇತುವೆ ಬಿರುಕು ಬಿಟ್ಟ ಕಾರಣಕ್ಕೆ ಘನ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಸೇತುವೆಯ ಸಾಮರ್ಥ್ಯವನ್ನು ಯಂತ್ರದ ಮೂಲಕ ಪರಿಶೀಲನೆ ನಡೆಸಿ ಎರಡು ತಿಂಗಳಾದ್ರೂ ಏನಾಗಿದೆ ಎಂಬ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಇದರಿಂದ ತೊಂದರೆಗೆ ಒಳಗಾಗಿರುವ ಅಮ್ಮುಂಜೆ , ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಮತ್ತು ಸುತ್ತಮುತ್ತಲಿನ ಜನ ಸಭೆ ನಡೆಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದನೆಯೇ ನೀಡದ ಜನಪ್ರತಿಧಿಗಳು, ಹಾಗೂ ಅಧಿಕಾರಿಗಳ ವಿರುದ್ಧ ಅಕ್ಟೋಬರ್ 15 ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಪೊಳಲಿಯ ರಾಮಕೃಷ್ಣ ತಪೋವನ ರಾಜರಾಜೇಶ್ವರಿ ಸಭಾಂಗಣದಲ್ಲಿ ಸಭೆ ನಡೆಸಲಾಗಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ , ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವುಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದು ಹೋರಾಟದ ಬಗ್ಗೆ ಜನಾಭಿಪ್ರಾಯ ಪಡೆದುಕೊಂಡಿದ್ದಾರೆ.

    Continue Reading

    LATEST NEWS

    ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

    Published

    on

    ಬ್ರಹ್ಮಾವರ: ಹೇರಾಡಿ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಮದರಸ ಹಾಸ್ಟೇಲ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
    ಮೃತ ವಿದ್ಯಾರ್ಥಿಯು ಮೊಹಮ್ಮದ್ ಜಹೀದ (12) ಎಂದು ಗುರುತಿಸಲಾಗಿದೆ.


    ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೆರೆಯ ಮಾಲಿಕ್ ದಿನಾರ್ ಮದರಸ ಹಾಸ್ಟೇಲ್‌ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆಯನ್ನು ಮುಗಿಸಿ ಅ.11 ರಂದು ಹಾಸ್ಟೇಲ್‌ಗೆ ಮರಳಿದ್ದಾನೆ.

    ರಾತ್ರಿ 9 ಗಂಟೆಗೆ ಊಟಕ್ಕೆ ಬಾರದಿದ್ದನ್ನು ಗಮನಿಸಿ ಹಾಡುಕಿದಾಗ ಹಾಸ್ಟೇಲ್‌ನ ಬಾತ್‌ರೂಮ್‌ನಲ್ಲಿ ಸರಳಿಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

    ಕೂಡಲೇ ಆತನನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ರಾತ್ರಿ 10.40 ರ ಸುಮಾರಿಗೆ ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನ ಮರಣದಲ್ಲಿ ಸಂಶಯವಿರುವುದಾಗಿ ಬಾಲಕನ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಲಕನಿಗೆ ಹಾಸ್ಟೇಲ್‌ಗೆ ಹೋಗಲು ಮನಸ್ಸಿಲ್ಲವೆಂದು, ಹಾಸ್ಟೇಲ್‌ನ ಇತರ ವಿದ್ಯಾರ್ಥಿಗಳೊಂದಿಗೆ ಸಣ್ನ ಮಟ್ಟಿನ ಜಗಳ ಆಗಿತ್ತು ಎಂದು ತಿಳಿದು ಬಂದಿದದೆ.

    Continue Reading

    LATEST NEWS

    Trending