Monday, July 4, 2022

ಉಡುಪಿ ರಕ್ಷಿತಾ ಸಂಶಯಾಸ್ಪದ ಸಾವು ಪ್ರಕರಣ : ಪ್ರಿಯತಮ ಪ್ರಶಾಂತ್ ಕುಂದರ್‌ ಪೊಲೀಸ್ ಬಲೆಗೆ..!  

ಉಡುಪಿ ರಕ್ಷಿತಾ ಸಂಶಯಾಸ್ಪದ ಸಾವು ಪ್ರಕರಣ : ಪ್ರಿಯತಮ ಪ್ರಶಾಂತ್ ಕುಂದರ್‌ ಪೊಲೀಸ್ ಬಲೆಗೆ..!  

ಉಡುಪಿ : ಉಡುಪಿ‌ ಯುವತಿ ರಕ್ಷಿತಾ ನಾಯಕ್ ಸಾವು ಪ್ರಕರಣದ ಎಳೆ ಎಳೆಯನ್ನು ಪೊಲೀಸರು ಬಿಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ರಕ್ಷಿತಾಳನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಏಕಾಎಕಿ ನಾಪತ್ತೆಯಾಗಿದ್ದ ಪ್ರಶಾಂತ್ ಕುಂದರ್ ನನ್ನು ಪೊಲೀಸರು ಕೊನೆಗೂ ಹುಡುಕಿ ಬಂಧಿಸಿದ್ದಾರೆ.

ಈತ ರಕ್ಷಿತಾಳ ಪ್ರಿಯತಮ ಎಂದು ತಿಳಿದು ಬಂದಿದ್ದು, ಅಕ್ಟೋಬರ್ 24 ರಂದು ರಾತ್ರಿ ರಕ್ಷಿತಾಳನ್ನು ಉಡುಪಿ ಖಾಸಾಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಪ್ರಶಾಂತ್ ನಾಪತ್ತೆಯಾಗಿದ್ದ ನಂತರ ಚಿಕಿತ್ಸೆಗೆ ಸ್ಪಂದಿಸದ ರಕ್ಷಿತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ರಕ್ಷಿತಾ ರಕ್ಷಿತಾಳ ಪೋಷಕರು ಅನುಮಾನಾಸ್ಪದ ಸಾವು ಅಂತ ಪ್ರಕರಣ ದಾಖಲಿಸಿದ್ದರು. ನಿನ್ನೆ ರಕ್ಷಿತಾ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ರಕ್ಷಿತಾ ದೇಹದಲ್ಲಿ ಆಲ್ಕೊಹಾಲ್ ಅಂಶ ಇತ್ತು, ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು ಮರಣೋತ್ತರ ವರದಿಯಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಇಡೀ ಪ್ರಕರಣದ ವಿಷಯ ಬಯಲಿಗೆ ಬರಲಿದೆ.

ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ನಿವಾಸಿಯಾಗಿರುವ ಪ್ರಶಾಂತ್ ಕುಂದರ್ ಗೆ ಮದುವೆ ಆಗಿದ್ದು ರಕ್ಷಿತಾ ಜೊತೆ ಸಂಪರ್ಕದಲ್ಲಿದ್ದ. ಉಡುಪಿಯ ಅಂಬಾಗಿಲಿನಲ್ಲಿ ಬಾಡಿಗೆ ಮನೆ ಮಾಡಿದ್ದರು.

ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಾನು ಕೆಲಸಕ್ಕೆ ಇರುವುದಾಗಿ ಮನೆಯಲ್ಲಿ ಹೇಳಿದ್ದ ರಕ್ಷಿತಾ, ಪ್ರಶಾಂತ್ ಕುಂದರ್ ಜೊತೆ ವಾಸವಾಗಿದ್ದಳು ಎನ್ನಲಾಗಿದೆ.

ತಾವಿಬ್ಬರೂ ಅಣ್ಣ-ತಂಗಿ ಎಂದು ಮನೆ ಮಾಲೀಕರ ಜೊತೆ ಇಬ್ಬರೂ ಸುಳ್ಳು ಹೇಳಿದ್ದರು. ಕೆಲದಿನಗಳ ಹಿಂದೆ ಪ್ರಶಾಂತ್ ಕುಂದರ್ ಪತ್ನಿ ಈ ವಿಚಾರ ತಿಳಿದು ಫೋನ್ ಮಾಡಿ ರಕ್ಷಿತಾರನ್ನು ತರಾಟೆಗೆ ತೆಗೆದುಕೊಂಡಿದ್ದಳು ಎಂಬ ಮಾಹಿತಿಯನ್ನೂ ಉಡುಪಿ ಪೊಲೀಸರು ಕೊಟ್ಟಿದ್ದಾರೆ. ರಕ್ಷಿತಾ ಸಾವಿಗೆ ನಿಖರವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಬೇಕಾಗಿದೆ.

LEAVE A REPLY

Please enter your comment!
Please enter your name here

Hot Topics

ಭಾರೀ ಮಳೆ ಹಿನ್ನೆಲೆ: ಮಡಿಕೇರಿ- ಮಂಗಳೂರು ಹೆದ್ದಾರಿ ಮಧ್ಯೆ ಮಣ್ಣು ಕುಸಿತ

ಸುಳ್ಯ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮಡಿಕೇರಿ- ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ತಾಳತ್ತಮನೆ ಸಮೀಪ ರಸ್ತೆಗೆ ಮಣ್ಣು ಕುಸಿದಿದೆ.ಸದ್ಯ ಸಣ್ಣ ಪ್ರಮಾಣದ ಮಣ್ಣು ಕುಸಿದದ್ದರಿಂದ ಒಂದು ಕಡೆಯ...

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಯುವ ಕೃಷಿಕ ಜಾರಿ ಬಿದ್ದು ಕೊನೆಯುಸಿರು

ಉಡುಪಿ: ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಯುವ ಕೃಷಿಕನೊಬ್ಬ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೈರಂಪಳ್ಳಿಯ ದೂಪದಕಟ್ಟೆ ನಿನ್ನೆ ನಡೆದಿದೆ.ಮೃತ ಯುವಕನನ್ನು ಉಮೇಶ್‌ ಕುಲಾಲ್‌ (35) ಎಂದು...

ಕಾರ್ಕಳದಲ್ಲಿ ಅಕ್ರಮ ಗೋಸಾಗಾಟ: ಓರ್ವ ಪರಾರಿ-ಕಾರಿನಲ್ಲೇ ಅಸುನೀಗಿದ ದನ

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.ಉಡುಪಿಯ ಮಲ್ಪೆ...