ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯ ಮುಂದೆ ಗುರುವಾರ ಎರಡು ದೋಣಿಗಳು ಪ್ರತ್ಯಕ್ಷವಾಗಿ ಜನರಿಗೆ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಈ ದೋಣಿಗಳನ್ನು ನಿಲ್ಲಿಸಲಾಗಿರುವುದು ಜನರ ಕುತೂಹಲಕ್ಕೆ ಕಾರಣವಾಗಿತ್ತು. ಅಸಲಿ ವಿಚಾರ ಗೊತ್ತಾದ ಮೇಲೆ ಜನರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಮಣಿಪಾಲ ಠಾಣಾ ವ್ಯಾಪ್ತಿಯ ಹಿರೇಬೆಟ್ಟು ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು. ಕವನ್ ಶೆಟ್ಟಿ ಎಂಬವರ ಮೇಲೆ ಅಕ್ರಮ ಮರಳುಗಾರಿಕೆ ಆರೋಪ ಇದ್ದು, ಹಿಟಾಚಿ ಬಳಸಿ ದೋಣಿಯ ಮೂಲಕ ಮರಳು ಸಂಗ್ರಹ ಮಾಡಲಾಗುತ್ತಿತ್ತು.
ಸ್ಥಳಕ್ಕೆ ದಾಳಿ ನಡೆದ ಸಂದರ್ಭದಲ್ಲಿ ಆರೋಪಿಗಳು ಎಸ್ಕೇಪ್ ಆಗಿದ್ದು, ಪೊಲೀಸರು ಇಲ್ಲಿದ್ದ ಎಲ್ಲವನ್ನೂ ಜಪ್ತಿ ಮಾಡಿದ್ದಾರೆ. ಇದರಲ್ಲಿ ಹಿಟಾಚಿ ಹಾಗೂ ದೋಣಿ ಕೂಡಾ ಸೇರಿದ್ದು, ಅದನ್ನೂ ಕೂಡಾ ತಂದು ಠಾಣೆಯ ಮುಂದಿಟ್ಟಿದ್ದಾರೆ.
ಮಂಗಳೂರು/ಬೆಳಗಾವಿ : ನಾಗಲ್ಯಾಂಡ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಸೇನಾ ವಾಹನದಿಂದ ಯೋಧರು ಕೆಳಗೆ ಜಿಗಿದಿದ್ದು, ಯೋಧರ ಮೇಲೆಯೇ ವಾಹನ ಪಲ್ಟಿಯಾಗಿದೆ.
ಸೇನಾ ವಾಹನದ ಈ ದುರಂತದಲ್ಲಿ ಬೆಳಗಾವಿ ಯೋಧ ರವಿಚಂದ್ರ ಯಲ್ಲಪ್ಪ ತಳವಾರ (35) ಹುತಾತ್ಮರಾಗಿದ್ದಾರೆ. ರವಿ ಯಲ್ಲಪ್ಪ ತಳವಾರ ಅವರು ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದವರು.
ರವಿಚಂದ್ರ ಯಲ್ಲಪ್ಪ ತಳವಾರ ಅವರಿದ್ದ ಸೇನಾ ವಾಹನ ರಸ್ತೆ ಮಾರ್ಗವಾಗಿ ಹೊರಟ್ಟಿದ್ದಾಗ ಈ ದುರಂತ ನಡೆದಿದೆ. ಕೆಳಗೆ ಜಿಗಿದ ಯೋಧರ ಮೇಲೆ ಸೇನಾ ವಾಹನ ಪಲ್ಟಿಯಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.
16 ವರ್ಷಗಳಿಂದ ನಾಗಾಲ್ಯಾಂಡ್ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿಚಂದ್ರ ತಳವಾರ ಹುತಾತ್ಮರಾಗಿದ್ದು, ಇನ್ನೂ ನಾಲ್ಕು ವರ್ಷಗಳಲ್ಲಿ ನಿವೃತ್ತರಾಗಲಿದ್ದರು. ಮೃತರು ಪತ್ನಿ ಶೀತಲ್ ತಳವಾರ, 11 ವರ್ಷದ ಪುತ್ರಿ ಹಾಗೂ 8 ವರ್ಷದ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಇವರ ಇನ್ನೊಬ್ಬ ಚಿಕ್ಕ ಸಹೋದರ ಶಿವರಾಜ ತಳವಾರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಿಬ್ಬರು ಸಹೋದರರು ಊರಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ಮಂಗಳೂರು/ಬೆಂಗಳೂರು: ಈಗಾಗಲೇ ಬಸ್ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದ ಸರ್ಕಾರ ಮತ್ತೆ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆ ಕರ್ನಾಟಕ ಸರ್ಕಾರ ಬಜೆಟ್‌ಗೆ ಮುನ್ನವೇ ಬಿಯರ್ ದರ ಏರಿಕೆ ಮಾಡಿದೆ.
ಮದ್ಯದ ಬಾಟಲ್ಗೆ ಕನಿಷ್ಠ 10 ರಿಂದ 50 ರೂ.ವರೆಗೆ ಹೆಚ್ಚಳವಾಗಲಿದೆ. ಪ್ರತಿ ಬಿಯರ್ನಲ್ಲಿನ ಅಲ್ಕೋಹಾಲ್ ಅಂಶದ ಮೇಲೆ ದರ ಏರಿಕೆಯಾಗಲಿದ್ದು, ಜನವರಿ 20 ರಿಂದ ಇದು ಜಾರಿಯಾಗಲಿದೆ. ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟವನ್ನು ರಾಜ್ಯದಲ್ಲಿ ಉತ್ತೇಜಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಐಎಂಎಲ್ ಮದ್ಯದ ಬೆಲೆ ಶೇ 25 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬಿಯರ್ ದರ ಪರಿಷ್ಕರಿಸಲು 2024 ರ ಆಗಸ್ಟ್ನಲ್ಲಿಯೇ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಮುಖ್ಯಮಂತ್ರಿಗಳು ದರ ಏರಿಕೆಗೆ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರೀಮಿಯಂ ಬಿಯರ್ ಬೆಲೆ ಏರಿಕೆಗೆ ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ತಕರಾರು ವ್ಯಕ್ತಪಡಿಸಿದೆ. ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಬಿಯರ್ ಮಾರಾಟ ಕಡಿಮೆಯಾಗಿದೆ ಎಂದು ಹೇಳಿದೆ.
ಎರಡುಪಟ್ಟುಹೆಚ್ಚಿದ ಬಿಯರ್ ಮಾರಾಟ :
ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಬಿಯರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಗ್ರಾಹಕರ ನಡವಳಿಕೆಯಲ್ಲಿನ ಬದಲಾವಣೆ ಮತ್ತು ಬೇಸಿಗೆಯ ತಾಪಮಾನದಲ್ಲಿನ ಏರಿಕೆ ಕೂಡ ಬಿಯರ್ ಬೇಡಿಕೆ ಹೆಚ್ಚಲು ಕಾರಣ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ವರುಣ್ ಆರನ್ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹೃದಯಸ್ಪರ್ಶಿ ಪೋಸ್ಟ್ನೊಂದಿಗೆ ಎಲ್ಲಾ ರೀತಿಯ ಕ್ರಿಕೆಟ್’ನಿಂದ ನಿವೃತ್ತಿ ಘೋಷಿಸಿದ್ದಾರೆ.
ಅಂದ್ಹಾಗೆ, ವರುಣ್, 2010-11ರ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಗುಜರಾತ್ ವಿರುದ್ಧ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು.
ದುರದೃಷ್ಟವಶಾತ್, ಭಾರತೀಯ ವೇಗದ ಬೌಲರ್ ವೃತ್ತಿಜೀವನವು ಪುನರಾವರ್ತಿತ ಗಾಯಗಳಿಂದ ಬಳಲುತ್ತಿದೆ. ಯಾಕಂದ್ರೆ, ವರುಣ್ ಆರನ್, ಒಟ್ಟು 18 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನ ಪ್ರತಿನಿಧಿಸಿದ್ದು, ಕೇವಲ 29 ವಿಕೆಟ್ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಆರೋನ್ ನಿಯಮಿತವಾಗಿ ಜಾರ್ಖಂಡ್ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವರುಣ್ ಆರನ್ .!
ಗಾಯಗಳಿಂದಾಗಿ ವರುಣ್ ಆರೋನ್ ಕಳೆದ ಫೆಬ್ರವರಿಯಲ್ಲಿ ರೆಡ್-ಬಾಲ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು, ಮತ್ತು ಈಗ ಅವರು ಅಂತಿಮವಾಗಿ ಎಲ್ಲಾ ರೀತಿಯ ಆಟದಿಂದ ಹೊರಗುಳಿದಿದ್ದಾರೆ. ಜನವರಿ 10 ರಂದು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ 2024-25 ರಲ್ಲಿ ಗೋವಾ ವಿರುದ್ಧ ಜಾರ್ಖಂಡ್ ಪರ ವೇಗದ ಬೌಲರ್ ತಮ್ಮ ಕೊನೆಯ ಪಂದ್ಯವನ್ನ ಆಡಿದರು.
ತಮ್ಮ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಮಯವನ್ನ ಕರೆದ ಆರೋನ್ ಇನ್ಸ್ಟಾಗ್ರಾಮ್’ನಲ್ಲಿ, “ಕಳೆದ 20 ವರ್ಷಗಳಿಂದ, ನಾನು ವೇಗವಾಗಿ ಬೌಲಿಂಗ್ ಮಾಡುವ ಅವಸರದಲ್ಲಿ ಬದುಕಿದ್ದೇನೆ, ಉಸಿರಾಡಿದ್ದೇನೆ ಮತ್ತು ಅಭಿವೃದ್ಧಿ ಹೊಂದಿದ್ದೇನೆ. ಇಂದು, ಅಪಾರ ಕೃತಜ್ಞತೆಯೊಂದಿಗೆ, ನಾನು ಪ್ರತಿನಿಧಿ ಕ್ರಿಕೆಟ್ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತೇನೆ” ಎಂದು ಹೇಳಿದ್ದಾರೆ.