Connect with us

LATEST NEWS

ಪತಂಜಲಿ ಯೋಗಪೀಠಕ್ಕೆ ಉಡುಪಿ ಪೇಜಾವರ ಶ್ರೀ ಭೇಟಿ

Published

on

ಪತಂಜಲಿ ಯೋಗಪೀಠಕ್ಕೆ ಉಡುಪಿ ಪೇಜಾವರ ಶ್ರೀ ಭೇಟಿ

ಉತ್ತರಾಖಂಡ ಪ್ರವಾಸದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಗಳು ಈಗಾಗಲೇ ರಾಮ ಜನ್ಮಭೂಮಿ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿದ್ದಾರೆ.

ಇನ್ನು ಇಂದು ಹರಿದ್ವಾರಲ್ಲಿರುವ ಪೇಜಾವರ ಶ್ರೀ ಪತಂಜಲಿ ಯೋಗಪೀಠಕ್ಕೆ ಭೇಟಿ ನೀಡಿದರು. ಈ ಸಂದರ್ಭ ರಾಮ್ ದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣರು ಶ್ರೀಗಳನ್ನು ಗೌರವಿಸಿ, ವಿಶೇಷವಾಗಿ ಸ್ಮರಿಸಿದರು .

ಇದೇ ವೇಳೆ ಪತಂಜಲಿ ಆಯುರ್ವೇದ ಆಸ್ಪತ್ರೆ , ಆಯುರ್ವೇದ ವನ , ಪತಂಜಲಿ ಪೀಠದ ಉತ್ಮನ್ನ ಗಳ ಮಳಿಗೆಗಳಿಗೆ ಭೇಟಿ ನೀಡಿ ಎಲ್ಲ ವಿಭಾಗಗಳನ್ನು ಅತ್ಯಂತ ಕುತೂಹಲದಿಂದ  ವೀಕ್ಷಿಸಿ ಅತೀವ ಸಂತಸ ವ್ಯಕ್ತ ಪಡಿಸಿದರು.

ಡಾ ಲಲಿತ್ ಮೋಹನ್ ಮಿಶ್ರಾರವರು ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಶ್ರೀಗಳಿಗೆ ಪರಿಚಯಿಸಿದರು. ಈ ವೇಳೆ ಶ್ರೀಗಳವರ ಶಿಷ್ಯರು ಆಪ್ತ ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು.

ಪತಂಜಲಿ ಬಾಬಾ ರಾಮ್ ದೇವ್ ರ ಕಾರ್ಯಕ್ಕೆ ಪೇಜಾವರ ಶ್ರೀಗಳು ಶ್ಲಾಘಿಸಿದರು..

 

 

LATEST NEWS

ಕ್ರೇಟ್‌ ಗೆ ಪಿಕಪ್ ಢಿಕ್ಕಿ-ಸಾವಿರಾರು ರೂ. ಮೌಲ್ಯದ ನಂದಿನಿ ಹಾಲು ರಸ್ತೆ ಪಾಲು

Published

on

ಉಡುಪಿ: ಮಿಲ್ಕ್ ಬೂತ್ ಎದುರು ಕ್ರೇಟ್‌ನಲ್ಲಿ ಇರಿಸಿದ್ದ ನಂದಿನಿ ಹಾಲಿನ ಶೇಖರಣೆಗೆ ಪಿಕಪ್‌ ವಾಹನವೊಂದು ಢಿಕ್ಕಿ ಹೊಡೆದು ಸಾವಿರಾರು ರೂಪಾಯಿ ಮೌಲ್ಯದ ನಂದಿನಿ ಹಾಲು ರಸ್ತೆ ಪಾಲಾದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ಇಂದು ನಡೆದಿದೆ.

ಈ ಅಪಘಾತದಲ್ಲಿ ಬೈಕ್ ಹಾಗೂ ಸೈಕಲ್ ಸವಾರರಿಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಚಾಲಕನು ದ್ವಿಚಕ್ರ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಇರಿಸಿದ್ದ ಹಾಲಿನ ಕ್ರೇಟ್‌ಗಳಿಗೆ ಪಿಕಪ್‌ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹಾಲಿನ ಪ್ಯಾಕೆಟ್‌ ಶೇಖರಿಸಿಟ್ಟಿದ್ದ ಕ್ರೇಟ್‌ಗಳೆಲ್ಲ ಚೆಲ್ಲಾ ಪಿಲ್ಲಿಯಾಗಿದ್ದು, ಅಪಾರ ಪ್ರಮಾಣದ ಹಾಲು ರಸ್ತೆ ಪಾಲಾಗಿದೆ. ಪಿಕಪ್ ವಾಹನ ಚಾಲಕನ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಪಿಕಪ್‌ ಚಾಲಕ ಪರಾರಿಯಾಗಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Kundapura: ಲಂಚ ಪ್ರಕರಣ- ಸಬ್‌ ಇನ್‌ಸ್ಪೆಕ್ಟ್ರರ್ ಶಂಭುಲಿಂಗಯ್ಯ ಅಮಾನತು

Published

on

ಕುಂದಾಪುರ: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಚ್ಚಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕ‌ರ್ ವಿರುದ್ದ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ದದ ದೂರಿಗೆ ಬಿ ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು. ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್ ಪಿ ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.

Continue Reading

BANTWAL

ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!

Published

on

ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.

ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.


ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending