Connect with us

    LATEST NEWS

    Udupi: “ಬಿಜೆಪಿಯಿಂದ ಇದುವರೆಗೂ ಯಾವ ಹಿರಿಯ ನಾಯಕರೂ ನನಗೆ ಕರೆ ಮಾಡಿಲ್ಲ” – ಜಗದೀಶ್ ಶೆಟ್ಟರ್‌ 

    Published

    on

    ಬಿಜೆಪಿಯಿಂದ ಇದುವರೆಗೂ ಯಾವ ಹಿರಿಯ ನಾಯಕರೂ ನನಗೆ ಕರೆ ಮಾಡಿಲ್ಲ. ಅಮಿತ್ ಶಾ, ಮತ್ತೊಬ್ಬರು ಯಾರು ಕೂಡಾ ಕರೆ ಮಾಡಿಲ್ಲ. ಈಗ ಕರ್ನಾಟಕ ಬಿಜೆಪಿ ಲೀಡರ್ ಲೆಸ್ ಆಗಿದೆ ಎಂದು ಸ್ತುತ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉಡುಪಿಯ ಸುದ್ದಿಗೋಷ್ಟಿಯಲ್ಲಿ  ಹೇಳಿದರು. 

    ಉಡುಪಿ: ಬಿಜೆಪಿಯಿಂದ ಇದುವರೆಗೂ ಯಾವ ಹಿರಿಯ ನಾಯಕರೂ ನನಗೆ ಕರೆ ಮಾಡಿಲ್ಲ. ಅಮಿತ್ ಶಾ, ಮತ್ತೊಬ್ಬರು ಯಾರು ಕೂಡಾ ಕರೆ ಮಾಡಿಲ್ಲ. ಈಗ ಕರ್ನಾಟಕ ಬಿಜೆಪಿ ಲೀಡರ್ ಲೆಸ್ ಆಗಿದೆ ಎಂದು ಸ್ತುತ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉಡುಪಿಯ ಸುದ್ದಿಗೋಷ್ಟಿಯಲ್ಲಿ  ಹೇಳಿದರು.

    ಬಳಿಕ ಮಾತನಾಡಿದ ಅವರು ರಾಜ್ಯಾಧ್ಯಕ್ಷರನ್ನು ಇನ್ನೂ ರಿಪ್ಲೇಸ್ ಮಾಡಲು ಸಾಧ್ಯವಾಗಿಲ್ಲ.

    ಅಮಿತ್‌ ಶಾ ಅವರು ಜಗದೀಶ್‌ ಶೆಟ್ಟರ್ ಅವರಿಗೆ ಫೋನ್‌ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವ ಗಾಳಿ ಸುದ್ದಿ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಅವರು ಅದಕ್ಕೆ ಸ್ಪಷ್ಟನೆ ನೀಡಿದರು.

    ಬಿಜೆಪಿಗೆ ಒಬ್ಬ ನಾಯಕ ಎಂಬುದು ಈಗ ಇಲ್ಲ. ಬೇರೆ ಬೇರೆ ಕಡೆ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ಭೇಟಿಯಾಗುತ್ತಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿ ಇನ್ನೂ ದಯನೀಯ ಪರಿಸ್ಥಿತಿಗೆ ಹೋಗಲಿದೆ. ಬಿಜೆಪಿ ಒಳಗೆ ಸಾಕಷ್ಟು ಜನ ನೊಂದಿದ್ದಾರೆ ಸಂಕಟ ಪಡುತ್ತಿದ್ದಾರೆ.

    ಬಿಜೆಪಿಯನ್ನು ಬಿಟ್ಟು ಹೊರಗೆ ಬರಲು ಬಹಳಷ್ಟು ಜನ ತಯಾರಾಗಿದ್ದಾರೆ ಎಂದರು. ನನಗೆ ಬಿಜೆಪಿ ಹೈಕಮಾಂಡ್ ನಿಂದ ಯಾವುದೇ ಕರೆ ಬಂದಿಲ್ಲ.

    ಕರೆ ಬಾರದೆ ಈ ಎಲ್ಲಾ ಚರ್ಚೆಗಳು ಯಾಕೆ ಎಂದು ಪ್ರಶ್ನಿಸಿದ ಅವರು ಕರೆ ಮಾಡಿದರೆ ನಾನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.

    ಕರೆ ಬರುವ ಮೊದಲು ಯಾಕೆ ಚರ್ಚೆ ಮಾಡಬೇಕು ಎಂದ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.

    ಕಾಂಗ್ರೆಸ್ 12 ರಿಂದ 15 ಸ್ಥಾನ ಗೆಲ್ಲುವುದು ನಿಶ್ಚಿತ. ಸದ್ಯದ ಪರಿಸ್ಥಿತಿ ನೋಡಿದ್ರೆ 15ಕ್ಕಿಂತ ಹೆಚ್ಚು ಸ್ಥಾನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾಂಗ್ರೆಸ್ ಸೇರಲು ರಾಜ್ಯದ ಎಲ್ಲಾ ತಾಲೂಕು ಜಿಲ್ಲೆಯ ಜನ ಉತ್ಸುಕರಾಗಿದ್ದಾರೆ ಎಂದರು.

    Click to comment

    Leave a Reply

    Your email address will not be published. Required fields are marked *

    LATEST NEWS

    Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು

    Published

    on

    ಭಂಡಾರ ಔತಣದಲ್ಲಿ ನಾಲ್ವರು ಯುವಕರ ಗುಂಪು ಮಿಂಚಿನ ವೇಗದಲ್ಲಿ ಆಹಾರ ಬಡಿಸುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸಳೆದಿದೆ.

    X ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ನಲ್ಲಿ, ಕೆಂಪು ಶರ್ಟ್ ಮತ್ತು ಕಪ್ಪು ಪ್ಯಾಂಟ್‌ ಧರಿಸಿರುವ ನಾಲ್ವರು ಯುವಕರು ಜನರ ಸಾಲಿನಲ್ಲಿ ವೇಗವಾಗಿ ಚಲಿಸುತ್ತ ಪೇಪರ್ ಪ್ಲೇಟ್, ಕಪ್ ಮತ್ತು ಬೌಲ್‌ಗಳನ್ನು ಹಾಕುವುದನ್ನು ನೋಡಬಹುದಾಗಿದೆ.

    ನಿಖರತೆಯೊಂದಿಗೆ ಏಕಕಾಲದಲ್ಲಿ ಇವರುಗಳು ಆಹಾರ ಬಡಿಸುವುದನ್ನು ವಿಡಿಯೋ ಒಳಗೊಂಡಿದೆ. ಮೊದಲ ಗುಂಪು ಕಾರ್ಯನಿರ್ವಹಿಸುತ್ತಿದ್ದಂತೆ, ಎರಡನೇ ಗುಂಪು ಅದೇ ವೇಗದ ಚಲನೆಯನ್ನು ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆಯುತ್ತದೆ. “MBBS (ಮಾಸ್ಟರ್ ಇನ್ ಭಂಡಾರ ಮತ್ತು ಬ್ಯಾಚುಲರ್ ಆಫ್ ಸರ್ವಿಂಗ್)” ಎಂಬ ಶೀರ್ಷಿಕೆಯ ಈ ವೀಡಿಯೋ ಬಳಕೆದಾರರು ಬಡಿಸುವ ಅವರ ವೇಗ ಮತ್ತು ಕೌಶಲ್ಯದ ಬಗ್ಗೆ ವಿಸ್ಮಯ ವ್ಯಕ್ತಪಡಿಸಿದ್ದಾರೆ.

    Watch Video:

    Continue Reading

    LATEST NEWS

    ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ

    Published

    on

    ಮೈಸೂರು: ಕರ್ನಾಟಕದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿದ್ಯಾಸಿರಿ ಯೋಜನೆಯಡಿ ಒದಗಿಸುವ 1500 ರೂ. ವಿದ್ಯಾರ್ಥಿ ವೇತನವನ್ನು ಮುಂದಿನ ವರ್ಷದಿಂದ 2000ಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

    ಮೈಸೂರಿನ ಸಿದ್ದಾರ್ಥನಗರದ ಕನಕಭವನದಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಜೀವನದ ಅನುಭವದಿಂದ ಮೂಡಿಬಂದ ಯೋಜನೆಗಳು ಇವು ಎಂದು ತಿಳಿಸಿದರು.

    ಪ್ರೌಢಶಾಲೆಗೆ ಬರುವವರೆಗೂ ತಾವು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಾಲು ಕೊಡಲಾಯಿತು. ಪ್ರಸ್ತುತ ವಾರದಲ್ಲಿ ಆರು ದಿನಗಳು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ ಎಂದರು. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಅನ್ನಭಾಗ್ಯ ಸಿಗಲಿ ಎನ್ನುವ ಉದ್ದೇಶದಿಂದಲೇ ಆ ಯೋಜನೆ ಶುರು ಮಾಡಿದ್ದಾಗಿ ಹೇಳಿದರು.

    ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿಯ ಸ್ವತ್ತು ಕೂಡಾ ಅಲ್ಲ. ಶೇಕಡ 90 ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿಎಸ್‌ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

    Continue Reading

    Baindooru

    ಜಾರ್ಖಂಡ್‌ನಲ್ಲಿ ಬಿಗ್‌ ಟ್ವಿಸ್ಟ್‌; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ

    Published

    on

    ರಾಂಚಿ: ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಗಡಿ ದಾಟಿದೆ.

    ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾದ ನಂತರ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯದ 81 ಸ್ಥಾನಗಳ ಪೈಕಿ 51ರಲ್ಲಿ ಇಂಡಿಯಾ ಮೈತ್ರಿಕೂಟ ಮುಂದಿದೆ. 28 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ.

    ಜಾರ್ಖಂಡ್ ವಿಧಾನಸಭೆಗೆ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಿದೆ. ರಾಜ್ಯಕ್ಕೆ ನ.13 ರಂದು ಮೊದಲ ಹಂತದ ಮತದಾನವು 43 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು.

    ಮ್ಯಾಟ್ರಿಜ್ ಪ್ರಕಾರ, ಎನ್‌ಡಿಎ 42-47 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಜೆಎಂಎಂ ನೇತೃತ್ವದ ಮೈತ್ರಿಕೂಟವು 25-30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ, ಬಹುಪಾಲು ಸಮೀಕ್ಷೆಗಳು ಉಲ್ಟ ಆದಂತಿದೆ. ಆದಾಗ್ಯೂ, ಆಕ್ಸಿಸ್ ಮೈ ಇಂಡಿಯಾ ಮತ್ತು ಪಿ ಮಾರ್ಕ್ ಸಮೀಕ್ಷೆ ಭಿನ್ನವಾಗಿತ್ತು. ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್‌ 49-59 ಮತ್ತು ಎನ್‌ಡಿಎ ಮೈತ್ರಿಕೂಟ 37-47 ಸ್ಥಾನ ಪಡೆಯಬಹುದು ಎಂದು ಅಂದಾಜಿಸಿದ್ದವು. ಬಹುಪಾಲು ಇದು ನಿಜವಾದಂತೆ ಕಾಣುತ್ತಿದೆ.

    Continue Reading

    LATEST NEWS

    Trending