ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಯುವಕ ಹಾಗೂ ಯುವತಿಯರ ತಂಡ ನೀರಿನಲ್ಲಿ ಆಟವಾಡುವಾಗ ಯುವತಿಯೊಬ್ಬಳು ನೀರುಪಾಲಾಗಿದ್ದಾಳೆ. ಹಾಗೂ ಮೂವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರ ಸ್ಥಿತಿಯೂ ಗಂಭೀರವಾಗಿದೆ.
ಇಂದು ಮಲ್ಪೆ ಕಡಲ ತೀರಕ್ಕೆ ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ಆಗಮಿಸಿದ್ದರು. ಮಲ್ಪೆ ಬೀಚ್ ನ ನೀರಿನಲ್ಲಿ ಆಟವಾಡುತ್ತಿದ್ದರು. ಆದರೆ ಸ್ಥಳೀಯರು ನೀರಿಗೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಇವರು ಕೇಳದೆ ಹೋದ ಪರಿಣಾಮ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ. ನಾಲ್ಕು ಮಂದಿಯ ಪೈಕಿ ಒರ್ವ ಯುವತಿ ನಾಪತ್ತೆಯಾಗಿದ್ದಳೆ. ಉಳಿದವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಲ್ಪೆ ಪೊಲೀಸರು ಘಟನೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.