ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆಂದು ಸಂದರ್ಶನ ನಡೆಸಿ 6.90 ಲಕ್ಷ ರೂ ಪಡೆದು ಹಣ ಹಾಗೂ ಉದ್ಯೋಗ ನೀಡದೇ ವಂಚಿಸಿದ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ಜಯರಾಜ್ ಆಚಾರ್ಯ ಎಂಬುವವರು ವಾಟ್ಸ್‌ಅಪ್‌ನಲ್ಲಿ ಬಂದ ಸಂದೇಶ ನಂಬಿ ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ.
ಈ ವೇಳೆ ವ್ಯಕ್ತಿಯೋರ್ವ ತಾನು ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ನಂಬಿಸಿ, ಆನ್ ಲೈನ್ ಮುಖೇನ ಸಂದರ್ಶನ ನಡೆಸಿದ್ದಾನೆ.
ವೀಸಾ ಮಾಡಿಸಲು ಚಾರ್ಜ್ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ, ಒಟ್ಟು ರೂ. 6,90,343/- ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ವೀಸಾ ನೀಡದೇ ಪಡೆದ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.