Connect with us

LATEST NEWS

ಹಿಜಾಬ್ ವಿದ್ಯಾರ್ಥಿನಿಯರ ಗಝಬ್ ಕಹಾನಿ : ದಾಖಲಾತಿ ವೇಳೆ ಸಮವಸ್ತ್ರ ನಿಯಮಕ್ಕೆ ಸಹಿ-ಈಗ ಸಮರ..!!?

Published

on

ಉಡುಪಿ : ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಇದೀಗ ಕರಾವಳಿ ದಾಟಿ ರಾಜ್ಯದ ಹಲವು ಕಾಲೇಜುಗಳಿಗೆ ವ್ಯಾಪಿಸಿದೆ.

ಸದ್ಯ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ ಈ ಮಧ್ಯೆ ಇಂದು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಮಧ್ಯೆ ಹಿಜಾಬ್‌ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ದಾಖಲಾತಿ ಸಂದರ್ಭ ಸಮವಸ್ತ್ರ ನಿಯಮಕ್ಕೆ ಸಹಿ ಹಾಗಿದ ಬಗ್ಗೆ ದಾಖಲೆಗಳು ಬಹಿರಂಗವಾಗಿದೆ, ಉಡುಪಿ ಕಾಲೇಜಿನಲ್ಲಿ ಹಿಜಾಬ್ ಹಿಂದಿನಿಂದಲೂ ವಿದ್ಯಾರ್ಥಿನಿಯರು ಧರಿಸುತ್ತಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಈ ವಿವಾದ ಆರಂಭವಾಗಿದೆ ಅಂತಾ ಕಾಲೇಜು ಆಡಳಿತ ಮಂಡಳಿ ಹೇಳುತ್ತಿದೆಯಾದರೂ, ವಿದ್ಯಾರ್ಥಿನಿಯರು ಮಾತ್ರ ನಾವು ಹಿಜಾಬ್ ಅನ್ನು ಹಿಂದಿನಿಂದಲೂ ಧರಿಸುತ್ತಿದ್ದೆವು. ಇದು ನಮ್ಮ ಧಾರ್ಮಿಕ ಸ್ವಾತಂತ್ರ್ಯ ಅಂತಾ ಹೇಳುತ್ತಿದ್ದಾರೆ.

ಆದರೆ ವಿದ್ಯಾರ್ಥಿನಿಯರು ಸಮವಸ್ತ್ರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ಕಾಲೇಜಿಗೆ ಪ್ರವೇಶಾತಿ ಆಗುವ ಸಂದರ್ಭದಲ್ಲೇ ಸಹಿ ಮಾಡಿರುವ ಬಗ್ಗೆ ಸದ್ಯ ದಾಖಲೆಗಳು ಬಿಡುಗಡೆಯಾಗಿವೆ.

ಉಡುಪಿಯ ಕಾಲೇಜಿನಲ್ಲಿ ಎಂಟೂ ವಿದ್ಯಾರ್ಥಿನಿಯರೂ ಪ್ರವೇಶಾತಿ ಸಂದರ್ಭದಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂಬ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ದಾಖಲೆಗಳು ಬಹಿರಂಗವಾಗಿದೆ.

ಸದ್ಯ ಹಿಜಾಬ್ ಬಗ್ಗೆ ಧ್ವನಿ ಎತ್ತಿರುವ ರೇಶಾಂ, ಮುಷ್ಕಾನ್, ಅಶ್ರಾಜ್, ಆಲಿಯಾ, ಹಜ್ರಾ, ಆಯಿಷಾ, ಬೀಬಿ ಆಯಿಷಾ ಮತ್ತು ಶಫಾ ಎಂಬ ವಿದ್ಯಾರ್ಥಿನಿಯರು ಪ್ರವೇಶಾತಿ ಸಂದರ್ಭದಲ್ಲಿ ಸಹಿ ಹಾಕಿರುವ ದಾಖಲೆಗಳು ಹೊರಬಿದ್ದಿದೆ.

ಈ ಕಾಲೇಜು ನಿಯಾಮಾವಳಿ ಪಾಲನೆಯ ತಿಳುವಳಿಕೆ ಪತ್ರದಲ್ಲಿ ಒಂಭತ್ತನೇ ಅಂಶ “ವಾರದ ಎಲ್ಲಾ ದಿನಗಳಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವುದು ಕಡ್ಡಾಯ’ ಎಂಬ ಅಂಶ ಉಲ್ಲೇಖವಾಗಿದ್ದು, ಈ ಸೂಚನೆಗಳಿಗೆ ಅಂದು ವಿದ್ಯಾರ್ಥಿನಿಯರು ಒಪ್ಪಿ ದಾಖಲೆಗಳಿಗೆ ಸಹಿ ಹಾಕಿದ್ದಾರೆ.

ಈ ಸೂಚನಾ ಪತ್ರಕ್ಕೆ ಹೆತ್ತವರು/ಪೋಷಕರು ಕೂಡಾ ಸಹಿ ಹಾಕಿದ್ದು, ಕಾಲೇಜಿನ ಸೂಚನಾ ಪ್ರಕಾರವಾಗಿಯೇ ಮಕ್ಕಳನ್ನೂ ಕಾಲೇಜಿಗೆ ಕಳುಹಿಸಲು ಒಪ್ಪಿದ್ದರು. ಆದರೆ ಈಗ ಈ ಎಂಟು ವಿದ್ಯಾರ್ಥಿಗಳು ಸಮವಸ್ತ್ರ ನಿಯಮಕ್ಕೆ ವಿರೋಧ ಮಾಡುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

LATEST NEWS

ತೆಂಗಿನಕಾಯಿ ತುರಿಯಲು ಕಷ್ಟ ಆಗ್ತಿದ್ಯಾ? ಜಸ್ಟ್​ ಹೀಗೆ ಮಾಡಿದರೆ ಸಾಕು..!

Published

on

ತೆಂಗಿನಕಾಯಿ ಹಾಕಿ ಮಾಡುವ ಸಾಂಬಾರ್‌ ರುಚಿ ಎನಿಸಿದರೂ, ಕಾಯಿ ಒಡೆದು ಅದನ್ನು ತುರಿದು ಸಾಂಬಾರ್‌ ಮಾಡೋಕೆ ಹಲವರಿಗೆ ಬೇಸರ. ತೆಂಗಿನಕಾಯಿ ಒಡೆಯಲು ಸ್ವಲ್ಪ ಬಲ ಪ್ರಯೋಗ ಮಾಡಬೇಕು. ಆಗ ಅದು ಈಸಿಯಾಗಿ ತೆರೆದುಕೊಳ್ಳುತ್ತದೆ. ಇನ್ನೂ ಅದರ ಚಿಪ್ಪು (Coconut Shell) ಮತ್ತು ತಿರುಳನ್ನು ಬೇರ್ಪಡಿಸಲು ನೀವು ಬಲ ಪ್ರಯೋಗ ಮಾಡಬೇಕು ಅಂತಿಲ್ಲ, ಸ್ವಲ್ಪ ಬುದ್ಧಿ ಉಪಯೋಗಿಸಿ ಕೆಲ ವಿಧಾನಗಳನ್ನು ಅನುಸರಿಸಿದರೆ, ಸುಲಭವಾಗಿ ಚಿಪ್ಪಿನಿಂದ ಕಾಯಿ ಬಿಟ್ಟುಕೊಳ್ಳುತ್ತದೆ. ಹೀಗಾಗಿ ತೆಂಗಿನ ಚಿಪ್ಪಿನಿಂದ ಕಾಯಿ ಹೊರ ತೆಗೆಯಲು ಇಲ್ಲಿ ನಾವು ಹೇಳಿರೋ ಈ ಟಿಪ್ಸ್‌ ಫಾಲೋ ಮಾಡಿ ಸಾಕು.

ಶೆಲ್‌ನಿಂದ ತೆಂಗಿನಕಾಯಿ ತಿರುಳನ್ನು ಸುಲಭವಾಗಿ ತೆಗೆಯುವ ವಿಧಾನಗಳು:

ತೆಂಗಿನಕಾಯಿಯನ್ನು ಒಡೆಯಿರಿ:

ಮೊದಲನೇಯದಾಗಿ ತೆಂಗಿನ ಕಾಯಿಯನ್ನು ಅದರ ಮಧ್ಯಭಾಗದಲ್ಲಿ ಸುತ್ತಿಗೆಯಂತಹ ವಸ್ತು ಬಳಸಿ ಸರಿಯಾಗಿ ಭಾಗ ಮಾಡಿಕೊಳ್ಳಿ. ಆಗ ಇದು ಎರಡು ಭಾಗವಾಗುತ್ತದೆ. ನಂತರ ಈ ಕಾಯಿಯ ತಿರುಳನ್ನು ನಯವಾದ ಚಾಕುಗಳನ್ನು ಬಳಸುವ ಮೂಲಕ ಚಿಪ್ಪಿನಿಂದ ಬೇರ್ಪಡಿಸಬಹುದು. ತದನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳುವ ಮೊದಲು ಸಣ್ಣ, ಸಣ್ಣ ಪೀಸ್‌ ಮಾಡಿಕೊಂಡು ಮಸಾಲೆ ಹಾಕಿ ಮಿಶ್ರಣ ಮಾಡಿ. ಆಗ ನಿಮಗೆ ಕಾಯಿ ನಯವಾಗಿ ರುಬ್ಬಿಕೊಳ್ಳುತ್ತದೆ.

ಒಲೆಯನ್ನು ಬಳಸಿ:

ಶೆಲ್‌ ತುಂಬಾ ಗಟ್ಟಿ ಇದ್ದು, ಇವೆರೆಡನ್ನು ಬೇರ್ಪಡಿಸಲು ಕಷ್ಟವಾಗ್ತಿದ್ದರೆ ಒಲೆಯನ್ನು ಬಳಸಿ. ಒಲೆಯ ಶಾಖವು ಶೆಲ್ ಅನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ತೆಂಗಿನ ತಿರುಳನ್ನು ತೆಗೆಯಲು ಸುಲಭವಾಗುತ್ತದೆ. ಇಲ್ಲಿ ತೆಂಗಿನಕಾಯಿ ಕಣ್ಣುಗಳಲ್ಲಿ ರಂಧ್ರ ಮಾಡಿ, ನೀರನ್ನು ಹೊರ ತೆಗೆಯಿರಿ. ನಂತರ ತೆಂಗಿನಕಾಯಿಯನ್ನು ಬೇಕಿಂಗ್ ಶೀಟ್‌ನಲ್ಲಿ ಇರಿಸಿ. ತೆಂಗಿನಕಾಯಿಯನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟಿರುವ ಒಲೆಯಲ್ಲಿ ಹಾಕಿ ಮತ್ತು ಸುಮಾರು 10-15 ನಿಮಿಷಗಳ ಕಾಲ ಅದನ್ನು ಬಿಸಿ ಮಾಡಿ.

ಹೀಗೆ ಮಾಡೋದರಿಂದ ಚಿಪ್ಪು ಮತ್ತು ಕಾಯಿ ಸುಲಭವಾಗಿ ಬೇರ್ಪಡುತ್ತದೆ. ತೆಂಗಿನಕಾಯಿ ತಣ್ಣಗಾದ ನಂತರ ಅದರ ಮೇಲೆ ಸುತ್ತಿಗೆಯಿಂದ ಸ್ವಲ್ಪ ಟ್ಯಾಪ್‌ ಮಾಡುವ ಮೂಲಕವೂ ನೀವು ಚಿಪ್ಪಿನಿಂದ ಸುಲಭವಾಗಿ ಕಾಯಿಯನ್ನು ತೆಗೆದುಕೊಳ್ಳಬಹುದು.

ತೆಂಗಿನಕಾಯಿಯನ್ನು ಫ್ರೀಜ್‌ ಮಾಡಿ:

ತೆಂಗಿನ ಕಾಯಿಯನ್ನು ಅದರ ಚಿಪ್ಪಿನಿಂದ ಬೇರ್ಪಡಿಸಲು ಇದೊಂದು ಸುಲಭ ವಿಧಾನ. ಕಾಯಿಯನ್ನು ಒಡೆದ ನಂತರ ಸ್ವಲ್ಪ ಹೊತ್ತು ಆ ಹೋಳುಗಳನ್ನು ಡೀಪ್‌ ಫ್ರೀಜರ್‌ನಲ್ಲಿಡಿ. ಈ ತಂಪಾದ ತಾಪಮಾನವು ತೆಂಗಿನ ತಿರುಳನ್ನು ಸ್ವಲ್ಪಮಟ್ಟಿಗೆ ಸಂಕುಚಿತಗೊಳಿಸುತ್ತದೆ ಮತ್ತು ಶೆಲ್‌ನಿಂದ ತಿರುಳನ್ನು ಹೊರ ತೆಗೆಯಲು ಸುಲಭ ಮಾಡುತ್ತದೆ ಈ ವಿಧಾನಗಳು ನಿಮಗೆ ಕಾಯಿ ತುರಿಯುವ ತಾಪತ್ರಯವನ್ನು ಕಮ್ಮಿ ಮಾಡಿ, ನಿಮ್ಮ ಕೆಲಸವನ್ನು ಸುಲಭ ಮಾಡುತ್ತದೆ.

Continue Reading

LATEST NEWS

ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಇಲ್ಲ: ಸರಕಾರದ ಆದೇಶ

Published

on

ಮಂಗಳೂರು/ಲಕ್ನೋ : “ಹೆಲ್ಮೆಟ್ ಧರಿಸದೇ ಇದ್ದರೆ ಪೆಟ್ರೋಲ್ ಇಲ್ಲ” ಎಂಬ ನೀತಿ ಜಾರಿಗೊಳಿಸಲು ಉತ್ತರಪ್ರದೇಶ ಸರಕಾರ ಮುಂದಾಗಿದೆ.

ರಾಜ್ಯದ ನಗರಗಳ ಮಿತಿಯಲ್ಲಿ ನಿಯಮ ಜಾರಿಗೆ ಪ್ರಸ್ತಾವಿಸಲಾಗಿದೆ. ಇದರ ಜೊತೆಗೆ ಹಿಂಬದಿ ಸವಾರರೂ ಸೇರಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಇಂಧನ ನೀಡದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಛೇ! ಇದೆಂಥ ಅಮಾನವೀಯ ಕೃ*ತ್ಯ; ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿ*ಡಿಗೇಡಿಗಳು

ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೂ ರಾಜ್ಯ ಸರಕಾರ ಸೂಚಿಸಿದೆ.

Continue Reading

LATEST NEWS

ಇಂದಿನಿಂದ ಮಹಾ ಕುಂಭಮೇಳ; ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಭಾರತ

Published

on

ಮಂಗಳೂರು/ಉತ್ತರ ಪ್ರದೇಶ : “ಹಿಂದೆ ನಡೆದಿದ್ದ ಪೂರ್ಣ ಮಹಾಕುಂಭ ಮೇಳದ ಸಮಯದಲ್ಲಿ ಈಗಿನ ಯಾರೂ ಬದುಕಿರಲಿಲ್ಲ. ಮುಂದೆ ನಡೆಯುವ ಮಹಾ ಕುಂಭಮೇಳದ ಸಮಯಕ್ಕೆ ಸಹ ನಾವ್ಯಾರೂ ಬದುಕಿರುವುದಿಲ್ಲ”. 144 ವರ್ಷಗಳ ನಂತರ ನಡೆಯುತ್ತಿರುವ ಐತಿಹಾಸ ಪ್ರಸಿದ್ಧ ಮಹಾ ಕುಂಭಮೇಳಕ್ಕೆ ಪ್ರಯಾಗ್‌ ನಗರ ಸಜ್ಜಾಗಿದೆ. ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ‘ಮಹಾಕುಂಭ ಮೇಳ’ ಎಂದು ಕರೆಯಲಾಗುತ್ತದೆ.  44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ ಇಂದಿನಿಂದ (ಜನವರಿ 13) ಪ್ರಾರಂಭವಾಗಿ ಫೆಬ್ರವರಿ 26 ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ.

ಈ ಪವಿತ್ರ ಕಾರ್ಯಕ್ರಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದ್ದು, ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಕುಂಭಮೇಳದ ಮೂಲವು ಹಿಂದೂ ಪುರಾಣಗಳಲ್ಲಿ, ವಿಶೇಷವಾಗಿ ಸಮುದ್ರ ಮಂಥನದ ಕಥೆಯಲ್ಲಿದೆ. ದೇವತೆಗಳು (ದೇವರುಗಳು) ಮತ್ತು ಅಸುರರು (ರಾಕ್ಷಸರು) ಅಮರತ್ವದ ಅಮೃತವಾದ ಅಮೃತವನ್ನು ಪಡೆಯುವ ಪ್ರಯತ್ನದಲ್ಲಿದ್ದಾಗ ಅಮೃತದಿಂದ ತುಂಬಿದ ಕುಂಭ (ಮಡಿಕೆ) ಹೊರಹೊಮ್ಮಿತು. ರಾಕ್ಷಸರಿಂದ ಅದನ್ನು ರಕ್ಷಿಸಲು, ಮೋಹಿನಿಯ ವೇಷದಲ್ಲಿರುವ ಭಗವಾನ್ ವಿಷ್ಣುವು ಮಡಿಕೆಯನ್ನು ಸ್ವಾಧೀನಪಡಿಸಿಕೊಂಡ. ಈ ರೀತಿ ವಶಪಡಿಸಿಕೊಂಡು ಕೊಂಡೊಯ್ಯುತ್ತಿದ್ದಾಗ ಅಮೃತದ ಹನಿಗಳು ಬಿದ್ದ ನಾಲ್ಕು ಸ್ಥಳಗಳೇ ಇಂದಿನ ಪ್ರಯಾಗರಾಜ್‌, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಕ್ಷೇತ್ರಗಳಾಗಿವೆ. ಈ ಸ್ಥಳಗಳು ಪವಿತ್ರ ಸ್ಥಳಗಳಾಗಿ  ಪೂಜಿಸಲ್ಪಡುವುದರಿಂದ ಅಲ್ಲಿಯೇ ಕುಂಭಮೇಳವನ್ನು ಆಚರಿಸಲಾಗುತ್ತದೆ.

ಕುಂಭ ಮೇಳೆ ನಡೆಯುವ ಸಂಧರ್ಭದಲ್ಲಿ ನಾಗಾ ಸಾಧುಗಳು ಆಗಮಿಸಿ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ.ಮಹಾಕುಂಭ ಮೇಳದಲ್ಲಿ ಭಾಗವಹಿಸುವ ನಾಗ ಸಾಧುಗಳ ಜೀವನವು ಸಾಮಾನ್ಯ ಜನರಿಂದ ಪ್ರತ್ಯೇಕವಾಗುವುದರೊಂದಿಗೆ ನಿಗೂಢವಾಗಿರುತ್ತದೆ. ಲೌಕಿಕ ಭೋಗಗಳಿಂದ ದೂರವಿದ್ದು ದೇವರ ಆರಾಧನೆಯಲ್ಲಿ ಆಳವಾಗಿ ತಲ್ಲೀನರಾಗುವ ಈ ಸಾಧುಗಳಲ್ಲಿ 13 ಅಖಾಡಗಳಿವೆ(ಪಂಗಡ), ಅದರಲ್ಲಿ ಏಳು ಶೈವ(ಶಿವನ ಆರಾಧಕರು) ಮತ್ತು ತಲಾ ಮೂರು ವೈಷ್ಣವ(ವಿಷ್ಣುವಿನ ಆರಾಧಕರು) ಹಾಗೂ ಉದಾಸೀನ(ಸಿಖ್) ಅಖಾಡಗಳಿವೆ. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ. ಸನಾತನ ಜೀವನ ವಿಧಾನವನ್ನು ಸಂರಕ್ಷಿಸಲು ಜಗದ್ಗುರು ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಈ ಅಖಾಡಗಳನ್ನು ಸ್ಥಾಪಿಸಿದರು.

ಈ ಬಾರಿ ಶಾಹಿ ಸ್ನಾನ ನಡೆಯುವ ದಿನಗಳು :

ಜನವರಿ 13( ಪುಷ್ಯ ಪೂರ್ಣಿಮಾ ಸ್ನಾನ)
ಜನವರಿ 15 (ಮಕರ ಸಂಕ್ರಾಂತಿ ಸ್ನಾನ)
ಜನವರಿ 29(ಮೌನಿ ಅಮಾವಾಸ್ಯೆ ಸ್ನಾನ)
ಫೆಬ್ರುವರಿ 03(ಬಸಂತ್‌ ಪಂಚಮಿ ಸ್ನಾನ)
ಫೆಬ್ರುವರಿ 12(ಮಾಘಿ ಹುಣ್ಣಿಮೆ ಸ್ನಾನ)
ಫೆಬ್ರುವರಿ 26(ಮಹಾ ಶಿವರಾತ್ರಿ ಸ್ನಾನ)

ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳ ನಡೆಯುವ ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ 5,500 ಕೋಟಿ ರೂಪಾಯಿಗಳ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್​ ವಿಶೇಷ ಮುತುವರ್ಜಿ ವಹಿಸಿದ್ದು, ಮಹಾ ಕುಂಭಮೇಳ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಇದು “ಡಿಜಿಟಲ್ ಮಹಾಕುಂಭ ಮೇಳವಾಗಿದ್ದು” ವಿಶೇಷವಾಗಿ 328 ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೊಂದಿರುವ ಸಿಸಿಟಿವಿಗಳು ಸೇರಿ ಒಟ್ಟು 2600 ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಜೊತೆಗೆ ಹೊಸ ತಂತ್ರಜ್ಞಾನ ಹೊಂದಿರುವ ನೀರಿನ ಒಳಗಡೆ ಚಲಿಸುವ ಡ್ರೋನ್ ಗಳನ್ನು ಈ ಬಾರಿ ಬಳಸಲಾಗುತ್ತಿದೆ.

ಸುಮಾರು 37 ಸಾವಿರ ಪೋಲಿಸರನ್ನು ಹಾಗೂ 14 ಸಾವಿರ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. 10,200 ಸ್ವಚ್ಛತಾ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಮಹಾ ಕುಂಭಮೇಳ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೌರಾಣಿಕ ಪ್ರಾಮುಖ್ಯತೆಯನ್ನು ಸಾರುವ 30 ವಿವಿಧ ಕಮಾನುಗಳನ್ನು ನಿರ್ಮಾಣ ಮಾಡಲಾಗಿದ್ದು ಭಕ್ತರಿಗೆ ದೇವ ಲೋಕದ ದಿವ್ಯ ದರ್ಶನ ಅನುಭವವಾಗಲಿದೆ. ಸುಮಾರು 12 ಕಿ.ಮೀ ನಲ್ಲಿ ತಾತ್ಕಾಲಿಕ ಘಟ್‌ಗಳನ್ನು ನಿರ್ಮಾಣ ಮಾಡಲಾಗಿದೆ, 450 ಕಿ.ಮೀ ನಷ್ಟು ಪೈಪ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಅದ್ಭುತವಾದ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲು ಅಮೆರಿಕ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 82 ದೇಶಗಳು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿವೆ.

Continue Reading

LATEST NEWS

Trending

Exit mobile version