Connect with us

    LATEST NEWS

    ಹಿಜಾಬ್ ವಿದ್ಯಾರ್ಥಿನಿಯರ ಗಝಬ್ ಕಹಾನಿ : ದಾಖಲಾತಿ ವೇಳೆ ಸಮವಸ್ತ್ರ ನಿಯಮಕ್ಕೆ ಸಹಿ-ಈಗ ಸಮರ..!!?

    Published

    on

    ಉಡುಪಿ : ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಇದೀಗ ಕರಾವಳಿ ದಾಟಿ ರಾಜ್ಯದ ಹಲವು ಕಾಲೇಜುಗಳಿಗೆ ವ್ಯಾಪಿಸಿದೆ.

    ಸದ್ಯ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ ಈ ಮಧ್ಯೆ ಇಂದು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಈ ಮಧ್ಯೆ ಹಿಜಾಬ್‌ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ದಾಖಲಾತಿ ಸಂದರ್ಭ ಸಮವಸ್ತ್ರ ನಿಯಮಕ್ಕೆ ಸಹಿ ಹಾಗಿದ ಬಗ್ಗೆ ದಾಖಲೆಗಳು ಬಹಿರಂಗವಾಗಿದೆ, ಉಡುಪಿ ಕಾಲೇಜಿನಲ್ಲಿ ಹಿಜಾಬ್ ಹಿಂದಿನಿಂದಲೂ ವಿದ್ಯಾರ್ಥಿನಿಯರು ಧರಿಸುತ್ತಿರಲಿಲ್ಲ.

    ಇತ್ತೀಚಿನ ದಿನಗಳಲ್ಲಿ ಈ ವಿವಾದ ಆರಂಭವಾಗಿದೆ ಅಂತಾ ಕಾಲೇಜು ಆಡಳಿತ ಮಂಡಳಿ ಹೇಳುತ್ತಿದೆಯಾದರೂ, ವಿದ್ಯಾರ್ಥಿನಿಯರು ಮಾತ್ರ ನಾವು ಹಿಜಾಬ್ ಅನ್ನು ಹಿಂದಿನಿಂದಲೂ ಧರಿಸುತ್ತಿದ್ದೆವು. ಇದು ನಮ್ಮ ಧಾರ್ಮಿಕ ಸ್ವಾತಂತ್ರ್ಯ ಅಂತಾ ಹೇಳುತ್ತಿದ್ದಾರೆ.

    ಆದರೆ ವಿದ್ಯಾರ್ಥಿನಿಯರು ಸಮವಸ್ತ್ರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ಕಾಲೇಜಿಗೆ ಪ್ರವೇಶಾತಿ ಆಗುವ ಸಂದರ್ಭದಲ್ಲೇ ಸಹಿ ಮಾಡಿರುವ ಬಗ್ಗೆ ಸದ್ಯ ದಾಖಲೆಗಳು ಬಿಡುಗಡೆಯಾಗಿವೆ.

    ಉಡುಪಿಯ ಕಾಲೇಜಿನಲ್ಲಿ ಎಂಟೂ ವಿದ್ಯಾರ್ಥಿನಿಯರೂ ಪ್ರವೇಶಾತಿ ಸಂದರ್ಭದಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂಬ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ದಾಖಲೆಗಳು ಬಹಿರಂಗವಾಗಿದೆ.

    ಸದ್ಯ ಹಿಜಾಬ್ ಬಗ್ಗೆ ಧ್ವನಿ ಎತ್ತಿರುವ ರೇಶಾಂ, ಮುಷ್ಕಾನ್, ಅಶ್ರಾಜ್, ಆಲಿಯಾ, ಹಜ್ರಾ, ಆಯಿಷಾ, ಬೀಬಿ ಆಯಿಷಾ ಮತ್ತು ಶಫಾ ಎಂಬ ವಿದ್ಯಾರ್ಥಿನಿಯರು ಪ್ರವೇಶಾತಿ ಸಂದರ್ಭದಲ್ಲಿ ಸಹಿ ಹಾಕಿರುವ ದಾಖಲೆಗಳು ಹೊರಬಿದ್ದಿದೆ.

    ಈ ಕಾಲೇಜು ನಿಯಾಮಾವಳಿ ಪಾಲನೆಯ ತಿಳುವಳಿಕೆ ಪತ್ರದಲ್ಲಿ ಒಂಭತ್ತನೇ ಅಂಶ “ವಾರದ ಎಲ್ಲಾ ದಿನಗಳಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವುದು ಕಡ್ಡಾಯ’ ಎಂಬ ಅಂಶ ಉಲ್ಲೇಖವಾಗಿದ್ದು, ಈ ಸೂಚನೆಗಳಿಗೆ ಅಂದು ವಿದ್ಯಾರ್ಥಿನಿಯರು ಒಪ್ಪಿ ದಾಖಲೆಗಳಿಗೆ ಸಹಿ ಹಾಕಿದ್ದಾರೆ.

    ಈ ಸೂಚನಾ ಪತ್ರಕ್ಕೆ ಹೆತ್ತವರು/ಪೋಷಕರು ಕೂಡಾ ಸಹಿ ಹಾಕಿದ್ದು, ಕಾಲೇಜಿನ ಸೂಚನಾ ಪ್ರಕಾರವಾಗಿಯೇ ಮಕ್ಕಳನ್ನೂ ಕಾಲೇಜಿಗೆ ಕಳುಹಿಸಲು ಒಪ್ಪಿದ್ದರು. ಆದರೆ ಈಗ ಈ ಎಂಟು ವಿದ್ಯಾರ್ಥಿಗಳು ಸಮವಸ್ತ್ರ ನಿಯಮಕ್ಕೆ ವಿರೋಧ ಮಾಡುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಂದೆ, ಮಗ

    Published

    on

    ಮಂಗಳೂರು/ಮಹಾರಾಷ್ಟ್ರ : ತಂದೆ ಮತ್ತು ಮಗ ಇಬ್ಬರೂ ಒಂದೇ ಮರಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ‘ತಂದೆ ತನಗೆ ಸ್ಮಾರ್ಟ್ ಫೋನ್ ಕೊಡಿಸಲಿಲ್ಲ’ ಎಂದು ಮನನೊಂದು 16 ವರ್ಷದ ಬಾಲಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇನ್ನೊಂದು ವಿಚಿತ್ರವೆಂದರೆ ಮಗನ ಶವ ನೋಡಿ ಆತನ ತಂದೆ ‘ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಲಿಲ್ಲ’ ಎಂದು ತಾನೂ ಸಹ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಂದೇಡ್ ಜಿಲ್ಲೆಯ ಬಿಳೋಳಿ ಮಿನಾಕಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

    ರಾಜು ಅವರಿಗೆ ಮೂವರು ಮಕ್ಕಳು. ಕೊನೆಯ ಮಗ ಓಂಕಾರ್ ಹಾಸ್ಟೆಲ್ ಒಂದರಲ್ಲಿ ಇದ್ದುಕೊಂಡು 10 ನೇ ತರಗತಿ ಓದುತ್ತಿದ್ದ. ಮಕರ ಸಂಕ್ರಮಣದ ರಜೆ ಇರುವುದರಿಂದ ಮನೆಗೆ ಬಂದಿದ್ದ.

    ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    ‘ಇದೇ ವೇಳೆ ಬಾಲಕ ಓಂಕಾರ್ ತನ್ನ ತಂದೆಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಬಡ ರೈತ ಕುಟುಂಬದ ರಾಜು, ಮಗನಿಗೆ ಸ್ಮಾರ್ಟ್ ಫೋನ್ ಕೊಡಿಸಲು ಆಗಿರಲಿಲ್ಲ. ಇದರಿಂದ ಡೆತ್ ನೋಟ್ ಬರೆದಿಟ್ಟು ಹೊಲದಲ್ಲಿನ ಮರಕ್ಕೆ ಬಾಲಕ ನೇಣು ಹಾಕಿಕೊಂಡಿದ್ದ. ಅದೇ ರಾತ್ರಿ ಮಗನನ್ನು ಹುಡುಕಿಕೊಂಡು ಹೋಗಿದ್ದ ತಂದೆಯೂ ಮಗ ನೇಣೂ ಹಾಕಿಕೊಂಡಿದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ನಾಂದೇಡ್ ಎಸ್ ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

    ಮೃತ ಬಾಲಕನ ತಾಯಿ ನೀಡಿದ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದು, ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

     

    Continue Reading

    LATEST NEWS

    ಛೇ! ಇದೆಂಥ ಅಮಾನವೀಯ ಕೃ*ತ್ಯ; ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಕಿ*ಡಿಗೇಡಿಗಳು

    Published

    on

    ಮಂಗಳೂರು/ಬೆಂಗಳೂರು : ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಕೃ*ತ್ಯ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದಿದೆ. ತಡರಾತ್ರಿ ದು*ಷ್ಕರ್ಮಿಗಳು ವಿ*ಕೃತಿ ಮೆರೆದಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ಕೆಚ್ಚಲುಗಳನ್ನು ಕೊಯ್ದು ಕಿ*ಡಿಗೇಡಿಗಳು ಪರಾರಿಯಾಗಿದ್ದಾರೆ.

    ರಾತ್ರಿಯಿಡೀ ಹಸುಗಳು ರ*ಕ್ತದ ಮಡುವಿನಲ್ಲಿ ನರಳಾಡಿವೆ. ಇಂದು(ಡಿ.12) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದಿದ್ದಾರೆ.

    ಸಂಸದ ಪಿಸಿ ಮೋಹನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಸುವಿನ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ.

    Continue Reading

    LATEST NEWS

    ರೀಲ್ಸ್ ಮಾಡಲು ಹೋಗಿ ನೀರುಪಾಲಾದ ಐವರು ಯುವಕರು

    Published

    on

    ಮಂಗಳೂರು/ಹೈದರಾಬಾದ್ : ರೀಲ್ಸ್ ಮಾಡಲು ಹೋದ ಐವರು ಯುವಕರು ನೀರುಪಾಲಾದ ಘಟನೆ ತೆಲಂಗಾಣದ ಸಿದ್ದಿ ಪೇಟ್ ಜಿಲ್ಲೆಯ ಕೊಂಡ ಪೋಚಮ್ಮ ಸಾಗರ ಜಲಾಶಯದಲ್ಲಿ ನಡೆದಿದೆ.

    ಇಂದು ಏಳು ಮಂದಿ ಯುವಕರ ತಂಡ ಬೆಳಗ್ಗೆ ಒಂಬತ್ತರ ಸುಮಾರಿಗೆ ಜಲಾಶಯದ ಬಳಿ ಬಂದು, ಅಲ್ಲೇ ತಿರುಗಾಡಿ ಕೊನೆಗೆ ನೀರಿಗೆ ಇಳಿದಿದ್ದರು. ನೀರಿಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ದೃಶ್ಯವನ್ನು ಈಜು ಬಾರದ ಇಬ್ಬರು ಬದಿಯಲ್ಲಿ ನಿಂತು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು.

    ಇದನ್ನೂ ಓದಿ: ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು

    ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಐವರೂ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಇಬ್ಬರು ಅವರ ರಕ್ಷಣೆಗೆ ಮುಂದಾದ್ರೂ ಸಾಧ್ಯವಾಗಿಲ್ಲ. ಮುಶೀರಾಬಾದ್‌ನ ಸಹೋದರರಾದ ಧನುಷ್ (20), ಲೋಹಿತ್ (17), ಬನ್ಸಿಲಾಲ್ ಪೇಟೆಯ ದಿನೇಶ್ವರ್ (17), ಖೈರತಾಬಾದ್‌ನ ಚಾಂತಲ್ ಬಸ್ತಿಯ ಜತಿನ್ (17), ಮತ್ತು ಸಾಹಿಲ್ (19) ನೀರು*ಪಾಲಾದ ಯುವಕರು. ಮೃಗಾಂಕ್‌ (17) ಮತ್ತು ಇಬ್ರಾಹಿಂ (19) ಇಬ್ಬರು ನೀರಿನ ಆಳಕ್ಕೆ ಇಳಿಯದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

    ಜಲಾಶಯದ ಬಳಿ ಜನರ ಓಡಾಟ ಕಡಿಮೆ ಇದ್ದ ಕಾರಣ ಮುಳುಗುತ್ತಿದ್ದ ಐವರ ರಕ್ಷಣೆಗೆ ಯಾರೂ ಸಿಗಲಿಲ್ಲ ಎಂದು, ಬದುಕಿ ಉಳಿದ ಇಬ್ಬರು ಸ್ನೇಹಿತರು ಪೊಲೀಸರ ಬಳಿ ಹೇಳಿದ್ದಾರೆ.

     

    Continue Reading

    LATEST NEWS

    Trending