ಉಡುಪಿ: ಫೇಸ್‌ಬುಕ್ ಮೆಸೆಂಜರ್ ಮೂಲಕ ಪರಿಚಯವಾಗಿದ್ದ ವಿದೇಶಿ ವ್ಯಕ್ತಿಯೊಬ್ಬ ಉಡುಪಿ ಮೂಲದ ಮಹಿಳೆಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರ ಕರಣ ದಾಖಲಾಗಿದೆ.
ಮೂಲತಃ ಗುಂಡಿಬೈಲು ನಿವಾಸಿ ದುಬೈನಲ್ಲಿ ವಾಸವಾಗಿರುವ ಕ್ಲೋಟಿಲ್ಡಾ ಡಿಕೋಸ್ತಾ ವಂಚನೆಗೆ ಒಳಗಾದ ಮಹಿಳೆ.
ಕ್ಲೋಟಿಲ್ಡಾ ಡಿಕೋಸ್ತಾ ಅವರಿಗೆ ಡಿಸೆಂಬರ್ 2ರಂದು ಮೆಸೆಂಜರ್ ಆಪ್ ಮೂಲಕ ಮೂಲಕ ಫಿಲಿಪ್ ಜೇಮ್ಸ್ ಎಂಬಾತನ ಪರಿಚಯವಾಗಿದ್ದು, ಆತ ಮೆಸೇಜ್ ಮತ್ತು ವಾಟ್ಸಾಪ್ ಕರೆ ಮಾಡಿ ಮಾತನಾಡುತ್ತಿದ್ದ.
ಸ್ನೇಹ ನಂಬಿ ಖೆಡ್ಡಾಗೆ ಬಿದ್ದಾಕೆಯಿಂದ ಪೊಲೀಸ್ ಠಾಣೆಗೆ ದೂರು
ತಾನು ರೊಮಾನಿಯ ದೇಶದವನಾಗಿದ್ದು, ಯು.ಕೆ ದೇಶದಲ್ಲಿ ವೈದ್ಯಕೀಯ ಮಾಡಿಕೊಂಡಿರುವುದಾಗಿ ಹೇಳಿದ್ದ.ಡಿ.20ರಂದು ಆತ ತಾನು ದಿಲ್ಲಿ ಏರ್‌ಪೋರ್ಟ್‌ನಲ್ಲಿದ್ದು ತನ್ನನ್ನು ಕಸ್ಟಮ್ಸ್ ಅಧಿಕಾರಿಗಳು ಹಿಡಿದಿಟ್ಟಿದ್ದಾರೆ.
ಡಾಲರ್‌ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದಿದ್ದ. ಆನಂತರ ಕ್ಲೊಟಿಲ್ಡಾ ಡಿಕೋಸ್ತಾ ಅವರನ್ನು ಹಂತ ಹಂತವಾಗಿ ಮೋಸದಿಂದ ಒಟ್ಟು 13,70,042 ರೂ.ಯನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ.
ಆ ಬಳಿಕ ಯಾವುದೇ ಕರೆಗಳನ್ನು ಸ್ವೀಕರಿಸದೇ ಮೋಸ ಮಾಡಿದ್ದಾನೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದೆ.