Connect with us

LATEST NEWS

ಉಡುಪಿ: ರಿಕ್ಷಾದಲ್ಲೇ ಮರೆತು ಬಿಟ್ಟುಹೋಗಿದ್ದ 12ಲಕ್ಷ ಮೌಲ್ಯದ ಚಿನ್ನವನ್ನು ಮಹಿಳೆಗೆ ಒಪ್ಪಿಸಿದ ಡ್ರೈವರ್

Published

on

ಉಡುಪಿ: ರಿಕ್ಷಾದಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.


ಬಳ್ಳೂರು ಕಾರೇಕುದ್ರುವಿನ ರಿಕ್ಷಾ ಚಾಲಕ ಪ್ರಕಾಶ್ ನಾಯಕ್ ಅವರ ರಿಕ್ಷಾದಲ್ಲಿ, ಲಲಿತಾ ಕೆ. ಎಂಬವರು ಕುಂದಾಪುರ ಪೇಟೆಯಿಂದ ಮನೆಗೆ ತೆರಳಿದ್ದರು.

ರಿಕ್ಷಾ ಇಳಿಯುವ ವೇಳೆ ಸುಮಾರು 12 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು. ರಿಕ್ಷಾದ ಸೀಟಿನ ಕೆಳಗೆ ಚಿನ್ನಾಭರಣ ನೋಡಿದ ಚಾಲಕ ಪ್ರಕಾಶ್ ನಾಯಕ್, ಅದನ್ನು ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದರು.

ಲಲಿತಾ ಅವರು, ಚಿನ್ನ ಕಳೆದುಹೋಗಿರುವ ಬಗ್ಗೆ ಗೊತ್ತಾಗಿ, ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ, ಪೊಲೀಸರು ಚಿನ್ನ ಕಳೆದುಕೊಂಡವರು ಲಿತಲಾ ಅವರೇ ಅಂತ ಖಚಿತ ಪಡಿಸಿ, ಚಿನ್ನಾಭರಣವನ್ನು ಒಪ್ಪಿಸಿದರು.

ಆಟೋ ಚಾಲಕ ಪ್ರಕಾಶ್ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ

LATEST NEWS

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡ ಪ್ರಕಟ

Published

on

ಮಂಗಳೂರು/ಮುಂಬೈ : ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತದ 15 ಸದಸ್ಯರ ಕ್ರಿಕೆಟ್ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ.

ಚಾಂಪಿಯನ್ಸ್ ಟ್ರೋಫಿ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ, 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಶುಭ್‌ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಫಿಟ್‌ನೆಸ್ ಸಮಸ್ಯಗೆ ಒಳಗಾಗಿದ್ದ ಜಸ್‌ಪ್ರೀತ್ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಖ್ಯಾತ ಡಾಲಿ ಚಾಯ್‌ವಾಲ ಮಂಗಳೂರಿಗೆ ಆಗಮನ

ಚಾಂಪಿಯನ್ಸ್ ಟ್ರೋಫಿಯು ಫೆ. 19ರಿಂದ ಆರಂಭವಾಗಲಿದ್ದು, ಪಾಕಿಸ್ತಾನವು ಆತಿಥ್ಯ ವಹಿಸಿದೆ. ಫೈನಲ್ ಮಾರ್ಚ್ 9ಕ್ಕೆ ನಡೆಯಲಿದೆ. ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತದ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ.

Continue Reading

FILM

ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Published

on

ಮಂಗಳೂರು: ತುಳು ಚಲನ ಚಿತ್ರಗಳಿಗೆ ಸಬ್ಸಿಡಿ, ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಪ್ರಶಸ್ತಿ, ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ನೀಡುವಂತೆ ಶೇಕಡಾವಾರು ಷೇರು, ತುಳುಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ನೇತೃತ್ವದಲ್ಲಿ ಮನವಿ  ಸಲ್ಲಿಸಲಾಯಿತು.

ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ, ಸಚಿನ್ ಎ.ಎಸ್, ಪ್ರೀತಂ ಸಾಗರ್ ಉಪಸ್ಥಿತರಿದ್ದರು.‌

Continue Reading

LATEST NEWS

ಭಾರತೀಯರಿಗೆ ಬಿಗ್ ಶಾ*ಕ್; ಸೌದಿ ಅರೇಬಿಯಾದಲ್ಲಿ ಹೊಸ ವೀಸಾ ನಿಯಮಗಳು ಜಾರಿ

Published

on

ಮಂಗಳೂರು/ ನವದೆಹಲಿ : ಸೌದಿ ಅರೇಬಿಯಾ ಸರಕಾರವು ದೇಶದಲ್ಲಿ ವಿದೇಶಿ ಉದ್ಯೋಗಿಗಳಿಗೆ ವೀಸಾ ನಿಯಮಗಳನ್ನು ಬಿಗಿಗೊಳಿಸಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಲು ಹೋಗುವ ಭಾರತೀಯರಿಗೆ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಸೌದಿ ಸರ್ಕಾರವು ತನ್ನ ‘ವಿಷನ್ 2030’ ಅನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನಡೆಸುತ್ತಿದೆ. ಇದು ತನ್ನ ನಾಗರಿಕರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸುವತ್ತ ಗಮನ ಹರಿಸುತ್ತಿದ್ದು, ಸೌದಿ ಕಾರ್ಮಿಕ ವಲಯದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ನಿಯಮಗಳ ಪ್ರಕಾರ,  ಎಲ್ಲಾ ಭಾರತೀಯ ಕಾರ್ಮಿಕರು ತಮ್ಮ ಉದ್ಯೋಗದ ಪ್ರಾಮಾಣಿಕತೆ ಹಾಗೂ ಅರ್ಹತೆಯನ್ನು ದೃಢೀಕರಿಸಲು ಕೆಲವು ಹೊಸ ದಾಖಲೆ ಪ್ರಕ್ರಿಯೆ ಅನುಸರಿಸಬೇಕು. ಈ ಕ್ರಮ ದೇಶದಲ್ಲಿ ಕಾರ್ಮಿಕ ನಿಯಮಗಳನ್ನು ಸುಧಾರಿಸಲು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಲು ರಚಿಸಲಾಗಿದೆ.  ಈ ಹೊಸ ನೀತಿಯು ಭಾರತೀಯ ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು  ಸುಧಾರಿಸುವಲ್ಲಿ ಮಹತ್ವದ  ಪಾತ್ರ ವಹಿಸುತ್ತದೆ ಎಂದು ಸೌದಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ : WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

ಸೌದಿ ಅರೇಬಿಯಾ ವಿದೇಶಿ ಕಾರ್ಮಿಕರ ನಿವಾಸ ಪರವಾನಗಿ ನವೀಕರಣ ಮತ್ತು ನಿರ್ಗಮನ – ಪುನಃಪ್ರವೇಶ ವೀಸಾದ ಅವಧಿ ವಿಸ್ತರಣೆಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ವೀಸಾ ಪಡೆಯಲು ಭಾರತೀಯ ನಾಗರಿಕರು ಈಗ ತಮ್ಮ ವೃತ್ತಿ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವಪರಿಶೀಲನೆ ಪ್ರಕ್ರಿಯೆ ಮೂಲಕ ಹೋದರೆ ಮಾತ್ರ ಸಾಧ್ಯ.

Continue Reading

LATEST NEWS

Trending

Exit mobile version