Connect with us

LATEST NEWS

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..!

Published

on

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..!

ಉಡುಪಿ : ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಕಳವು ಮಾಡುತಿದ್ದ ನಾಲ್ವರು ಅಂತರ್ ‌ರಾಜ್ಯದ ಖತರ್ ನಾಕ್ ಸರ ಕಳವು ಆರೋಪಿಗಳನ್ನು ಉಡುಪಿ ಡಿಸಿಐಬಿ ದಳ ಬಂಧಿಸಿದೆ.

ಡಿಸಿಐಬಿ ಇನ್‌ಸ್ಪೆಕ್ಟರ್ ಮಂಜಪ್ಪ ಡಿ.ಆರ್. ನೇತೃತ್ವದ ತಂಡ ಉಡುಪಿ ಶ್ರೀಕೃಷ್ಣ ಮಠ ಪಾರ್ಕಿಂಗ್ ಸ್ಥಳದ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಇರಾನಿ ಗ್ಯಾಂಗ್‌ಗೆ ಸೇರಿದ ಅಂತಾರಾಜ್ಯ ವಂಚಕರಾದ ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆ ಶ್ರೀರಾಮಪುರದ ಝಾಕಿರ್ ಹುಸೈನ್ (26), ಕಂಬರ್ ರಹೀಮ್ ಮಿರ್ಜಾ (32), ಅಕ್ಷಯ್ ಸಂಜಯ್ ಗೋಸಾವಿ (22) ಹಾಗೂ ಶಾರುಖ್ ಬಂದೆನವಾಝ್ ಶೇಖ್ (24) ಎಂದು ಗುರುತಿಸಲಾಗಿದೆ.

ಇವರು ಹೊಸದಿಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಹಾಗೂ ಗಂಡಸರು ನಡೆದುಕೊಂಡು ಹೋಗುವಾಗ ಮಾತಿಗೆಳೆದು ಪೊಲೀಸರ ಹೆಸರು ಹೇಳಿ ಗಲಾಟೆ ನಡೆಯುತ್ತಿದೆ. ನಿಮ್ಮ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ಪಡೆದು ಬ್ಯಾಗಿನಲ್ಲಿ ಹಾಕಿ ಕೊಡುವಂತೆ ನಂಬಿಸಿ, ಅವರಿಗೆ ತಿಳಿಯ ದಂತೆ ಅವುಗಳನ್ನು ಮೋಸದಿಂದ ಎಗರಿಸುವುದರಲ್ಲಿ ಪರಿಣಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಇವರು ನಡೆಸಿದ ಕೃತ್ಯಗಳಲ್ಲಿ ಉಡುಪಿ ನಗರ-1, ಕುಂದಾಪುರ-1, ವಿಜಯಪುರ-4, ಚಿಕ್ಕಮಗಳೂರು-1, ಬಂಟ್ವಾಳ-1 ಹಾಗೂ ಮಂಗಳೂರು ಉರ್ವಾದಲ್ಲಿ ಒಂದು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಇನ್ನೂ ಅನೇಕ ಕಡೆಗಳಲ್ಲಿ ಅವರು ಇದೇ ರೀತಿ ಕೃತ್ಯಗಳನ್ನು ಎಸಗಿರುವುದು ಗೊತ್ತಾಗಿದೆ.

ನಾಲ್ವರು ಆರೋಪಿಗಳನ್ನು ಬಂಧಿಸುವ ವೇಳೆ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್ ಸುಸ್ಥಿತಿಯಲ್ಲಿ ಸಿಕ್ಕಿದು, ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಹೊಂಡಾ ಶೈನ್ ಬೈಕ್, ಎರಡು ಹೆಲ್ಮೆಟ್ ಹಾಗೂ ನಗದು 5,100 ರೂ.ಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯಾಯಾಲಯದಿಂದ ಇವರನ್ನು ಪೊಲೀಸ್ ಕಸ್ಟಡಿಗೆ ಪಡೆದು, ಇವರು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ಶ್ರೀರಾಮ್‌ಪುರದ ಚಿನ್ನದ ಅಂಗಡಿಯಿಂದ 65ಗ್ರಾಂ ಚಿನ್ನವನ್ನು ಸ್ವಾಧೀನ ಪಡೆಸಿಕೊಳ್ಳಲಾಗಿದೆ.

ಆರೋಪಿಗಳಿಂದ ಇದುವರೆಗೆ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್. ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿಪಿಐ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕ ಮಂಜುನಾಥ ಡಿ.ಆರ್. ಹಾಗೂ ಸಿಬ್ಬಂದಿಗಳು ನಡೆಸಿದ್ದರು.

FILM

ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಟಾಲಿವುಡ್ ನ ಜನಮನಗೆದ್ದ ನಟಿ..!! ಡಾಲಿಯ ‘ಉತ್ತರಾಕಾಂಡ’ಕ್ಕೆ ನಟಿ ಯಾರು ಗೊತ್ತಾ?

Published

on

ಮೋಹಕತಾರೆ ರಮ್ಯ..  ಇವರ ಚಿತ್ತ ಯಾವತ್ತ ಅನ್ನೋದೆ ಇನ್ನೂ ಖಚಿತ ಆಗಿಲ್ಲ. ಈ ಮಧ್ಯೆ ಕೆಲವೊಂದು ಸಿನೆಮಾಕ್ಕೆ ನಟಿಯಾಗಿ ಕಾಣಿಸಿಕೊಳ್ಳಬೇಕಿದ್ದ ಇವರು ಹಲವು ಸಿನೆಮಾದಿಂದ ಕೈ ಬಿಟ್ಟಿದ್ದಾರೆ. ಇದರಲ್ಲಿ ಉತ್ತರಾಕಾಂಡ ಸಿನೆಮಾ ನಟನೆಯಿಂದ ಹೊರ ಬಂದಿರುವುದು ಈಗಾಗಲೇ ಸುದ್ದಿಯಾಗಿದೆ. ಆದರೆ ಇವರ ಬದಲಿಗೆ ಕಾಲಿವುಡ್ ನಟಿ ಬರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ.

aishwarya rajesh

ರೊಹೀತ್ ಪದಕಿ ನಿರ್ದೇಶನದಲ್ಲಿ ಅನಾವರಣವಾಗಲಿರುವ ಬಯಲು ಸೀಮೆಯ ಉತ್ತರಾಕಾಂಡ ಕಥೆಗೆ ಕಾಲಿವುಡ್ ನ ಐಶ್ವರ್ಯ ರಾಜೇಶ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗಿದೆ.  ಕಾಕ ಮುತ್ತೈ , ವಡಾ ಚೆನ್ನೈ, ಕನಾ, ನಮ್ಮ ಮನೆ ಪಿಳ್ಳೈ ಹೀಗೆ ಹತ್ತಾರು ಚಿತ್ರ, ವೈವಿಧ್ಯಮಯ ಪಾತ್ರದ ಮೂಲಕ ಚಂದನವನದ ಚೆಂದದ ನಾಯಕಿಯರಿಗೆಲ್ಲರಿಗೂ ತನ್ನ ನಟನೆಯ ಮೂಲಕ ಜನ ಮನ ಗೆದ್ದ ಐಶ್ವರ್ಯ ರಾಜೇಶ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್ ನಲ್ಲಿ ಸಂಚಲನ ಮೂಡಿಸ್ತಾರ ಅನ್ನೋ ಗಾಸಿಪ್ ಹರಿದಾಡ್ತಾ ಇದೆ.

uttharakanda

ಈ ಚಿತ್ರದಲ್ಲಿ ಚೈತ್ರಾ ಆಚಾರ್ ಲಚ್ಚಿ ಪಾತ್ರಕ್ಕೆ ಬಣ್ಣ ಹಚ್ತಿದ್ದಾರೆ. ದೂದ್ ಪೇಡಾ ದಿಗಂತ್  ಮಿರ್ಚಿ ಮಲ್ಲಿಗೆ ಎಂಬ ಹೆಸರಿನಿಂದ ಬಣ್ಣ ಹಚ್ಚಲಿದ್ದಾರೆ. ಸದಾ ಬಬ್ಲಿ ಕ್ಯಾರೆಕ್ಟರ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ  ಸಿನೆಮಾದಲ್ಲಿ ಡಿಫೆರೆಂಟ್ ಲುಕ್‌ನಲ್ಲಿ ಕಾಣಿಸಲಿದ್ದಾರೆ.

uttharakanda

ಮಲಯಾಳಂನ ನಿರ್ಮಾಪಕ ಮತ್ತು ಆಕ್ಟರ್ ವಿಜಯ್ ಬಾಬು ಕೂಡ ಇದೇ ಚಿತ್ರದ ಮೂಲಕ ಕನ್ನಡಕ್ಕೆ ಪಾಪಾರ್ಪಣೆ ಮಾಡಲಿದ್ದಾರಂತೆ. ಡಾಲಿ ಧನಂಜಯ್ ಜೊತೆ ಕರುನಾಡ ಚಕ್ರವರ್ತಿ ಕೂಡ ಚಿತ್ರದಲ್ಲಿದ್ದಾರೆ ಅನ್ನುವ ವಿಚಾರ ಈಗಾಗಲೇ ಸಿನಿ ಪ್ರಿಯರ ಕನಸಿಗೆ ಬಣ್ಣ ಹಚ್ಚಿದಂತಾಗಿದೆ.

Continue Reading

LATEST NEWS

UDUPI : ಕಾಂಗ್ರೆಸ್ ಪರ ದರ್ಶನ್ ಪ್ರಚಾರ; ಸುಮಲತಾ ಏನಂದ್ರು?

Published

on

ಉಡುಪಿ : ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಉಡುಪಿಯಲ್ಲಿ ಪ್ರಚಾರ ಮಾಡಲು ನಟಿ ಸಂಸದೆ ಸುಮಲತಾ ಅವರು ಆಗಮಿಸಿದ್ದಾರೆ. ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ ಸುಮಲತಾ ಕೋಟ ಪರ ಮತಯಾಚನೆ ಮಾಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ನಟಿಯಾಗಿದ್ದಾಗ ಉಡುಪಿಗೆ ಶೂಟಿಂಗ್ ಅಂತ ಬರ್ತಾ ಇದ್ದದ್ದೇ, ಈ ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಈ ಬಾರಿ ಮಂಡ್ಯದಲ್ಲಿ ಬಿಜೆಪಿಗೆ ಗೆಲುವಾಗಲಿದ್ದು, ಮೈಸೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.


ದರ್ಶನ್ ಬಗ್ಗೆ ಏನಂದ್ರು?

ಈ ವೇಳೆ ಮಂಡ್ಯದಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಮಲತಾ, ಅದು ದರ್ಶನ್ ಅವರ ವೈಯಕ್ತಿಕ ವಿಚಾರ. ನಾವು ಪ್ರತಿದಿನ ರಾಜಕೀಯ ವಿಚಾರ ಚರ್ಚೆ ಮಾಡುವುದಿಲ್ಲ. ಮಾತ್ರವಲ್ಲ, ಇಂತಹ ವಿಚಾರಗಳನ್ನು ದರ್ಶನ್ ಜೊತೆ ಚರ್ಚೆ ಮಾಡುವುದಿಲ್ಲ. ನಾನು ಹೋಗು ಅಥವಾ ಹೊಗಬೇಡ ಅನ್ನಲು ನಾನು ಯಾರು ಎಂದು ಕೇಳಿದ್ದಾರೆ.

ಕೆಲವರು ನಾನೇ ದರ್ಶನ್ ನನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಕಳುಹಿಸಿದ್ದಾಗಿ ಹೇಳ್ತಾರೆ, ಆದ್ರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಇಚ್ಚೆಯಿಂದ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಇನ್ನು ಕುಮಾರಸ್ವಾಮಿ ಪರ ಪ್ರಚಾರ ಮಾಡಬೇಕಾ ಬೇಡ್ವಾ ಅಂತ ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.

Continue Reading

FILM

ಆತ್ಮಗಳ ಜೊತೆ ಮಾತಾಡ್ತಾರಂತೆ ಕನ್ನಡದ ಈ ನಟಿ..!! ಸಿನೆಮಾ ಬಿಟ್ಟು ಕನಸುಗಳನ್ನು ಟ್ಯ್ರಾಕ್ ಮಾಡಲು ಹೊರಟಿದ್ದು ಯಾಕೆ ಗೊತ್ತಾ?

Published

on

ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದ ನೀತು ಗಾಳಿಪಟ ಸೇರಿದಂತೆ ಕೆಲವು ಬೆರಳೆಣಿಕೆಯ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಖಾಸಗಿ ಯೂಟ್ಯೂಬ್ ಸಂದರ್ಶನಗಳಲ್ಲಿ ಬಿಟ್ಟರೆ  ನೀತು ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಇದೀಗ ನೀತು ಹೊಸ ವಿದ್ಯೆಯೊಂದನ್ನು ಕಲಿತಿದ್ದಾರಂತೆ. ಸಿನೆಮಾ ಬಿಟ್ಟು ನೀತು ಏನು ಮಾಡುತ್ತಿದ್ದಾರೆ ಅನ್ನೋರಿಗೆ ನೀತು ಹೊಸ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಇವರು ಆತ್ಮಗಳ ಜೊತೆ ಸಂಪರ್ಕಿಸುವ ವಿದ್ಯೆಯನ್ನು ಕಲಿತಿದ್ದು, ಕನಸುಗಳನ್ನು ಟ್ರ್ಯಾಕ್ ಮಾಡುವಲ್ಲಿ ಬಿಸಿಯಾಗಿದ್ದಾರಂತೆ. ಈ ವಿದ್ಯೆಯನ್ನು ಶಮನಿಸಂ ಎಂದು ಕರೀತಾರೆ.

ಈ ಕುರಿತಾಗಿ ಸ್ವತಃ ನೀತುರವರು ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡುವ ವೇಳೆ ತಿಳಿಸಿದ್ದಾರೆ. ‘ನಾನು ಶಮನಿಸಂ ಕೋರ್ಸ್ ಮಾಡಿದ್ದೇನೆ ಆದ್ರೆ ಅದು ಡ್ರೀಮ್ ಟ್ರ್ಯಾಕ್ ಅಂತ ಹೋಳೋಕೆ ಆಗಲ್ಲ. ಶಮನಿಸಂ ಅನ್ನೋ ವಿದ್ಯೆಯಲ್ಲಿ ಇದೊಂದು ಭಾಗವಾಗಿರುತ್ತೆ. ಆದ್ರೆ ಇಲ್ಲಿ ಓಜಾ ಬಾಕ್ಸ್ ಇಟ್ಟುಕೊಂಡು ಆತ್ಮಗಳನ್ನು ಕರೆಯೋದಿಲ್ಲ. ಇದೊಂದು ಕೋರ್ಸ್ ಆಗಿದ್ದು ನಾನು ಇದನ್ನು ಇಷ್ಟು ಪ್ರೊಫೆಷನಲ್ ಆಗಿ ತೆಗೆದುಕೊಳ್ತೇನೆ ಅಂತ ಅಂದುಕೊಂಡಿರಲಿಲ್ಲ’ಎಂದು ಹೇಳಿದ್ರು.

Read More..; ಹರ್ಷಿಕಾ ಪೂಣಚ್ಚ – ಭುವನ್ ಗೌಡ ದಂಪತಿ ಮೇಲೆ ಹ*ಲ್ಲೆ; ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ? ಏಂದು ಕೇಳಿದ ನಟಿ

ಮರಣದ ಬಳಿಕ ಮಗಳಿಗೆ ಕಾಣಿಸಿಕೊಂಡ ತಂದೆ..!

ನೀತು ತಂದೆಯ ಮರಣದ ಬಳಿಕ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ರಂತೆ. ರಾತ್ರಿ ಮಲಗೋ ವೇಳೆ ಯಾರೋ ಮುಂದೆ ಬಂದು ನಿಂತ ಹಾಗೆ ಅನುಭವ. ಆದ್ರೆ ಅದು ಕನಸಾಗಿರಲಿಲ್ಲ ಅಸಲಿಗೆ ಅದು ನನಸಾಗಿತ್ತಂತೆ.  ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡ ವ್ಯಕ್ತಿ ಕೈ ಕಟ್ಟಿಕೊಂಡು ತಲೆ ಕೆಳಗೆ ಹಾಕಿ ನಿಂತಿದ್ದರಂತೆ. ನೀತು ಅವರಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಭಯವಾಗುತ್ತಿತ್ತಂತೆ. ಒಂದು ಕಡೆ ತಂದೆ ಕುರಿತು ಕೇಳುವಾಗ ತಂದೆಗೆ ಇನ್ನೂ ಮೋಕ್ಷ ಸಿಗಲಿಲ್ಲ ಎಂದು ತಿಳಿಯಿತು. ಗುರುವಾಯೂರಿಗೆ ಹೋಗಿ ಅಲ್ಲಿ ತಂದೆಗೆ ಮೋಕ್ಷ ದೊರಕುವಂತೆ ಮಾಡಿದ್ದಾರೆ. ಇದಾದ ನಂತರ ಕನಸುಗಳನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಲು ಮನಸ್ಸು ಮಾಡಿದ್ರಂತೆ.

ಕನಸುಗಳ ಬೆನ್ನುಹತ್ತಿದ್ದ ನೀತು:

ತನಗಾಗಿರುವ ಅನುಭವಗಳಿಂದ ನೀತು ಕನಸುಗಳನ್ನು ಟ್ರ್ಯಾಕ್ ಮಾಡಲು ಬಯಸಿದ್ರಂತೆ. ಈ ವೇಳೆ ಹೈದರಾಬಾದ್ ನ ದಂಪತಿಯ ಭೇಟಿ ಮಾಡ್ತಾರೆ. ಇವರು ಈ ವಿದ್ಯೆಯನ್ನು ಕಲಿಸುತ್ತಾರೆ ಎಂದು ಗೊತ್ತಾಗಿ ಅವರ ಸಂಪರ್ಕದಲ್ಲಿದ್ರಂತೆ ನೀತು.  ಇದು ಕೆಲವರು ಇದನ್ನು ಮೂಡನಂಬಿಕೆ ಎಂದು ಹೆಳ್ತಾರೆ. ಆದರೆ ನಾನು ಇದಕ್ಕೆ ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಹೇಳ್ತಾರೆ ನೀತು. ನಂಬಿಕೆ ಹಾಗೂ ವಿಜ್ಞಾನಕ್ಕೆ ಅದರದ್ದೇ ಆದ ಗರುತು ಇದೆ. ಹಾಗಾಗಿ ಯಾರು ಏನು ಅಂದರೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ರು.

 

Continue Reading

LATEST NEWS

Trending