Connect with us

LATEST NEWS

ಮಗಳ ಜೊತೆ 74 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ಉಡುಪಿ ಡಿಸಿ ಜಗದೀಶ್..!

Published

on

ಮಗಳ ಜೊತೆ 74 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದ ಉಡುಪಿ ಡಿಸಿ ಜಗದೀಶ್..!

ಉಡುಪಿ : ಸ್ವಾತಂತ್ರ್ಯ ದಿನಾಚರಣೆ ಎಂದ ತಕ್ಷಣ ಎಲ್ಲರಿಗೂ ಅವರ ಬಾಲ್ಯದ ನೆನಪು ತೆರೆದುಕೊಳ್ಳುತ್ತೆ. ಮುಂಜಾನೆ ಎದ್ದು ಬಿಳಿ ಯೂನಿಫಾರಂ ತೊಟ್ಟದ್ದು, ಸೆಲ್ಯೂಟ್ ಹೊಡೆದು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದು, ದೊಡ್ಡ ದೊಡ್ಡ ಬಾವುಟಗಳು ಹಾರುವುದನ್ನು ನೋಡಿದ್ದು, ಲಡ್ಡು ತಿಂದದ್ದು …ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತದೆ.

ಸ್ವಾತಂತ್ರ್ಯ ದಿನಾಚರಣೆಯ ಕ್ರೇಜ್ ಇವತ್ತಿಗೂ ಮಕ್ಕಳಲ್ಲಿ ಕಡಿಮೆಯಾಗಿಲ್ಲ. ಕೊರೋನಾ ಬಂದ ಕಾರಣಕ್ಕೆ ಅತ್ಯಂತ ಸರಳವಾಗಿ ಉಡುಪಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಆಚರಣೆ ಎಷ್ಟೇ ಸರಳವಾಗಿದ್ದರೂ ಮಕ್ಕಳ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಧ್ವಜಾರೋಹಣ ಮಾಡಿದರು. ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ಮಾಡುವ ಅವಕಾಶ ಸಿಗುವುದೇ ಅಪರೂಪ.

ಜಿಲ್ಲಾಧಿಕಾರಿ ಜಗದೀಶ್ ಅವರು ಟಿಪ್ ಟಾಪ್ ಕೋಟು ಧರಿಸಿ ಬಂದಿದ್ರು. ಇತ್ತ ಜಿಲ್ಲಾಧಿಕಾರಿಗಳ ಮಗಳ ಪಾಲಿಗಂತೂ ಅಪ್ಪನೇ ಹೀರೋ,  ಸೆಲೆಬ್ರಿಟಿಯಾಗಿ ಕಂಡಿದ್ರು…

ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಓಡಿಹೋಗಿ ವೇದಿಕೆ ಹತ್ತಿ ತಂದೆ ಜೊತೆ ಮಗಳು ಫೋಟೋ ತೆಗೆಸಿಕೊಳ್ಳಲು ಚಡಪಡಿಸುತ್ತಿದ್ದಳು.

ಹಾಗೂ ಹೀಗೂ ಕೊನೆಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟಳು.  ಜಿಲ್ಲಾಧಿಕಾರಿಗಳ ತಮ್ಮನ ಮಗಳು ಕೂಡ ಜೊತೆಗಿದ್ದಳು.

ಅಜ್ಜರಕಾಡು ಮೈದಾನ ಪ್ರವೇಶಿಸುತ್ತಿದ್ದಂತೆಯೇ ಅಪ್ಪನ ಹಿಂಬಾಲಿಸಿಕೊಂಡು ಬಂದ ಪುತ್ರಿ,  ತಂದೆ ಭಾಷಣ ಮಾಡುವಾಗ ಮುಂದಿನ ಕುರ್ಚಿಯಲ್ಲಿ ಕೂತು ತಂದೆಯ ಭಾಷಣವನ್ನು ಆಲಿಸಿದರು.

ಅಪ್ಪನ ಜೊತೆಗೆ 74ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದರು.

 

DAKSHINA KANNADA

ಕೊಣಾಜೆ : ಸ್ಕೂಟರ್ – ಟೆಂಪೋ ನಡುವೆ ಅಪ*ಘಾತ; ಸವಾರ ಸಾವು

Published

on

ಕೊಣಾಜೆ : ದ್ವಿಚಕ್ರ ವಾಹನ ಮತ್ತು ಏಸ್ ಟೆಂಪೋ ನಡುವೆ ಅಪಘಾ*ತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸಾ*ವನ್ನಪ್ಪಿರುವ ಘಟನೆ ನಡುಪದವು ಎಂಬಲ್ಲಿ ಇಂದು ( ಜ.17 ) ನಡೆದಿದೆ. ಕಾಟುಕೋಡಿ ನಿವಾಸಿ, ಮೊಯ್ದೀನ್ ಕುಂಞಿ ಬಾವು ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ರಝ್ವಿ(22) ಮೃ*ತ ಯುವಕ.

ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಏಸ್ ಟೆಂಪೋ ಮಧ್ಯೆ ಡಿ*ಕ್ಕಿಯಾಗಿದೆ. ಸ್ಕೂಟರ್ ಭಾಗಶಃ ಟೆಂಪೋದೊಳಗೆ ನುಗ್ಗಿದ್ದು, ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಈ ಸಂದರ್ಭ ಟೆಂಪೋದಿಂದ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀ*ರವಾಗಿ ಗಾ*ಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊ*ನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಟೆಂಪೋ ಚಾಲಕನೂ ಗಾ*ಯಗೊಂಡಿದ್ದಾರೆ.

ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ

ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Continue Reading

LATEST NEWS

ಅಶ್ಲೀಲ ಪದ ಬಳಕೆ ನಿಜ ಎಂದ ಪರಿಷತ್ ಸದಸ್ಯರು; ಸಿ.ಟಿ ರವಿಗೆ ಮತ್ತೆ ಸಂಕಷ್ಟ

Published

on

ಮಂಗಳೂರು/ಬೆಂಗಳೂರು : ಡಿಸೆಂಬರ್ 19ರಂದು ಬೆಳಗಾವಿಯ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಪ್ರಕರಣದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಪ್ರಕರಣ ಸಂಬಂಧ ಪರಿಷತ್‌ನ ಕಾಂಗ್ರೆಸ್ ಸದಸ್ಯರಾದ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಗುರುವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದು, ಕಲಾಪದ ಸಂದರ್ಭದಲ್ಲಿ ಸಿ.ಟಿ. ರವಿ ಅವರು ಸಚಿವೆ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಸಿದ್ದು ನಿಜ ಮತ್ತು ಅದನ್ನು ನಾವುಗಳು ವಿರೋಧಿಸಿದ್ದೆವು ಎಂದು ಹೇಳಿಕೆ ದಾಖಲಿಸಿದ್ದಾರೆ.

ಅಶ್ಲೀಲ ಪದ ಬಳಕೆ ನಿಜ ಎಂದ ಪರಿಷತ್ ಸದಸ್ಯರು
ಕಲಾಪದ ಸಂದರ್ಭದಲ್ಲಿ ಸಿ.ಟಿ. ರವಿ ಅವರು ವಿಚಾರವೊಂದರ ಚರ್ಚೆ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ್ದು ನಿಜ. ಆ ಪದವನ್ನು ಸ್ಪಷ್ಟವಾಗಿ ಕೇಳಿದ್ದೇವೆ. ಅದಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಸ್ಥಳದಲ್ಲಿದ್ದ ನಾವು ಕೂಡಲೇ ರವಿ ವಿರುದ್ದ ಪ್ರತಿಭಟನೆ ನಡೆಸಿದ್ದೆವು. ಅಲ್ಲದೇ ಅವರ ವಿರುದ್ದ ಕ್ರಮಕ್ಕೆ ಸಭಾಪತಿಗಳಿಗೂ ದೂರು ನೀಡಿದ್ದೇವೆ. ಆದರೆ ರವಿ ಅವರು ಈ ಪದ ಬಳಕೆಯೇ ಮಾಡಿಲ್ಲ ಎಂದು ಹೇಳಿದರು. ಸಿ.ಟಿ. ರವಿ ಬಳಸಿದ ಅಶ್ಲೀಲ ಪದ ಕಡತದಲ್ಲಿ ದಾಖಲಾಗಿತ್ತು ಎಂದು ಇಬ್ಬರು ಸದಸ್ಯರು ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ

ಉಮಾಶ್ರೀ ಅವರನ್ನು ಮಹಿಳಾ ಡಿವೈಎಸ್ಪಿಯೊಬ್ಬರು ಮತ್ತು ನಾಗರಾಜ್ ಯಾದವ್ ಅವರನ್ನು ಡಿವೈಎಸ್ಪಿ ಕೇಶವಮೂರ್ತಿ ವಿಚಾರಣೆ ನಡೆಸಿದ್ದು, ಲಿಖಿತ ಮತ್ತು ಮೌಖಿಕ ರೂಪದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜತೆಗೆ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರವಿ ಬೇಷರತ್ ಕ್ಷಮೆ ಕೇಳಬೇಕು ಎಂದ ನಾಗರಾಜ್
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ನಾಗರಾಜ್ ಯಾದವ್, “ಪರಿಷತ್ ಕಲಾಪದಲ್ಲಿ ನಡೆದ ಘಟನೆಯನ್ನು ತನಿಖಾಧಿಕಾರಿಗಳಿಗೆ ಸಮರ್ಪಕವಾಗಿ ವಿವರಿಸಿದ್ದೇನೆ. ಯಾವ ಮಹಿಳೆಗೂ ಆ ರೀತಿಯ ಅಶ್ಲೀಲ ಪದ ಬಳಸಬಾರದು. ರವಿ ಅವರು ಮೊಂಡುತನ ಬಿಟ್ಟು ಬೇಷರತ್ ಕ್ಷಮೆ ಕೇಳಬೇಕು” ಎಂದರು

Continue Reading

LATEST NEWS

ಕುಂದಾಪುರ : ಕಾರು ಡಿ*ಕ್ಕಿ; ಮಹಿಳೆಗೆ ಗಂಭೀ*ರ ಗಾ*ಯ

Published

on

ಕುಂದಾಪುರ : ಕಾರು ಡಿ*ಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬರು ಗಂಭೀ*ರ ಗಾ*ಯಗೊಂಡ ಘಟನೆ ಕುಂದಾಪುರ ತಾಲೂಕಿನ ತ್ರಾಸಿಯ ರಾಷ್ಟ್ರೀಯ ಹೆದ್ದಾರಿಯ  66 ರಲ್ಲಿ ಸಂಭವಿಸಿದೆ. ತ್ರಾಸಿ ನಿವಾಸಿ ಗೌರಿ ಶೆಟ್ಟಿಗಾರ್‌ (60)  ಗಾ*ಯಗೊಂಡ ಮಹಿಳೆ.

ಗೌರಿ ಶೆಟ್ಟಿಗಾರ್‌ ಅವರು ರಸ್ತೆ ದಾಟುತ್ತಿದ್ದಾಗ ಅವಘ*ಡ ಸಂಭವಿಸಿದೆ. ಕಾರು ಬೈಂದೂರು ಕಡೆಯಿಂದ ಕುಂದಾಪುರದತ್ತ ಸಂಚರಿಸುತ್ತಿತ್ತು. ಡಿ*ಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ

ಕೂಡಲೇ ಗಂಗೊಳ್ಳಿಯ ಆ್ಯಂಬುಲೆನ್ಸ್‌ನ ಇಬ್ರಾಹಿಂ ಅವರು ಆಕೆಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾ*ತದ ದೃಶ್ಯಾವಳಿ ಮಳಿಗೆಯೊಂದರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

Trending

Exit mobile version