ಉಡುಪಿ : ಉಡುಪಿ ಜಿಲ್ಲೆಯ ಪಡುಬೆಳ್ಳೆ ನಿವಾಸಿ ಸ್ಟೀಫನ್ ಅಮ್ಮನ್ನ ಎಂಬವರ ಪುತ್ರಿ ರಿಯೋನಾ ಅಮ್ಮನ್ನ(20) ಎಂಬವರು ಕಾಲೇಜಿಗೆ ಹೋದವಳು ಏಕಾಏಕಿ ನಾಪತ್ತೆಯಾಗಿದ್ದಾರೆ.
ಇವರು ಜ.13ರಂದು ಉಡುಪಿಯ ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ ಅನುಮತಿ ಪಡೆದು ಹೊರ ಹೋಗಿದ್ದರು. ಆ ಬಳಿಕ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಆಕೆಯ ತಾಯಿ ರೀಟಾ ಅಮ್ಮನ್ನ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ಚಹರೆ ಇಂತಿದೆ ; 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾಳೆ.
ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಈಕೆ ಕನ್ನಡ, ಇಂಗ್ಲೀಷ್, ತುಳು ಭಾಷೆ ಮಾತನಾಡುತ್ತಿದ್ದು, ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಉಡುಪಿ ನಗರ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.