ಉಡುಪಿ: ‘ಹಿಂದೂ ಎಂದರೆ ಅಶ್ಲೀಲ ಎಂಬ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿಯವರು ತಮ್ಮ ಮಾತುಗಳನ್ನು ವಾಪಸ್ ತೆಗೆದುಕೊಳ್ಳುವ ಬದಲು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದಾರೆ. ಈ ವಿಚಾರದಲ್ಲಿ ಈಗಲಾದರು ಕಾಂಗ್ರೆಸ್ ತನ್ನ ಜವಾಬ್ದಾರಿ ಪ್ರದರ್ಶಿಸಿ ಜಾರಕಿಹೋಳಿಯನ್ನು ಕಾರ್ಯಾದ್ಯಕ್ಷ ಸ್ಥಾನದಿಂದ ಉಚ್ಚಾಟಿಸಬೇಕು’ ಎಂದು ಶಾಸಕ ರಘುಪತಿ ಭಟ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿ ‘ಕಾಂಗ್ರೆಸ್ ನ ಹಿಂದುಗಳು ಜಾಗೃತರಾಗಬೇಕು. ಧರ್ಮದ ವಿಚಾರದಲ್ಲಿ ಯಾವುದೇ ರಾಜಕೀಯ ಹೇಳಿಕೆಗಳು ನೀಡುವುದು ಸರಿಯಲ್ಲ.
ಅವರು ಹೇಳಿಕೆ ಹಿಂಪಡೆದು ಕೂಡಲೇ ಹಿಂದೂಗಳಲ್ಲಿ ಕ್ಷಮೆ ಕೇಳಬೇಕು. ಒಂದು ವೇಳೆ ಕಾಂಗ್ರೆಸ್ ಪಕ್ಷ ಈ ಮಾತನ್ನ ಒಪ್ಪದಿದ್ದರೆ ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ನಾವು ಪ್ರತಿಭಟನೆಗೂ ಸಿದ್ಧ.
ರಾಜಕೀಯದವರು ಧರ್ಮದ ವಿಚಾರದಲ್ಲಿ ಇಂತಹ ಹೇಳಿಕೆ ನೀಡುವುದು ತಪ್ಪು. ಕಾಂಗ್ರೆಸ್ ಪಕ್ಷ ಅವರ ಹೇಳಿಕೆಯನ್ನು ಒಪ್ಪುತ್ತದೆಯೋ ಎನ್ನುವ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದರು.
ಇನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್ ಸತೀಶ್ ಜಾರಕಿಹೊಳಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿ ಕಾಂಗ್ರೆಸ್‌ನ ಹಿಂದೂಗಳು ಜಾರಕಿಹೊಳಿ ಹೇಳಿಕೆಯನ್ನು ಸಹಿಸಿಕೊಳ್ಳುತ್ತೀರಾ?..
ಕಾಂಗ್ರೆಸ್ ನ ಮಾನಸಿಕತೆ ಏನು ಎಂಬುದು ಸ್ಪಷ್ಟವಾಗಬೇಕು. ಈ ಹೇಳಿಕೆ ಹಿಂಪಡೆಯದಿದ್ದರೆ ಕಾಂಗ್ರೆಸ್‌ನ ಮಾನಸಿಕತೆ ಈ ದೇಶದ ಜನರಿಗೆ ಅರ್ಥವಾಗಬೇಕು.
ಇವರೇ ಅಶ್ಲೀಲ ಕಾರ್ಯಕರ್ತರಾ ಅನ್ನೋ ಪ್ರಶ್ನೆಗೆ ಉತ್ತರಿಸಬೇಕು. ಕಾಂಗ್ರೆಸ್ ನ ಕಾರ್ಯಕರ್ತರು ಜಾರಕಿಹೋಳಿಯ ಹೇಳಿಕೆಯನ್ನು ವಾಪಸ್ ಪಡೆಯಲು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.