Connect with us

LATEST NEWS

ಉಡುಪಿ ಮೂಲದ KGF ಖ್ಯಾತಿಯ ನಟ ಹರೀಶ್ ರಾಯ್‌ಗೆ ಕ್ಯಾನ್ಸರ್…!

Published

on

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ಕೆ.ಜಿ.ಎಫ್ ಖ್ಯಾತಿಯ ಹರೀಶ್​ ರಾಯ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಮೊರೆ ಹೋಗಿದ್ದಾರೆ.


ತನ್ನ ಮಕ್ಕಳು ಚಿಕ್ಕವರು ಎಂಬ ಕಾರಣಕ್ಕೆ ಹಾಗೂ ‘‘ಕೆಜಿಎಫ್​ 2’’ ಚಿತ್ರದ ಶೂಟಿಂಗ್​ ಇದೆ ​ಎಂಬ ಕಾರಣದಿಂದ ಅವರು ಚಿಕಿತ್ಸೆ ಪಡೆಯಲು ತಡ ಮಾಡಿದರು. ಹಣದ ಕೊರತೆ ಕೂಡ ಇದ್ದಿದ್ದರಿಂದ ಅವರು ಕಷ್ಟ ಅನುಭವಿಸಿದರು. ನಂತರ ವೈದ್ಯರನ್ನು ಭೇಟಿ ಮಾಡಿದಾಗ ಹರೀಶ್​ ರಾಯ್ ಅವರಿಗೆ ಕ್ಯಾನ್ಸರ್​ ಇರುವುದು ತಿಳಿದುಬಂದಿದೆ. ಕೂಡಲೇ ಆಪರೇಷನ್​ ಮಾಡಿಸಲಾಯಿತು.


ಆಪರೇಷನ್​ ನಂತರ ಕೂಡ ಕೆಲವು ಸಮಸ್ಯೆಗಳು ಎದುರಾದವು. ಈ ಬಗ್ಗೆ ಅಳಲು ತೋಡಿಕೊಂಡಿರುವ ನಟ ಹರೀಶ್ ರಾಯ್ ‘ವೈದ್ಯರು ನಾಲ್ಕನೇ ಸ್ಟೇಜ್​ ಎಂದರು. ಇನ್ನು ನನಗೆ ಎಷ್ಟು ಟೈಮ್​ ಉಳಿದಿದೆ ಅಂತ ಕೇಳಿದೆ. ಮೂರು ವರ್ಷ ಹೆದರಬೇಡಿ ಅಂತ ಡಾಕ್ಟರ್​ ಹೇಳಿದ್ರು.

ರೇಡಿಯೋ ಥೆರಪಿ ವರ್ಕ್​ ಆಗದ ಕಾರಣ ಬೇರೆ ಮಾತ್ರೆ ನೀಡುತ್ತಿದ್ದಾರೆ. ಆ ಮಾತ್ರೆಗಳಿಗೆ ಖರ್ಚು ಜಾಸ್ತಿ. ತಿಂಗಳಿಗೆ 3.5 ಲಕ್ಷ ಖರ್ಚಾಗಬಹುದು. 8-10 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ’’ ಎಂದು ಹರೀಶ್​ ರಾಯ್ ಮಾತನಾಡಿದ್ದಾರೆ.

ಹರೀಶ್​ ರಾಯ್ ಅವರ ಚಿಕಿತ್ಸೆಗೆ ಹಣದ ಅನಿವಾರ್ಯತೆ ಇದೆ. ‘ಫ್ಯಾಮಿಲಿ ಅನ್ನೋರು ಯಾರೂ ಬರಲ್ಲ. ಕಷ್ಟದಲ್ಲಿ ಅವರು ಸಹಾಯ ಮಾಡಲ್ಲ. ಜನರು ಬರುತ್ತಾರೆ’ ಎಂದು ಅವರು ನಂಬಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

‘ಕೆಜಿಎಫ್​ 2 ಸಿನಿಮಾ ಶೂಟಿಂಗ್​ ಸಂದರ್ಭದಲ್ಲೂ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ಕೂಡ ನಾನು ಶೂಟಿಂಗ್​ ಮಾಡಿದೆ. ಫೈಟಿಂಗ್​ ಸೀನ್​ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ. ನಾನು ಯಾರಿಗೂ ಹೇಳಲಿಲ್ಲ. ನಾನೇ ಮುಚ್ಚುಮರೆ ಮಾಡಿದೆ’ ಎಂದು ಹರೀಶ್​ ರಾಯ್ ಹೇಳಿದ್ದಾರೆ.
‘ಎಲ್ಲರಿಗೂ ಈ ಸಮಸ್ಯೆ ಬಗ್ಗೆ ಗೊತ್ತಾದರೆ ಆಫರ್​ ಬರುವುದಿಲ್ಲ ಅಂತ ಭಯ ಆಯ್ತು. ಹಾಗಾಗಿ ಕೆಜಿಎಫ್​ 2 ಚಿತ್ರ ರಿಲೀಸ್​ ಆದ ಬಳಿಕ ಕೆಲವರಿಗೆ ನಾನು ಸಂದರ್ಶನ ಕೊಟ್ಟಿಲ್ಲ. ಅವರೆಲ್ಲ ತಪ್ಪು ತಿಳಿದುಕೊಂಡಿದ್ದಾರೇನೋ ಗೊತ್ತಿಲ್ಲ’ ಎಂದು ಹರೀಶ್​ ರಾಯ್ ಹೇಳಿದ್ದಾರೆ.

ಈಗ ಕನ್ನಡ ಚಿತ್ರರಂಗದ ಕೆಲವು ಸ್ಟಾರ್​ ಕಲಾವಿದರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಹೆಸರು ಹೇಳಲು ಇಚ್ಛಿಸಿದೇ, ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಲು ಕನ್ನಡದ ಖ್ಯಾತ ಹೀರೋ ಒಬ್ಬರು ಮುಂದೆ ಬಂದಿದ್ದಾರೆ ಎಂದು ಹರೀಶ್​ ರಾಯ್ ಅವರು ತಿಳಿಸಿದ್ದಾರೆ.

ಉಡುಪಿ ಮೂಲದ ಖ್ಯಾತ ನಟ ಹರೀಶ್ ರಾಯ್ ಉಡುಪಿ ಹೆಸರಾಂತ ಆಚಾರ್ಯ ಮನೆತನದ ಕುಡಿ. ಈ ಹಿಂದೆ ಉಡುಪಿಯಲ್ಲಿ ಒಂದು ರೌಡಿಸಂ ನಲ್ಲಿ ಹೆಸರು ಮಾಡಿದ್ದರು.ಈಗಿನ ಭೂಗತ ದೊರೆ ಬನ್ನಂಜೆ ರಾಜ ಹಾಗೂ ಹರೀಶ್ ರಾಯ್ ತಂಡದ ನಡುವೆ ಯಾವಾಗಲೂ ಹೊಡೆದಾಟ ನಡೆಯುತ್ತಿತ್ತು.

ಪಾಂಗಾಳ ರಾಮ ಎಂಬ ದೊಡ್ಡ ರೌಡಿ ನೋಡಲು ಹರೀಶ್ ರಾಯ್ ಥರ ಇದ್ದ.ಪಾಂಗಾಳ ರಾಮ ಮಾಡಿದ್ದ ದರೋಡೆ ಪ್ರಕರಣ ಒಂದರಲ್ಲಿ ಪೊಲೀಸರು ಹರೀಶ್ ರಾಯ್ ಅವರನ್ನು ವಿಚಾರಣೆ ಕರೆದುಕೊಂಡು ಹೋಗಿದ್ದರು.

ಹಣದ ವಿಚಾರದಲ್ಲಿ ಯಾರೂ ಮಾಡಿದ್ದ ಬಚ್ಚೀರೆ ಮಾಸ್ಟರ್ ಕೊಲೆ ಪ್ರಕರಣದಲ್ಲಿ ಹರೀಶ್ ರಾಯ್ ಜೈಲು ಪಾಲಾಗಿದ್ದರು. ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹರೀಶ್ ರಾಯ್ ಖಳನಾಯಕನಾಗಿ ಮಿಂಚಿದ್ದರು.
ಈಗ ಕೆಜಿಎಫ್ ನಲ್ಲಿ ನಟಿಸಿ ಬಹಳ ಹೆಸರುವಾಸಿಯಾಗಿದ್ದರು.ಆದರೆ ದೇವರು ಈಗ ಅವರ ಬಾಳಿನಲ್ಲಿ ಕ್ಯಾನ್ಸರ್ ಎಂಬ ಕಾಯಿಲೆ ಕೊಟ್ಟು ಅವರ ಅಭಿಮಾನಿಗಳಿಗೆ ಬಹಳ ಅಘಾತ ಉಂಟಾಗಿದೆ.

 

LATEST NEWS

ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Published

on

ಉಡುಪಿ : ರಾಜ್ಯದಲ್ಲಿ ಅನ್ಯಕೋಮಿನವರು ದೊಡ್ಡ ಪ್ರಮಾಣದಲ್ಲಿ ವಿಜ್ರಂಭಿಸಲು ಆರಂಭ ಮಾಡಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದು ಘಟನೆಗಳು ನಡೆಯುತ್ತಿದೆ. ಅನ್ಯಕೋಮಿನವರ ಈ ಪ್ರಮಾಣದ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತ ಮತ್ತು ಧೋರಣೆಯೇ ಮುಖ್ಯ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.


ಹುಬ್ಬಳ್ಳಿಯ ನೇಹಾ ಹಿರೇಮಠ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ವೈಯಕ್ತಿಕ ಘಟನೆ ಎಂದು ಹೇಳುತ್ತಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು

ಮುಖ್ಯಮಂತ್ರಿಯಾದವರು ಇಂತಹ ಘಟನೆಯಾದಾಗ ಜಾರಿಕೊಂಡರೆ ರಾಜ್ಯದ ರಕ್ಷಣೆ ಯಾರು ಮಾಡಬೇಕು? ರಾಮೇಶ್ವರಂ ಬಾಂಬ್ ಸ್ಫೋಟ, ಪಾಕ್ ಜಿಂದಾಬಾದ್, ಕೊ*ಲೆ ಸಂದರ್ಭದಲ್ಲಿ ಸಿಎಂ ಮಾತನಾಡುವುದಿಲ್ಲ. ಹಾಡು ಹಗಲೇ ಹ*ತ್ಯೆಯಾದಾಗ ಕಠಿಣ ಧೋರಣೆ ವಹಿಸಬೇಕಿತ್ತು. ಲವ್ ಜಿ*ಹಾದ್, ಮತಾಂ*ಧತೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗರಿಗೆದರಿದೆ. ರಾಜ್ಯದ ರಕ್ಷಣೆ ಕಾಂಗ್ರೆಸ್ ನಿಂದ ಅಸಾಧ್ಯ. ಸಮಾಜ ದೊಡ್ಡ ಪ್ರಮಾಣದಲ್ಲಿ ಜಾಗೃತವಾಗ ಬೇಕಾದ ಅನಿವಾರ್ಯತೆ ಇದೆ ಎಂದರು.

 

Continue Reading

FILM

ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!

Published

on

ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಭಾರೀ ಯಶಸ್ಸನ್ನು ಗಳಿಸಿದ ಚಿತ್ರ. ಚಿತ್ರ ನೋಡಿ ಮತ್ತೆ ಮತ್ತೆ ವೀಕ್ಷಿಸಲು ಥಿಯೇಟರ್ ಗೆ ಜನ ಲಗ್ಗೆ ಇಡುತ್ತಿದ್ದಾರೆ. ಮಲಯಾಳಂ ಸಿನಿ ಪ್ರಿಯರು ಚಿತ್ರ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಿನಿಮಾ ಬಂದ್ರೂ ಅದು ಓಟಿಟಿಯಲ್ಲಿ ಯಾವಾಗ ಬರುತ್ತೆ ಅಂತ ಕಾಯೋದು ಸಹಜ. ಇದೀಗ ‘ಮಂಜುಮ್ಮೆಲ್ ಬಾಯ್ಸ್’ ಸರದಿ.

ಅತಿ ಹೆಚ್ಚು ಗಳಿಕೆ :


‘ಮಂಜುಮ್ಮೆಲ್ ಬಾಯ್ಸ್’ ಸರಳ ಕಥಾಹಂದರ ಹೊಂದಿದ್ದರೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಚಿತ್ರವನ್ನು ಚಿದಂಬರಂ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಫೆಬ್ರವರಿ 22 ರಂದು ಈ ಚಿತ್ರ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಗ್ರಾಸ್ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.


ಶೌಬಿನ್ ಶಾಹಿರ್, ಶ್ರೀನಾಥ್ ಬಾಸಿ, ಬಾಲು ವರ್ಗೀಸ್, ಗಣಪತಿ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಅಂದಾಜು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸ್ಟಾರ್ ನಟರಿಲ್ಲದ ಈ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿರೋದು ಆಶ್ಚರ್ಯ ಹುಟ್ಟು ಹಾಕಿದೆ.

ಓಟಿಟಿಯಲ್ಲಿ ಯಾವಾಗ ?

‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾವನ್ನು ಥಿಯೇಟರ್ ಅಂಗಳದಲ್ಲಿ ನೋಡಿ ಎಂಜಾಯ್ ಮಾಡಿದವರು ಅನೇಕ ಮಂದಿ ಇದ್ದಾರೆ. ಇದೀಗ ಸಿನಿಮಾ ಓಟಿಟಿಯಲ್ಲಿ ಯಾವಾಗ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದಕ್ಕೆ ಉತ್ತರವೂ ಸಿಕ್ಕಿದೆ.

ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಮೇ 3 ರಂದು ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿ 22 ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು, ಏಕಕಾಲಕ್ಕೆ ಓಟಿಟಿಯಲ್ಲಿ ಸ್ಕ್ರೀಮಿಂಗ್ ಆಗಲಿದೆಯಾ ಎಂಬುದು ತಿಳಿದು ಬಂದಿಲ್ಲ.

 

Continue Reading

BELTHANGADY

ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

Published

on

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ 8 ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿದ್ದ ನಂದನ್ (13) ಎಂಬಾತ ಆತ್ಮಹತ್ಯೆಗೆ ಶರಣಾದ ಬಾಲಕ.

Read More..; ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

ಪಂಜದ ದಿವಂಗತ ರೋಹಿತ್ ಗೌಡ ಎಂಬವರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ಮಾವನ ಮನೆಯಲ್ಲಿದ್ದ. ಅಲ್ಲಿಂದಲೆ ಉಪ್ಪಿನಂಗಡಿಯ ಖಾಸಗಿ ಶಾಲೆಗೆ ಹೋಗುತ್ತಿದ್ದ. ಈತ ಈ ಬಾರಿ ಏಳನೇ ತರಗತಿ ಉತ್ತೀರ್ಣನಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಏ.19ರಂದು ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇನ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ಹೇಳಿದ್ದಾರೆ ಎನ್ನಲಾಗಿದೆ. ಇದೇ ನೆಪವನ್ನು ಇಟ್ಟುಕೊಂಡು ಮನನೊಂದ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎಲ್ಲಾ ವಿಚಾರವನ್ನು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Continue Reading

LATEST NEWS

Trending