Home ಪ್ರಮುಖ ಸುದ್ದಿ ಮುಂಬಯಿ ಬಾರ್‌ ಮಾಲಿಕ ಕೊಲೆ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರು

ಮುಂಬಯಿ ಬಾರ್‌ ಮಾಲಿಕ ಕೊಲೆ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರು

ಮುಂಬಯಿ : ಮುಂಬಯಿ ಮಾಯಾ ಬಾರ್ ಮಾಲಿಕ ವಶಿಷ್ಟ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತ್ತೆ ,ಪ್ರಕರಣದ ಪ್ರಮುಖ ಆರೋಪಿ ಕಿಂಗ್ ಪಿನ್ ಉಡುಪಿಯ ಎಕೆಎಂಎಸ್ ಸಾರಿಗೆ ಸಂಸ್ಥೆಯ ಮಾಲಿಕ ಸೈಪುದ್ದೀನ್ ಆತ್ರಾಡಿಯನ್ನು ಅರೆಸ್ಟ್ ಮಾಡಲಾಗಿದೆ.

ಹಿರಿಯಡ್ಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಉಡುಪಿ ಎಸ್‍ಪಿ ವಿಷ್ಣುವರ್ಧನ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಕೊಲೆಯಾದ ವಶಿಷ್ಟನ ಹೊಟೇಲ್ ಉದ್ಯಮದಲ್ಲಿ ಸೈಫ್ ಕೂಡ ಪಾಲುದಾರನಾಗಿದ್ದ .

ಇದೇ ವ್ಯವಹಾರಕ್ಕೆ ಸಂಬಂಧ ಪಟ್ಟಂತ್ತೆ , ಇಬ್ಬರ ನಡುವೆ ವೈಮನಸ್ಸು ಹೋಗೆಯಾಡ್ತ ಇತ್ತು ಎನ್ನಲಾಗಿದೆ.

ಕಳೆದ ಹಲವು ತಿಂಗಳಿನಿಂದ ವಶಿಷ್ಟ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದರು. ಇದಕ್ಕಾಗಿ ಆರೋಪಿಗಳು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದರು.

ಇತ್ತ ಸೈಫ್ ಸಹಚರ ಅವಿನಾಶ್ ಕರ್ಕೇರಾ ತನ್ನ ತಂಗಿಯ ಸೀಮಂತವಿದೆ ಎಂದು ವಶಿಷ್ಟನನ್ನು ಉಡುಪಿಗೆ ಕರೆಸಿಕೊಂಡಿದ್ದ.

ಸೀಮಂತಕ್ಕೆ ಹೋಗುವ ದಾರಿ ಮಧ್ಯದಲ್ಲಿ ವ್ಯವಹಾರಕ್ಕೆ ಸಂಬಂದ ಪಟ್ಟಂತ್ತೆ ಇವರುಗಳು ಮಧ್ಯೆ ಜಗಳ ನಡೆದಿದ್ದು, ಕಾರಿನಲ್ಲೆ ಕೊಲೆ ನಡೆಸಿದ್ದಾರೆ.

ಸೈಫ್ ಈ ಹಿಂದೆಯೂ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕ್ರಿಮಿನಲ್ ಹಿನ್ನೆಲೆ ಹೊಂದಿದವನಾಗಿದ್ದಾನೆ.

ಒಟ್ಟಾರೆ ಪ್ರಕರಣ ಸಂಬಂಧ ಐದು ಆರೋಪಿಗಳ ಬಂಧಿಸಲಾಗಿದ್ದು, ಇನ್ನಷ್ಟು ಆರೋಪಿಗಳ ಪತ್ತೆಗಾಗಿ ಉಡುಪಿ ಪೊಲೀಸರು ಬಲೆ ಬೀಸಲಾಗಿದೆ..

ವಿಡಿಯೋಗಾಗಿ..

- Advertisment -

RECENT NEWS

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!! ಮಂಗಳೂರು /ಉಡುಪಿ/ಕಾಸರಗೋಡು : ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ...

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..! 

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..!  ಸುಳ್ಯ: ಕೇರಳ ಗಡಿ ದಾಟಲು ಯತ್ನಿಸಿ ವಿಫಲನಾದ ಯುವಕ ಕರ್ನಾಟಕ ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಿದ...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರೆಸ್ಟ್..!

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರಸ್ಟ್..! ಬಂಟ್ವಾಳ : ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ...

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ...