LATEST NEWS
ಮಣಿಪಾಲ: 32 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ, ಬಂಧನ
ಮಣಿಪಾಲ: 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟಿನ ಆರೋಪಿಯನ್ನು ಪತ್ತೆ ಮಾಡಿ, ಮಣಿಪಾಲ ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
1992 ರಲ್ಲಿ, ಶಿವರಾಮ ಎಂಬವರು ಮಣಿಪಾಲ ಠಾಣೆಯಲ್ಲಿ ಪ್ರಕರಣ 12 ಜನರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಗಣೇಶ್ ಪ್ರಭು (54), ಬಡಗಬೆಟ್ಟು, ಮಣಿಪಾಲ, ಉಡುಪಿ, ಅವರು 2001 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ, ತಲೆಮರೆಸಿಕೊಂಡಿದ್ದರು. ಇದರ ಹಿನ್ನಲೆಯಲ್ಲಿ,ಆತನ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಲಾಗಿತ್ತು.
ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಘವೇಂದ್ರ ಸಿ ಮತ್ತು ಹೆಚ್‌ಸಿ ಪ್ರಸನ್ನ ಉಪ್ಪೂರು ನೇತೃತ್ವದ ತಂಡ, 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬೃಹತ್ ಶೋಧಕಾರ್ಯ ನಡೆಸಿ, ಬೆಂಗಳೂರಿನಲ್ಲಿ ವಾಸವಿದ್ದಾಗ ಪತ್ತೆಹಚ್ಚಿ, 2024ರ ಆಗಸ್ಟ್ 21ರಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ಗಣೇಶ್ ಪ್ರಭು ಅವರನ್ನು ವಾರೆಂಟ್‌ನೊಂದಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
FILM
ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ.
ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.
LATEST NEWS
ಶಿಕ್ಷಕಿ, ನಿಟ್ಟೂರು ನಿವಾಸಿ ರೋಸಿ ಫಿಲೋಮಿನಾ ಪಿಂಟೋ ವಿಧಿವಶ
ಉಡುಪಿ: ನಿಟ್ಟೂರು ಪ್ರೌಢಶಾಲಾ ಶಿಕ್ಷಕಿ ನಿಟ್ಟೂರು ನಿವಾಸಿ ರೋಸಿ ಫಿಲೋಮಿನಾ ಪಿಂಟೋ(72 ವ) ಸೆ. 12ರಂದು ಮೃತಪಟ್ಟಿದ್ದಾರೆ.
ಅವರು 33 ವರ್ಷಗಳಿಂದ ನಿಟ್ಟೂರು ಫ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೆವೆ ಸಲ್ಲಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಮತ್ತು ಇಂಟರ್ಯಾಕ್ಟ್ ಕ್ಲಬ್ ನ ಸಂಯೋಜಕಿಯಾಗಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಪಾಲನಾ ಪರಿಷತ್‌ನ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ, ಮಹಿಳಾ ಸಂಘಟನೆಯ ಅಧ್ಯಕ್ಷೆಯಾಗಿ, ಚೇತನಾ ಮತ್ತು ಪ್ರಗತಿ ಮಹಿಳಾ ಮಂಡಲಗಳ ಸ್ಥಾಪಕಾಧ್ಯಕ್ಷೆಯಾಗಿದ್ದರು. ಮೃತರು ಇಬ್ಬರು ಮಕ್ಕಳನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
LATEST NEWS
ಕುಸ್ತಿ ಬಿಟ್ಟು ‘ಕೈ’ ಹಿಡಿದ ವಿನೇಶ್ ಫೋಗಟ್..! ಹರಿಯಾಣದಲ್ಲಿ ಚುನಾವಣ ಕಣಕ್ಕೆ..!
ಹರಿಯಾಣ : ಒಲಿಂಪಿಕ್ ಕುಸ್ತಿಯಲ್ಲಿ ಪದಕ ವಂಚಿತರಾದ ಭಾರತದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೋಗಟ್ ರಾಜಕೀಯ ಪ್ರವೇಶ ಮಾಡಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜಿಂದ್ ಜಿಲ್ಲೆಯ ಜುಲಾನಾ ಕ್ಷೇತ್ರದಿಂದ ಫೋಗಟ್ ಸ್ಪರ್ಧೆ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೇಶ್ ಫೋಗಟ್ ನಾಮಪತ್ರ ಸಲ್ಲಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿನೇಶ್ ಫೋಗಟ್ ದೇಶಾದ್ಯಂತ ಸುದ್ದಿಯಾಗಿದ್ದರು. ಈ ಸಂದರ್ಭದಲ್ಲಿ ವಿನೇಶ್ ಫೋಗಾಟ್ ಬೆಂಬಲಕ್ಕೆ ನಿಂತಿದ್ದ ಹಲವು ಕ್ರೀಡಾಪಟುಗಳು ದೆಹಲಿಯಲ್ಲಿ ಬೀದಿಗೆ ಇಳಿದು ಹೋರಾಟ ಮಾಡಿದ್ದರು. ಇದೇ ವೇಳೆ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರ ಕೂಡಾ ಭಾಗವಹಿಸಿ ನೈತಿಕ ಬೆಂಬಲ ನೀಡಿದ್ದರು.
ಫ್ರಾನ್ಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ವಿನೇಶ್ ಫೋಗಾಟ್ ತೂಕದ ಕಾರಣದಿಂದ ಫೈನಲ್ ನಲ್ಲಿ ಅನಹರ್ತೆಗೆ ಒಳಗಾಗಿದ್ದರು. ಈ ವೇಳೆ ತನ್ನ ಕುಸ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡಿದ್ದ ಫೋಗಟ್ ಅನಹರ್ತೆಯ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಫೋಗಟ್ ಅನರ್ಹತೆಯ ವಿಚಾರವಾಗಿ ದೇಶದ ಬಲಪಂಥೀಯ ವಾದಿಗಳು ಸಂತಸ ವ್ಯಕ್ತಪಡಿಸಿದ ಘಟನೆ ಕೂಡಾ ನಡೆದಿತ್ತು. ಇದರ ಬೆನ್ನಲ್ಲೇ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ವಿನೇಶ್ ಪೋಗಟ್ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ಇದೀಗ ವಿನೇಶ್ ಫೋಗಟ್ ಕಾಂಗ್ರೆಸ್ ಕೈ ಹಿಡಿದು ಚುನಾವಣೆಯಲ್ಲಿ ಟಿಕೇಟ್ ಗಿಟ್ಟಿಸಿಕೊಂಡಿದ್ದಾರೆ. ಜುಲಾನಾ ಕ್ಷೇತ್ರದಲ್ಲಿ ಬಿಜೆಪಿಯ ಯೋಗೇಶ್ ಬೈರಾಗಿ ಹಾಗೂ ಎಎಪಿಯ ಕವಿತಾ ದಲಾಲ್ ಅವರನ್ನು ಎದುರಿಸಲಿದ್ದಾರೆ.
- LATEST NEWS3 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM2 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- DAKSHINA KANNADA4 days ago
WATCH : ಕದ್ರಿ ಪಾರ್ಕ್ ನ ರಸ್ತೆಯಲ್ಲಿ ‘ಅಪರೇಷನ್ ಹೆಬ್ಬಾವು’; ಭಾರಿ ಗಾತ್ರದ ಹಾವನ್ನು ಕಂಡು ಬೆಚ್ಚಿ ಬಿದ್ದ ಜನ
- FILM2 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!