Connect with us

LATEST NEWS

ಭೀಕರ ಅ*ಪಘಾ*ತ; ಟ್ರಕ್ ಬೆಂ*ಕಿಗಾ*ಹುತಿ ; ಬೈಕ್ ಸವಾರ ಸಾ*ವು

Published

on

ಉಡುಪಿ : ಬೈಕ್ ಗೆ ಟ್ರಕ್ ಡಿ*ಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃ*ತಪಟ್ಟು, ಟ್ರಕ್ ಸಂಪೂರ್ಣ ಬೆಂ*ಕಿಗಾಹುತಿಯಾದ ಘಟನೆ ಶುಕ್ರವಾರ (ಜ.10) ಮದ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಕೊರಂಗ್ರಪಾಡಿ ಬಳಿ ನಡೆದಿದೆ.

ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯೂರಿಗೆ ಮರಳುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃ*ತ ಯುವಕ. ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದ ಯುವಕ ರಾತ್ರಿ ಪರಿಚಯಸ್ಥರ ಮನೆಯ ಕಾರ್ಯಕ್ರಮಕ್ಕೆ ತೆರಳಿ, ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟ್ರಕ್‌ಗೆ ಡಿ*ಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂ*ಭೀರ ಏ*ಟಾಗಿದ್ದ ಬೈಕ್ ಸವಾರ ಸ್ಥ*ಳದಲ್ಲೇ ಮೃ*ತಪಟ್ಟಿದ್ದಾನೆ.

ಘಟನೆಯ ಮರುಕ್ಷಣ ಟ್ರಕ್ ನಲ್ಲೂ ಬೆಂ*ಕಿ ಕಾಣಿಸಿಕೊಂಡಿದ್ದು ಟ್ರಕ್ ಸಂಪೂರ್ಣ ಬೆಂ*ಕಿಗೆ ಆ*ಹುತಿಯಾಗಿದೆ. ಮದ್ಯ ರಾತ್ರಿ ಘಟನೆ ಸಂಭವಿಸಿದ ಕಾರಣ ತುರ್ತು ಪರಿಹಾರ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೇ ಬೆಂ*ಕಿ ಹೊ*ತ್ತಿ ಉರಿದಿದೆ. ಉಡುಪಿ ಅ*ಗ್ನಿಶಾಮಕ ಸಿಬ್ಬಂದಿಗಳಿಂದ ಬೆಂ*ಕಿ ನಂದಿಸುವ ಕಾರ್ಯ ನಡೆದಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

LATEST NEWS

ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

Published

on

ಲಕ್ನೋ: ಅಯೋಧ್ಯೆ ರಾಮಮಂದಿರದ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ 1 ವರ್ಷ ತುಂಬಿದ ಹಿನ್ನೆಲೆ ಅಯೋಧ್ಯೆಯಲ್ಲಿ 3 ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

ಮೊದಲ ವಾರ್ಷಿಕೋತ್ಸವದ ಹಿನ್ನೆಲೆ ರಾಮಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂಗಳನ್ನ ಬಳಸಲಾಗಿದೆ. ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಎಲ್ಲೆಡೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.


ದಿನಕ್ಕೆ 2 ಬಾರಿ ಅಗ್ನಿಹೋತ್ರ ಮಂತ್ರ ಪಠಣ:

ಇಂದಿನಿಂದ ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇದರ ಭಾಗವಾಗಿ ಶುಕ್ಲ ಯಜುರ್ವೇದದಿಂದ ಅಗ್ನಿಹೋತ್ರ ಮಂತ್ರಪಠಣ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ 11 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಮಂತ್ರ ಪಠಣ ಮಾಡಲಾಗುತ್ತದೆ. ಇದರೊಂದಿಗೆ ಲಕ್ಷ ರಾಮ ರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಹಾಗೂ 6 ಲಕ್ಷ ಶ್ರೀ ರಾಮ ಮಂತ್ರದ ಪಠಣ ಮಾಡಲಾಗುತ್ತದೆ. ಮಂದಿರದ ನೆಲಮಾಳಿಗೆಯಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ರಾಗ ಸೇವೆ, ಸಂಜೆ 6 ಗಂಟೆಗೆ ಅಭಿನಂದನಾ ಗೀತ ಸೇವೆ ಶ್ರೀರಾಮನಿಗೆ ಅರ್ಪಣೆಯಾಗಲಿದೆ. ಮೊದಲ ಮಹಡಿಯಲ್ಲಿ ಸಂಗೀತ ಮಾನಸ ಪಠಣ ನಡೆಯಲಿದೆ.

Continue Reading

LATEST NEWS

ರಾಜಸ್ಥಾನದಲ್ಲಿ 6 ತಿಂಗಳ ಮಗುವಿಗೆ HMPV ಸೋಂಕು ದೃಢ

Published

on

ನವದೆಹಲಿ: ರಾಜಸ್ಥಾನದಲ್ಲಿ ಮೊದಲ HMPV ಸೋಂಕು ದೃಢಪಟ್ಟಿದ್ದು, 6 ತಿಂಗಳ ಮಗುವಿನಲ್ಲಿ HMPV ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ HMPV ಸೋಂಕಿತರ ಸಂಖ್ಯೆ 14 ಕ್ಕೆ ಏರಿದೆ. ಗುಜರಾತ್‌ನಲ್ಲಿ ಅತಿ ಹೆಚ್ಚು (4 ಪ್ರಕರಣಗಳು) ಸಕ್ರಿಯ ಪ್ರಕರಣಗಳಿವೆ. ರಾಜಸ್ಥಾನದಲ್ಲಿ 6 ತಿಂಗಳ ಹೆಣ್ಣು ಮಗುವಿಗೂ ಸೋಂಕು ತಗುಲಿದೆ ಎಂದು ವರದಿಯಾಗಿದೆ.

ಹ್ಯೂಮನ್ ಮೆಟಾಪ್ನ್ಯೂಮೊ ವೈರಸ್ (HMPV) ಎಂದರೇನು?

ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ವೈರಸ್ ಆಗಿದ್ದು, ಇದು ಮುಖ್ಯವಾಗಿ ಚಳಿಗಾಲದಲ್ಲಿ ಹರಡುತ್ತದೆ. ಈ ವೈರಸ್ ತುಂಬಾ ಆಕ್ರಮಣಕಾರಿಯಾದರೆ, ಅದು ಶ್ವಾಸಕೋಶವನ್ನು ಪ್ರವೇಶಿಸುತ್ತದೆ ಮತ್ತು ನ್ಯುಮೋನಿಯಾವನ್ನು ಉಂಟುಮಾಡುತ್ತದೆ. ಇದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಚಿಕ್ಕ ಮಕ್ಕಳು ಮತ್ತು ವೃದ್ಧರು ಈ ವೈರಸ್‌ನಿಂದ ಹೆಚ್ಚು ಪರಿಣಾಮ ಬೀರುತ್ತಾರೆ. ಈ ವೈರಸ್ ಅನ್ನು ಮೊದಲು 2001 ರಲ್ಲಿ ಗುರುತಿಸಲಾಯಿತು.

HMPV ಹೇಗೆ ಹರಡುತ್ತದೆ?

ಈ ವೈರಸ್ ಕೆಮ್ಮು, ಸೀನುವಿಕೆ, ಕೈಕುಲುಕುವುದು ಅಥವಾ ಸೋಂಕಿತ ವ್ಯಕ್ತಿಯನ್ನು ಸ್ಪರ್ಶಿಸುವ ಮೂಲಕವೂ ಹರಡುತ್ತದೆ. HMPV ವೈರಸ್‌ನ ಲಕ್ಷಣಗಳು ಸೋಂಕಿಗೆ ಒಳಗಾದ 5 ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ವೈರಸ್‌ನ ಹೆಚ್ಚಿನ ಲಕ್ಷಣಗಳು ಕರೋನಾ ವೈರಸ್‌ನಂತೆಯೇ ಇರುತ್ತವೆ, ಇದರಿಂದಾಗಿ ಜನರು ಅದರ ಬಗ್ಗೆ ಭಯಪಡುತ್ತಾರೆ.

Continue Reading

DAKSHINA KANNADA

ಕರಾವಳಿ ಉತ್ಸವದ ಅಂಗವಾಗಿ ಇಂದು ಬೀಚ್‌ ಉತ್ಸವ; ನೃತ್ಯೋತ್ಸವ, ಕದ್ರಿ ಮಣಿಕಾಂತ್ ಲೈವ್

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವದ ಅಂಗವಾಗಿ ಬಹು ನಿರೀಕ್ಷಿತ ಬೀಚ್‌ ಉತ್ಸವ ಇಂದು ಆರಂಭವಾಗಲಿದೆ.

ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಣ್ಣೀರು ಬಾವಿ ಬೀಚ್‌ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ನೃತ್ಯೋತ್ಸವ ಹಾಗೂ ರಾತ್ರಿ 7.30 ಕ್ಕೆ ಕದ್ರಿ ಮಣಿಕಾಂತ್ ಲೈವ್ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ಕರಾವಳಿ ಉತ್ಸವ ಪ್ರಯುಕ್ತ ಕದ್ರಿ ಪಾರ್ಕ್‌ನಲ್ಲಿ ಕಾರು-ಬೈಕ್‌ಗಳ ಪ್ರದರ್ಶನ

ಇನ್ನುಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಇಂದು ಸಂಜೆ 6 ರಿಂದ ಮಂಗಳೂರು ಬಾಯ್‍ಝೋನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಫಿಲ್ಮಿ ಡ್ಯಾನ್ಸ್ ಹಾಗೂ ರಾತ್ರಿ 7.30 ರಿಂದ ಮಂಗಳೂರು ಪತ್ರಕರ್ತರ ಯಕ್ಷ ಮಾಧ್ಯಮದಿಂದ ಯಕ್ಷ ವೈವಿಧ್ಯ ನಡೆಯಲಿದೆ.

ಇದಲ್ಲದೆ ಕದ್ರಿ ಪಾರ್ಕಿನಲ್ಲಿ ಕಲಾಪರ್ಬ ಚಿತ್ರ ಶಿಲ್ಪ ನೃತ್ಯ ಮೇಳ ಹಾಗೂ ಮಕ್ಕಳ ಚಿತ್ರ ಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Continue Reading

LATEST NEWS

Trending

Exit mobile version