Connect with us

    LATEST NEWS

    ಉಡುಪಿ : ಡಿವೈಡರ್ ಹಾರಿ ಟೆಂಪೋಗೆ ಡಿ*ಕ್ಕಿ ಹೊಡೆದ ಕಾರು; ಚಾಲಕರಿಗೆ ಗಂಭೀ*ರ ಗಾ*ಯ

    Published

    on

    ಉಡುಪಿ : ಕಾರೊಂದು ಡಿವೈಡರ್ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟೆಂಪೋಗೆ ಡಿ*ಕ್ಕಿ ಹೊಡೆದು ಎರಡು ವಾಹನ ಚಾಲಕರು ಗಂಭೀ*ರ ಗಾಯಗೊಂ*ಡ ಘಟನೆ  ಭಾನುವಾರ(ಜ.12) ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರ ಕುಂಭಾಶಿಯ ಏಕದಂತ ಸರ್ವೀಸ್ ಸ್ಟೇಷನ್ ಬಳಿ ಸಂಭವಿಸಿದೆ.

    ಬ್ರಹ್ಮಾವರದಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಂದು ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದ ಐಸ್ ಕ್ರೀಮ್ ಸಾಗಾಟದ ಟೆಂಪೋಗೆ ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂ ಗೊಂಡಿದ್ದು, ಇಬ್ಬರು ಚಾಲಕರು ಗಂ*ಭೀರವಾಗಿ ಗಾ*ಯಗೊಂಡಿದ್ದಾರೆ.

    ಗಾ*ಯಗೊಂಡವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    Published

    on

    ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಮಿಡ್​ ವೀಕ್​ ಎಲಿಮಿನೇಷನ್ ಇರೋದ್ರಿಂದ ಓರ್ವ ಸ್ಪರ್ಧಿ ವೀಕೆಂಡ್​ಗೂ ಮುನ್ನವೇ ಮನೆಯಿಂದ ಹೊರ ಹೋಗಲಿದ್ದಾರೆ. ಈಗಾಗಲೇ ಈ ಬಗ್ಗೆ ಬಿಗ್​ಬಾಸ್​ ಅನೌನ್ಸ್ ಮಾಡಿದ್ದು, ಸ್ಪರ್ಧಿಗಳು ಟಾಸ್ಕ್​​​ಗಳನ್ನು ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಬೆನ್ನಲ್ಲೇ ಟಾಸ್ಕ್​ಗಳು ಕೂಡ ಶುರುವಾಗಿದ್ದು, ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಈ ನಡುವೆ ಮೋಕ್ಷಿತಾ ಹಾಗೂ ಭವ್ಯ ಗೌಡ ಆಕ್ಷೇಪಾರ್ಹ ಪ್ಲಾನ್ ಒಂದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ. ರಜತ್​ ಅವರನ್ನು ಟಾಸ್ಕ್​​ನಿಂದ ಹೊರಗಿಡಲು ಹೊಂಚು ಹಾಕಿದ್ದರು. ಅಂತೆಯೇ ರಜತ್ ಅವರ ಫೋಟೋ ಇರುವ ನೆಟ್​ಗೆ ಮರದ ತುಂಡನ್ನು ಎಸೆಯುತ್ತಾರೆ.

    ಟಾಸ್ಕ್​ ಮುಗಿದ ಬಳಿಕ ರಜತ್​ ಮೋಕ್ಷಿತಾ ಮತ್ತು ಭವ್ಯಗೌಡಗೆ ಟಾಂಗ್ ಕೊಡ್ತಾರೆ. ನೀವಿಬ್ಬರು ಏನು ಮಾತನಾಡಿಕೊಂಡಿದ್ರಿ ಅಂತಾ ನನಗೆ ಚೆನ್ನಾಗಿ ಗೊತ್ತಿತ್ತು. ಮೋಕ್ಷಿತಾ ನಿಮ್ಮಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರದಿಂದ ಹೇಳ್ತಾರೆ. ಅಲ್ಲದೇ ತ್ರಿವಿಕ್ರಂ ಕೂಡ ಮೋಕ್ಷಿತಾ ಮೇಲೆ ಗರಂ ಆಗಿದ್ದು, ಟಿಕೆಟ್​ ಟು ಫಿನಾಲೆಗೆ ಹೋಗಬಾರದು ಎಂದು ನೀವು ಭವ್ಯ ಹೆಸರು ತೆಗೆದುಕೊಳ್ತೀರಿ. ನಾಮಿನೇಷನ್​​ನಿಂದ ದೂರ ಇರಬೇಕು ಅನ್ಕೊಂಡು ನೀವು ಅದೇ ಭವ್ಯ ಜೊತೆ ಸೇರಿಕೊಂಡು ಆಡ್ತೀರಿ ಎಂದು ಟಾಂಗ್ ನೀಡಿದ್ದಾರೆ.

    ಆಗ ಮೋಕ್ಷಿತಾ ನಾವು ನಿಯತ್ತಾಗಿಯೇ ಆಡಿರೋದು ಎನ್ನುತ್ತಾರೆ. ಅದಕ್ಕೆ ತಿರುಗೇಟು ನೀಡಿರುವ ರಜತ್, ನಿಮ್ಮ ಸಮರ್ಥನೆ ಬೇಡ. ನಿನ್ನ ಮನಸ್ಸಿಗೆ ಏನು ಅಂತಾ ಗೊತ್ತು ಎಂದಿದ್ದಾರೆ. ಈ ಸಂಗತಿಗಳನ್ನು ಬಿಗ್​ಬಾಸ್ ತನ್ನ ಪ್ರೊಮೋದಲ್ಲಿ ಶೇರ್ ಮಾಡಿದೆ. ಹೀಗಾಗಿ ಇವತ್ತು ರಾತ್ರಿ ಪ್ರಸಾರವಾಗುವ ಎಪಿಸೋಡ್​ನಲ್ಲಿ ನಿಜಕ್ಕೂ ಆಗಿದ್ದೇನು ಅನ್ನೋದ್ರ ಬಗ್ಗೆ ತಿಳಿಯಲಿದೆ. ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

    Continue Reading

    LATEST NEWS

    ಉಡುಪಿ : ಡ್ರೈವರ್ ಇಲ್ಲದೆ ಚಲಿಸಿದ ಬಸ್ ಕಾರಿಗೆ ಡಿ*ಕ್ಕಿ

    Published

    on

    ಉಡುಪಿ : ಡ್ರೈವರ್‌ ಇಲ್ಲದೆ ಬಸ್ಸೊಂದು ಚಲಾಯಿಸಿ ನಿಂತಿದ್ದ ಕಾರಿಗೆ ಡಿ*ಕ್ಕಿಹೊಡೆದ ಘಟನೆ ಇಂದು (ಜ.13) ಬೆಳಿಗ್ಗೆ ಕುಂದಾಪುರ ಹೊರವಲಯ ಹಂಗಲೂರು ಎಂಬಲ್ಲಿ ನಡೆದಿದೆ.

    ಡಿಪೋದಲ್ಲಿ ನಿಲ್ಲಿಸಿದ್ದ ಖಾಸಗೊ ಬಸ್ ಚಾಲಕನಿಲ್ಲದೆಯೇ ಚಲಾಯಿಸಿ ಎರಡು ಸರ್ವೀಸ್ ರೋಡ್ ಹಾಗೂ ಹೆದ್ದಾರಿ ಬ್ಯಾರಿಕೇಡ್ ದಾಟಿ ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಕಾರಿಗೆ ಸರಿಸುಮಾರು ಬೆಳಿಗ್ಗೆ 7 ಗಂಟೆಗೆ ಡಿ*ಕ್ಕಿ ಹೊಡೆದು ನಿಂತಿದೆ.

    ಬಸ್ ಶುಚಿಗೊಳಿಸಿ ಸಿಬ್ಬಂದಿಗಳು ಬಸ್ಸಿಂದ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರದ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಮ್ಮಿಯಿದ್ದರಿಂದ ಜೊತೆಗೆ ಪಾದಚಾರಿಗಳ ಓಡಾಟ ಅಷ್ಟಾಗಿ ಇರದ ಕಾರಣ ಭಾರೀ ಅ*ವಘಡ ತಪ್ಪಿದೆ.

    ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ

    Continue Reading

    LATEST NEWS

    ಫ್ರಿಡ್ಜ್ ಸ್ಪೋಟಗೊಂಡು ಲಕ್ಷಾಂತರ ರೂ.ವಸ್ತುಗಳು ಭಸ್ಮ!

    Published

    on

    ಹಾವೇರಿ: ಇಂದು ರಾಜ್ಯದಲ್ಲಿ ಪ್ರತ್ಯೇಕ ಮೂರು ಅಗ್ನಿ ಅವಘಡಗಳು ಸಂಭವಿಸಿವೆ. ಮೊದಲನೆಯದಾಗಿ ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿದ್ದಾರೆ. ಬಳಿಕ ಬೆಂಗಳೂರಿನ ನೆಲಮಂಗಲದಲ್ಲಿ ಗಾರ್ಮೆಂಟ್ಸ್ ಅಂಗಡಿಗೆ ಬೆಂಕಿ ತಗುಲಿ 40 ಲಕ್ಷಕ್ಕೂ ಅಧಿಕ ಬಟ್ಟೆಗಳು ಸುಟ್ಟು ಕರಕಲಾಗಿವೆ. ಇದೀಗ ಹಾವೇರಿಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಎರಡು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಭಸ್ಮವಾಗಿದೆ.

    ಹೌದು ಹಾವೇರಿಯ ಮಂಜುನಾಥ ನಗರದಲ್ಲಿ ಫ್ರಿಡ್ಜ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ನಗರದ ಚನ್ನಬಸಪ್ಪ ಗೂಳಪ್ಪನವರ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಅಗ್ನಿ ಅವಘಡದ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾವ ಕಾರಣಕ್ಕಾಗಿ ಫ್ರಿಡ್ಜ್ ಸ್ಪೋಟಗೊಂಡಿದೆ ಎಂದು ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.

    Continue Reading

    LATEST NEWS

    Trending