ಉಡುಪಿ: ಗದ್ದೆಯಲ್ಲಿ ಮೇಯಲು ಕಟ್ಟಿದ ದನವನ್ನು ಬದಲಿಸಿ ಕಟ್ಟಲು ತೆರಳಿದ್ದ ವೃದ್ಧೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸೊಲ್ಮಾ (77) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಮಾ.29 ರಂದು ಸೊಲ್ಮಾ ಅವರು ಬೆಳಗ್ಗೆ 11 ಗಂಟೆಗೆ ತನ್ನ ಮನೆಯ ದನಗಳನ್ನು ಮೇಯಲು ಕಟ್ಟಿದ್ದರು. ವಾಪಾಸ್ಸು ಅವುಗಳನ್ನು ಬದಲಿಸಿ ಕಟ್ಟಲು ಹೋದವರು ತುಂಬಾ ಹೊತ್ತಾದರೂ ಮನೆಗೆ ಬಾರದಿದ್ದುದನ್ನು ಕಂಡು ಮನೆಯವರು ಹುಡುಕಲು ಹೊರಟಿದ್ದಾರೆ.
ಈ ವೇಳೆ ತೋಟದಲ್ಲಿರುವ ಕೆರೆಯನ್ನು ನೋಡಿದಾಗ ಸೊಲ್ಮಾ ಅವರು ಕೆರೆಯಲ್ಲಿ ಬಿದ್ದು ಚಡಪಡಿಸುತ್ತಿದ್ದರು. ತಕ್ಷಣ ಅವರನ್ನು ಸ್ಥಳೀಯರು ಮೇಲಕ್ಕೆತ್ತಿದ್ದರು. ಈ ವೇಳೆಗಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.