Friday, May 27, 2022

UAEಯ ರಾಜಕುಮಾರಿ ವಿರೋಧ: ಝೀ ನ್ಯೂಸ್ ಸಂಪಾದಕನನ್ನು ಕಾರ್ಯಕ್ರಮದಿಂದ ಕೈ ಬಿಟ್ಟ ಆಯೋಜಕರು

ಅಬುಧಾಬಿ: ಝೀ ನ್ಯೂಸ್ ಎಡಿಟರ್ ಇನ್ ಚೀಫ್ ಸುಧೀರ್ ಚೌಧರಿಯನ್ನು ಅಬುಧಾಬಿಯ ಕಾರ್ಯಕ್ರಮದಿಂದ ಹೊರಗಿಡಲಾಗಿದೆ.

ಶಾರ್ಜಾದ ರಾಜಕುಮಾರಿ ಹಿಂದ್ ಫೈಸಲ್ ಅಲ್ ಖಾಸಿಂ, ರಾಜಕುಮಾರಿ ವಿರೋಧ ವ್ಯಕ್ತಪಡಿಸಿದ ಬೆನ್ನಿಗೆ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದ್ದು,


ಅಬುದಾಭಿ ಚಾರ್ಟೆಡ್ ಅಕೌಂಟ್ ಒಕ್ಕೂಟವು ನವೆಂಬರ್ 25, 26ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರನಾಗಿ ಚೌಧರಿಯವರಿಗೆ ಆಹ್ವಾನ ನೀಡಲಾಗಿತ್ತು.
ಸುಧೀರ್ ಚೌಧರಿಯ

ಅಬುಧಾಬಿ ಚಾರ್ಟೆಡ್ ಅಕೌಂಟೆಂಟ್ ಪ್ಯಾನೆಲ್ ಹೊರಗಿಟ್ಟಿದೆ ಎಂದು ಇನ್ಸಿಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಟೆಂಟ್ಸ್ ಆಫ ಇಂಡಿಯಾ(ಐಡಿಎಐ) ಅಬುಧಾಬಿ ಚಾಪ್ಟರ್ ಸದಸ್ಯರು ಬರೆದ ಪತ್ರದ ಪ್ರತಿಯನ್ನೂ ರಾಜಕುಮಾರಿ ಟ್ವೀಟ್ ಮಾಡಿದರು.
ಪ್ರಮುಖ ಪ್ರೊಫೆಶನಲ್ ಸಂಘಟನೆ, ಪ್ರೊಫೆಶನಲ್ ಅಲ್ಲದ ಒಬ್ಬ ಪತ್ರಕರ್ತನಿಗೆ ವೇದಿಕೆ ನೀಡಿ ನಮ್ಮ ನಾಡಿ ಗೌರವ, ಅಂತಸ್ತನ್ನು ಕಡಿಮೆ ಮಾಡುವುದಾ ಎಂದು ರಾಜಕುಮಾರಿ ಪ್ರಶ್ನಿಸಿದ್ದಾರೆ.

ನಂತರ ಸುಧೀರ್ ಚೌಧರಿಯವರನ್ನು ಕಾರ್ಯಕ್ರಮದಿಂದ ಹೊರಗಿಡಲಾಯಿತು ಎಂದು ರಾಜಕುಮಾರಿ ಟ್ವೀಟ್ ಮಾಡಿದ್ದಾರೆ.
ಅವರ ಪ್ರೈಂ ಟೈಮ್ ಶೋಗಳು ಮುಸ್ಲಿಮರನ್ನು ಆಕ್ರಮಿಸಲು ಪ್ರೇರೇಪಿಸುವ ರೀತಿಯಲ್ಲಿವೆ. ನೀವು ಯಾಕೆ ಅಸಹಿಷ್ಣುವಾದ ಒಬ್ಬ ಭಯೋತ್ಪಾದಕನನ್ನು ಯುಎಇಗೆ ಕರೆತರುವುದು.

ಶಾಂತವಾದ ನನ್ನ ದೇಶಕ್ಕೆ ನೀವು ಇಸ್ಲಾಮೊಫೋಬಿಯ ಮತ್ತು ದ್ವೇಷವನ್ನು ಯಾಕೆ ತರುತ್ತಿದ್ದೀರಿ ಎಂದು ರಾಜಕುಮಾರಿ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ಈ ಬಗ್ಗೆ ಆಂಗ್ಲ ವಾಹಿನಿಯೊಂದಿಗೆ ಮಾತನಾಡಿ, ನಾವು  ವ್ಯವಹಾರ ಸಂಬಂಧ ನಡೆಸುವ ಟಾಪ್‌ 5 ದೇಶಗಳ ಪೈಕಿ ಭಾರತವೂ ಒಂದು. ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ.

ತುಂಬಾ ಒಳ್ಳೆಯವರು ಇದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ. ಅವರೂ ನಮ್ಮನ್ನು ಗೌರವಿಸುತ್ತಾರೆ. ಭಾರತವನ್ನು ನಾನು ದೇಶವಾಗಿ ನೋಡುತ್ತಿಲ್ಲ ಬದಲಾಗಿ ಒಂದು ಕುಟುಂಬವಾಗಿ ನೋಡುತ್ತೇವೆ ಎಂದರು.

LEAVE A REPLY

Please enter your comment!
Please enter your name here

Hot Topics