ನವದೆಹಲಿ: ಕೊರೊನಾ ವೈರಸ್ ಪ್ರಕರಣಗಳ ಉಲ್ಬಣದಿಂದಾಗಿ ಭಾರತ–ಯುಎಇ ವಿಮಾನಯಾನದ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಿದ್ದು, ಇಂದಿನಿಂದ (ಗುರುವಾರ) ಕಾರ್ಯಾಚರಣೆ ಪುನಾರಂಭಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ.
‘ಜೂನ್ 24ರಿಂದ ಎಲ್ಲಾ ಏರ್ ಇಂಡಿಯಾ ವಿಮಾನಗಳು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಡಿಎಕ್ಸ್‌ಬಿ) ಟರ್ಮಿನಲ್ -1ರಿಂದ ಕಾರ್ಯನಿರ್ವಹಿಸಲಿವೆ’ ಎಂದು ಏರ್ ಇಂಡಿಯಾ ತಿಳಿಸಿದೆ. ದುಬೈನಿಂದ ನಿರ್ಗಮಿಸಲಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ದುಬೈ ಟರ್ಮಿನಲ್ -2ರಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣಕ್ಕೆ ಏ.24ರಿಂದ ವಿಮಾನ ಸಂಚಾರ ನಿಷೇಧಿಸಿ ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಆದೇಶ ಹೊರಡಿಸಿತ್ತು.
ಮಂಗಳೂರು/ಬೆಂಗಳೂರು : ಬಾಹ್ಯಾಕಾಶ ಇತಿಹಾಸದಲ್ಲಿ ಭಾರತ ಮತ್ತೊಂದು ಸಾಧನೆ ಮೆರೆದಿದೆ. ಇಸ್ರೋ ಸ್ಪೇಡೆಕ್ಸ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಂತರಿಕ್ಷದಲ್ಲಿ ಎರಡು ನೌಕೆಗಳನ್ನು ಜೋಡಿಸುವ ಮೂಲಕ ಇಸ್ರೋ ಯಶಸ್ವಿಯಾಗಿದ್ದು, ಬಾಹ್ಯಾಕಾಶದಲ್ಲಿ ಯಶಸ್ವಿ ಡಾಕಿಂಗ್ ಮಾಡುವ ಸಾಮರ್ಥ್ಯ ಗಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹಿರಿಮೆ ಭಾರತಕ್ಕೆ ದಕ್ಕಿದೆ.
ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಬಾಹ್ಯಾಕಾಶ ನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣ ಎಂದಿದೆ. ಡಿಸೆಂಬರ್ 30 ರಂದು ಪಿಎಸ್‌ಎಲ್‌ವಿ – ಸಿ 60 ರಾಕೆಟ್‌ನಲ್ಲಿ ಉಡಾವಣೆಯಾದ ಎರಡು ಉಪಗ್ರಹಗಳಾದ SDX01 ಮತ್ತು SDXO2 ಡಾಕಿಂಗ್‌ನಲ್ಲಿ ಒಳಗೊಂಡಿತ್ತು. ಬಹು ಪ್ರಯತ್ನಗಳ ಬಳಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಸ್ರೋ ತಂಡವನ್ನು ಅಭಿನಂದಿಸಿರುವ ಅವರು, ಅಂತರಿಕ್ಷ ಡಾಕಿಂಗ್ ಪ್ರಯೋಗ ಯೋಜನೆ ಭವಿಷ್ಯದಲ್ಲಿ ಅಂತರಿಕ್ಷ ಕಾರ್ಯಾಚರಣೆಗಳಿಗೆ ಮಹತ್ವದ ಮೈಲಿಗಲ್ಲು ಎಂದಿದ್ದಾರೆ.
ಮಂಗಳೂರು/ಮೈಸೂರು : ಮಲಗಿದ್ದ ಮೂರು ಹಸುಗಳ ಕೆ*ಚ್ಚಲು ಕೊ*ಯ್ದ ಅ*ಮಾನವೀಯ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಜನವರಿ 12 ರಂದು ನಡೆದಿದ್ದು, ಇದೀಗ ಆ ಘಟನೆ ಮಾಸುವ ಮುನ್ನವೇ ಮೈಸೂರಿನ ನಂಜನಗೂಡಿನಲ್ಲಿ ಹಸುವಿನ ಬಾ*ಲಕ್ಕೆ ಮ*ಚ್ಚಿನಿಂದ ಹಲ್ಲೆ ನಡೆಸಿರುವ ಮತ್ತೊಂದು ವಿ*ಕೃತಿ ಬೆಳಕಿಗೆ ಬಂದಿದೆ.
ಹಸುವಿನ ಕ*ಳ್ಳತನಕ್ಕೆ ಬಂದಿದ್ದ ಖದೀಮರು ಮ*ಚ್ಚಿಂದ ಹಸುವಿನ ಮೇಲೆ ಹ*ಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಹಸು ತಪ್ಪಿಸಿಕೊಳ್ಳಲು ಯತ್ನಿಸುವಾಗ ಮ*ಚ್ಚಿನಿಂದ ಹ*ಲ್ಲೆ ನಡೆಸಿದ್ದಾರೆ.
ಈ ಅ*ಮಾನವೀಯ ಕೃ*ತ್ಯ ನಂಜುಂಡೇಶ್ವರನ ಸನ್ನಿಧಿಯಲ್ಲಿ ನೂರಾರು ಹಸುಗಳ ಪೈಕಿ ನಡೆದಿದೆ. ದೇವಸ್ಥಾನಕ್ಕೆ ದಾನವಾಗಿ ಕೊಡಲಾಗುತ್ತಿದ್ದ ಹಸುಗಳ ಕಳ್ಳತನಕ್ಕೆ ಈ ಹಿಂದೆ ಪ್ರಯತ್ನ ನಡೆದಿತ್ತು. ನಿನ್ನೆ ರಾತ್ರಿ ದೇವಾಲಯದ ಆವರಣದಲ್ಲಿದ್ದ ಹಸುವಿನ ಬಾಲಕ್ಕೆ ಮ*ಚ್ಚಿನಿಂದ ಹ*ಲ್ಲೆ ನಡೆಸಲಾಗಿದೆ. ಈಗಾಗಲೇ ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಗಾ*ಯಗೊಂಡ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ.
ನಂಜುಂಡೇಶ್ವರ ದೇವಸ್ಥಾನದಲ್ಲಿ ಈ ಕೃತ್ಯ ನಡೆದಿರುವುದು ಎಲ್ಲರಲ್ಲೂ ಆತಂಕ ತಂದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ನಂಜನಗೂಡು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸುತ್ತುಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು/ಅಮರಾವತಿ : ತಿರುಪತಿಯಲ್ಲಿ ನಡೆದ ಕಾಲ್ತುಳಿತ ದು*ರಂತ ಇನ್ನೂ ಮಾಸಿಲ್ಲ. ಇದೀಗ ಮತ್ತೊಂದು ದುರ್ಘ*ಟನೆ ಸಂಭವಿಸಿದೆ. ಮೂರು ವರ್ಷದ ಬಾಲಕನೊಬ್ಬ ಮೆಟ್ಟಿಲಿನಿಂದ ಜಾರಿ ಬಿದ್ದು ಮೃ*ತಪಟ್ಟಿರುವ ಘಟನೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಅತಿಥಿಗೃಹದಲ್ಲಿ ಸಂಭವಿಸಿದೆ.
ಪೋಷಕರೊಂದಿಗೆ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ಬಾಲಕ ಪದ್ಮನಾಭ ನಿಲಯದ ಮೊದಲ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಈ ದುರಂ*ತ ನಡೆದಿದೆ ಎಂದು ವರದಿಯಾಗಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಕುಟುಂಬ ಬಂದಿತ್ತು. ಬಾಲಕ ತನ್ನ ಸಹೋದರನೊಂದಿಗೆ ಆಡುತ್ತಿದ್ದ. ಈ ವೇಳೆ ಜಾರಿ ಮೆಟ್ಟಿಲಿನಿಂದ ಕೆಳಗೆ ಬಿ*ದ್ದಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಾಲ್ತುಳಿತ ಪ್ರಕರಣ:
ಜ.9ರ ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಜ.8ರ ಸಂಜೆಯೇ ಭಾರಿ ಜನರು ಜಮಾಯಿಸಿದ್ದರು.
ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವ*ಸ್ಥಗೊಂಡ ಕಾರಣ ಅವರನ್ನು ಹೊರಕ್ಕೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆಲವರು ಕೆಳಗೆ ಬಿ*ದ್ದಿದ್ದು ಕಾಲ್ತು*ಳಿತದಿಂದ 6 ಮಂದಿ ಮೃ*ತಪಟ್ಟು, ಹಲವರು ಗಾ*ಯಗೊಂಡಿದ್ದರು.
ಕಾ*ಲ್ತುಳಿತ ಪ್ರಕರಣ ಬೆನ್ನಲ್ಲೇ ಮತ್ತೊಂದು ಅವಘ*ಡ ಸಂಭವಿಸಿತ್ತು. ಜ.13 ರಂದು ಲಡ್ಡು ಕೌಂಟರ್ ಸಂಖ್ಯೆ 47 ರಲ್ಲಿ ಬೆಂ*ಕಿ ಕಾಣಿಸಿಕೊಂಡಿತ್ತು. ಕೌಂಟರ್‌ನಲ್ಲಿದ್ದ ಕಂಪ್ಯೂಟರ್ ಯುಪಿಎಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘ*ಡ ನಡೆದಿತ್ತು. ಬೆಂ*ಕಿ ಹರಡುತ್ತಿದ್ದಂತೆಯೇ ಭಕ್ತರು ಭಯಭೀತರಾಗಿ ಸ್ಥಳದಿಂದ ಹೊರಗೋಡಿದ್ದರು. ಟಿಟಿಡಿ ಸಿಬ್ಬಂದಿ ಬೆಂ*ಕಿ ನಂದಿಸಿದ್ದರು.