ಮಂಗಳೂರು: ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಬಿಜೆಪಿ ಸರಕಾರದ ಬೆಂಬಲವಿಲ್ಲದೆ ಪೊಲೀಸರು ಕೊರಗರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ. ಇದರ ಹಿಂದಿನ ಉದ್ದೇಶ ಏನೆಂದು ಬಿಜೆಪಿ ಸರಕಾರ ಹೇಳಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾಧ್ಯಮವದವರೊಂದಿಗೆ ಮಾತನಾಡಿದ ಅವರು, ಪೊಲೀಸರು ದೌರ್ಜನ್ಯ ನಡೆಸಿದ್ದನ್ನು ಈ ಹಿಂದೆಯೇ ಖಂಡಿಸಿದ್ದೇವೆ. ಪೊಲೀಸರಿಂದ ದಬ್ಬಾಳಿಕೆ ಒಳಗಾದವರಿಗೆ ಸೂಕ್ತ ನ್ಯಾಯ ನೀಡಬೇಕು.
ಹಲ್ಲೆ ನಡೆಸಿದವರಲ್ಲಿ ಪಿಎಸ್‌ಐ ಮಾತ್ರ ಸಸ್ಪೆಂಡ್ ಉಳಿವರಿಗೆ ಟ್ರಾನ್ಸ್‌ಫರ್ ಬಿಟ್ಟು ಯಾವುದೇ ಕ್ರಮ ಆಗಲಿಲ್ಲ ಎಂದರು.
ಘಟನೆ ನಡೆದ ಮೊದಲ ಎರಡು ದಿನ ಪೊಲೀಸರ ಮೇಲೆ ಕಂಪ್ಲೈಟ್ ಇತ್ತು. ಮೂರನೇ ದಿವಸ ಬೇರೆಯವರ ಮುಖಾಂತರ ಮದುವೆ ಮನೆಯವರ ಮೇಲೆಯೇ ದೂರು ನೀಡಿ ಕೇಸ್ ದಾಖಲಿಸುತ್ತಾರೆ. ಇದರ ಉದ್ದೇಶ ಏನೆಂದು ಬಿಜೆಪಿ ಸರಕಾರ ಹೇಳಬೇಕು.
ಹಾಗಾದರೆ ಮೆಹಂದಿ ಕಾರ್ಯಕ್ರಮಕ್ಕೆ ಡಿ.ಜೆ ಹಾಕಿದ್ದೇ ತಪ್ಪಾ? ಸಂತ್ರಸ್ತರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಬಿಜೆಪಿ ಜನಪ್ರತಿನಿಧಿಗಳೇ ನೇರ ಹೊಣೆ. ಇಲ್ಲದಿದ್ದರೆ ಪೊಲೀಸ್ ಇಲಾಖೆಗೆ ಹೇಗೆ ಧೈರ್ಯ ಬರುತ್ತದೆ ಎಂದು ಹೇಳಿದರು.
ಪ್ರತಿನಿತ್ಯ ಒಬ್ಬೊಬ್ಬ ಮಂತ್ರಿ ಅವರ ಬಳಿ ಹೋಗುವುದು ಹೇಳಿಕೆ ನೀಡುವುದು. ನಾವು ಮನೆ ಕೊಡ್ತೇವೆ, ಪರಿಹಾರ, ಕೊಡ್ತೇವೆ ಎಂದು, ನೀವು ಸರಕಾರ ಕೊಡಬೇಕಾಗಿದ್ದ ಸವಲತ್ತು ಕೊಡಬೇಕಾ ಮೊದಲು ಕೊಡಿ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ವಿಶ್ವಾಸ್ ಕುಮಾರ್ ದಾಸ್ ಮತ್ತಿತರರು ಇದ್ದರು.