ಉಡುಪಿ : ಉಡುಪಿಯ ಮಾಜಿ ಶಾಸಕ ಯು ಆರ್ ಸಭಾಪತಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. 3 ಲಕ್ಷ ರೂಪಾಯಿ ಹಣ ಪಡೆದು ವಾಪಾಸು ನೀಡದೇ ಸತಾಯಿಸುತ್ತಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪಲು ನಿವಾಸಿ, ಕಾಂಗ್ರೇಸ್ ಕಾರ್ಯಕರ್ತ, ಚಿಕ್ಕ ಮಂಚಯ್ಯ ಆರೋಪ ಮಾಡಿರುವ ವ್ಯಕ್ತಿಯಾಗಿದ್ದಾರೆ. ಇಂದು ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಮಂಡ್ಯ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರವಾಗ ತನ್ನಿಂದ 2019 ಫೆಬ್ರವರಿ ತಿಂಗಳಲ್ಲಿ ಸಭಾಪತಿ ಮೂರು ಲಕ್ಷ ಹಣವನ್ನು ಪಡೆದಿದ್ದಾರೆ. ನನ್ನ ಬಳಿ ಹಣ ಇಲ್ಲದ ಕಾರಣ ಬೇರೊಬ್ಬರಿಂದ ಸಾಲ ಪಡೆದು ಈ ಮೊತ್ತ ನೀಡಿರುವುದಾಗಿ ಚಿಕ್ಕ ಮಂಚಯ್ಯ ಹೇಳಿದ್ದಾರೆ. 15 ದಿನದಲ್ಲಿ ಸಾಲದ ಹಣ ವಾಪಸ್ಸು ನೀಡುವ ಭರವಸೆ ಸಿಕ್ಕ ಕಾರಣ ಬಡ್ಡಿಗೆ ಹಣವನ್ನು ಪಡೆದು ನೀಡಿದ್ದೇನೆ.ಎರಡು ಮೂರು ತಿಂಗಳು ಕಳೆದರೂ ಸಭಾಪತಿ ಹಣ ವಾಪಸ್ಸು ಮಾಡಲಿಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳ 30 ನೇ ತಾರೀಕಿಗೆ ಚೆಕ್ ನೀಡಿದ್ದು, ಅದು ಕೂಡಾ ಬೌನ್ಸ್ ಆಗಿದೆ. ಹಣಕ್ಕಾಗಿ ಕಳೆದ ಮೂರು ತಿಂಗಳಿಂದ ಉಡುಪಿಗೆ ಬಂದು ಸಭಾಪತಿಯವರ ಭೇಟಿಗೆ ಹುಡುಕುತ್ತಿದ್ದೇನೆ.ಕಾಂಗ್ರೆಸ್ ನಾಯಕರು, ಪೊಲೀಸರು ಯಾರು ಕೂಡ ನನ್ನ ನೆರವಿಗೆ ಬಂದಿಲ್ಲ ಎಂದು ಚಿಕ್ಕ ಮಂಚಯ್ಯ ಆರೋಪ ಮಾಡಿದ್ದಾರೆ.
ತನ್ನ ಮೇಲೆ ಚೆಕ್ ಬೌನ್ಸ್ ಕೇಸು ದಾಖಲಾಗಿ ತಾನು ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಮೂರು ಲಕ್ಷ ರೂಪಾಯಿ ಕೊಟ್ಟು ನನ್ನ ಮರ್ಯಾದೆ ಉಳಿಸು ಎಂದು ಸಭಾಪತಿಯವರನ್ನು ಬೇಡಿಕೊಂಡಿದ್ದಾರೆ.