ಮಂಗಳೂರು/ಬೆಂಗಳೂರು: ವ್ಯಕ್ತಿಯೊಬ್ಬನನ್ನು ಮದುವೆಯಾಗಲು ಮಹಿಳೆಯರಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದಲ್ಲಿ ನಡೆದಿದೆ.
ರವಿ ಎಂಬ ವ್ಯಕ್ತಿಯನ್ನು ವಿವಾಹವಾಗಲು ರುಕ್ಮಿಣಿ(38) ಹಾಗೂ ಭಾಗ್ಯ(40) ರಂಪಾಟ ಮಾಡಿಕೊಂಡ ಮಹಿಳೆಯರು ಎಂದು ಗುರುತಿಸಲಾಗಿದೆ.
ಈಗಾಗಲೇ ಪತ್ನಿಯನ್ನು ಕಳೆದುಕೊಂಡಿರುವ ರವಿಗೆ ಎರಡು ಮಕ್ಕಳಿವೆ. ರವಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಕಿ*ತ್ತಾಡಿಕೊಂಡಿದ್ದು ಜ*ಗಳ ತಾ*ರಕಕಕ್ಕೇರಿ ಕೊನೆಗೆ ಓರ್ವ ಮಹಿಳೆ ಚಾ*ಕುವಿನಿಂದ ಇ*ರಿದಿದ್ದಾಳೆ. ಕಳೆದ 11 ವರ್ಷದ ಹಿಂದೆ ಲಕ್ಷ್ಮೀಯನ್ನ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಸಹ ಇದಾರೆ. ಆದ್ರೆ, ಲಕ್ಷ್ಮೀ ಮೃ*ತಪಟ್ಟಿದ್ದು, ಬಳಿಕ ರವಿ, ಮಾಜಿ ಲವರ್ ರುಕ್ಮಿಣಿಯನ್ನ ಮನೆಗೆ ಕರೆತಂದಿದ್ದ. ಈ ಹಿಂದೆ ರುಕ್ಮಿಣಿಯೂ ಸಹ ಪತಿಯನ್ನ ತೊರೆದಿದ್ದಳು. ಹೀಗಾಗಿ ರವಿ ಮತ್ತು ರುಕ್ಮುಣಿ ಮದುವೆಯಾಗಲು ತಯಾರಾಗಿದ್ದರು. ಈ ನಡುವೆ ಮೃತ ಮೊದಲ ಪತ್ನಿ ಲಕ್ಷ್ಮೀ ಅಕ್ಕ ಭಾಗ್ಯ ಕೂಡ ಪತಿಯನ್ನ ಬಿಟ್ಟು ರವಿಯನ್ನ ಮದುವೆಯಾಗಲು ಮುಂದೆ ಬಂದಿದ್ದಾಳೆ.
“ಇಬ್ಬರು ಮಕ್ಕಳನ್ನ ನೋಡಿ ಕೊಳ್ಳುವೆ. ನೀನು ನನ್ನನ್ನು ಮದುವೆಯಾಗಬೇಕು” ಎಂದು ಭಾಗ್ಯ ಪಟ್ಟು ಹಿಡಿದಿದ್ದಳು. ಆದರೆ ನಂತರದಲ್ಲಿ ರುಕ್ಮುಣಿ ಮನೆಯಲ್ಲಿರುವುದು ಭಾಗ್ಯಳಿಗೆ ತಿಳಿಯಿತು, ರವಿ ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಭಾಗ್ಯ, ರುಕ್ಮಿಣಿ ಜೊತೆ ಜ*ಗಳಕ್ಕೆ ಇಳಿದಿದ್ದಾಳೆ. ಅಲ್ಲದೇ ಮನೆಯಿಂದ ಹೊರಗೆ ದೂ*ಡಲು ಯತ್ನಿಸಿದ್ದಾಳೆ. ಗಲಾಟೆ ವಿ*ಕೋಪಕ್ಕೆ ತಿರುಗಿ ದೊ*ಣ್ಣೆಯಿಂದ ಬ*ಡಿದು ಬಳಿಕ ಚಾ*ಕುವಿನಿಂದ ಇ*ರಿದಿದ್ದಾಳೆ.
ಗಾ*ಯಾಳು ರುಕ್ಮಿಣಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ತಂಗಿ ಗಂಡನಿಗಾಗಿ ಚಾ*ಕು ಹಾಕಿದ ಭಾಗ್ಯಳನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಕಟ್ಟಿಕೊಂಡ ಗಂಡನನ್ನು ಬಿಟ್ಟು ತಂಗಿ ಗಂಡನ ಜೊತೆ ಸಂಸಾರ ಮಾಡಲು ಬಂದ್ದಿದ್ದ ಮಹಿಳೆ ಇದೀಗ ಜೈಲು ಪಾಲಾಗಿದ್ದು, ರುಕ್ಮುಣಿ ತನ್ನ ಮಾಜಿ ಪ್ರಿಯಕರ ರವಿ ಜೊತೆ ಮತ್ತೆ ಒಂದಾಗಿದ್ದಾಳೆ.