Connect with us

ವಿಮಾನ ಲ್ಯಾಂಡಿಂಗ್ ಲೋಪ ಸ್ಪೈಸ್‌ಜೆಟ್ ಪೈಲಟ್‌ಗಳ ಲೈಸೆನ್ಸ್ 4 ತಿಂಗಳು ರದ್ದು

Published

on

ವಿಮಾನ ಲ್ಯಾಂಡಿಂಗ್ ಲೋಪ ಸ್ಪೈಸ್‌ಜೆಟ್ ಪೈಲಟ್‌ಗಳ ಲೈಸೆನ್ಸ್ 4 ತಿಂಗಳು ರದ್ದು

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ತಪ್ಪು ಮಾಡಿದ್ದ ಇಬ್ಬರು ಸ್ಪೈಸ್‌ಜೆಟ್‌ ಪೈಲಟ್‌ಗಳ ಮೇಲೆ ಡಿಜಿಸಿಎ ಕ್ರಮ ಜರುಗಿಸಿದ್ದು ನಾಲ್ಕೂವರೆ ತಿಂಗಳ ಅವಧಿಗೆ ಲೈಸನ್ಸ್‌ ರದ್ದುಗೊಳಿಸಿದೆ.

ಲ್ಯಾಂಡಿಂಗ್ ವೇಳೆ ಮಾಡಿದ ತಪ್ಪಿನಿಂದ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು.

ಲೋಪದ ಬಗ್ಗೆ ತನಿಖೆ ನಡೆಸಿದ್ದ ನಿರ್ದೇಶನಾಲಯವು ಪೈಲಟ್‌ಗಳ ಲೋಪ ಸಾಬೀತಾದ ಕಾರಣ ಪರವಾನಗಿ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿದೆ.

ಲೋಪಕ್ಕೆ ಸಂಬಂಧಿಸಿದಂತೆ ಪೈಲಟ್ ಇನ್ ಕಮಾಂಡ್ ಮತ್ತು ಫಸ್ಟ್‌ ಆಫೀಸರ್‌ಗಳು ನೀಡಿರುವ ಉತ್ತರವನ್ನು ಡಿಜಿಸಿಎ ಒಪ್ಪಿಕೊಂಡಿಲ್ಲ.

ಅವರಿಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದೆ. ವಿಮಾನವು ನೆಲವನ್ನು ಸ್ಪರ್ಶಿಸಿದ ರೀತಿ ಸರಿಯಿರಲಿಲ್ಲ. ರನ್‌ ವೇಯಿಂದ ಎಡಕ್ಕೆ ವಿಮಾನ ಜಾರಿತ್ತು.

ಹೀಗಾಗಿ ರನ್‌ ವೇ ಅಂಚಿನ ದೀಪಗಳಿಗೆ ಹಾನಿಯಾಗಿತ್ತು ಎಂಬ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಮಂಗಳೂರಿನಲ್ಲಿ ಲ್ಯಾಂಡ್ ಆಗಿದ್ದ ಸ್ಪೈಸ್‌ಜೆಟ್‌ನ ಬೋಯಿಂಗ್ 737 ವಿಮಾನವು ದುಬೈನಿಂದ ಪ್ರಯಾಣ ಆರಂಭಿಸಿತ್ತು.

ತಪ್ಪು ಮಾಡಿದ್ದ ಇಬ್ಬರೂ ಪೈಲಟ್‌ಗಳನ್ನೂ ಸ್ಪೈಸ್‌ಜೆಟ್‌ ಅಮಾನತು ಮಾಡಿದೆ.

ವಿಡಿಯೋಗಾಗಿ..

Click to comment

Leave a Reply

Your email address will not be published. Required fields are marked *

LATEST NEWS

ಟೀಂ ಇಂಡಿಯಾಗೆ ಮತ್ತೊಂದು ಆಘಾತ; ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್

Published

on

ಮಂಗಳೂರು/ಮುಂಬೈ : ಟೀಂ ಇಂಡಿಯಾ ಮತ್ತು ಹಿಮಾಚಲ ಪ್ರದೇಶದ ಆಲ್ ರೌಂಡರ್, 2013ರ ಐಪಿಎಲ್ ವಿಜೇತ ರಿಷಿ ಧವನ್ ಅವರು ಭಾರತೀಯ ಸೀಮಿತ ಓವರ್ ಗಳ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

34 ವರ್ಷದ ಆಲ್ ರೌಂಡರ್ ಇನ್ಮುಂದೆ ಏಕದಿನ ಮತ್ತು ಟಿ20 ಕ್ರಿಕೆಟ್ ಆಡುವುದಿಲ್ಲ. ದೇಶೀಯ ಕ್ರಿಕೆಟ್ ನಲ್ಲಿ ಹಿಮಾಚಲ ಪ್ರದೇಶದ ಪರ ಆಡುತ್ತಿರುವ ರಿಷಿ ಧವನ್, ಭಾರತಕ್ಕಾಗಿ ಮೂರು ಏಕದಿನ ಮತ್ತು ಒಂದು ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

 

2016ರಲ್ಲಿ ಟೀಂ ಇಂಡಿಯಾಗೆ ಕಾಲಿಟ್ಟಿದ್ದರು. ಧವನ್ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಪ್ರಾರಂಭಿಸಿದರು. ಇನ್ನೂ ಸೀಮಿತ ಓವರ್ ಗಳ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧವನ್ ದೇಶಿಯ ಕ್ರಿಕೆಟ್ ನಲ್ಲಿ ಒಟ್ಟು 9000 ರನ್ ಗಳಿಸಿದ್ದಾರೆ. 650ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ಗುಜರಾತ್ ನಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ

ಐಪಿಎಲ್ ನಲ್ಲಿ, ಧವನ್ ಕಿಂಗ್ಸ್ ಇಲೆವೆನ್ ಪಂಜಾಬ್ (2014-2024) ಮತ್ತು ಮುಂಬೈ ಇಂಡಿಯನ್ಸ್ (2013) ಅನ್ನು ಪ್ರತಿನಿಧಿಸಿದರು. 39 ಪಂದ್ಯಗಳಲ್ಲಿ 25 ವಿಕೆಟ್ ಮತ್ತು 210 ರನ್ ಗಳಿಸಿದ್ದರು.

Continue Reading

LATEST NEWS

ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

Published

on

ಬೆಂಗಳೂರು: ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್​ಎಂಪಿವಿ ವೈರಸ್ ದೃಢಪಟ್ಟಿದೆ. ಮಗುವಿಗೆ ಜ್ವರ ಬಂದ ಕಾರಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾಹಿತಿ ನೀಡಿದ್ದಾರೆ.

ಎಚ್​ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್​ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲ ಇದೆ. ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಸೋಂಕು ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಹಿನ್ನೆಲೆಯ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹರ್ಷಗುಪ್ತ ತಿಳಿಸಿದ್ದಾರೆ.

ಕೇಂದ್ರಕ್ಕೆ ಮಾಹಿತಿ:

ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಿದೆ.

ಏನಿದು HMPV ವೈರಸ್?

ಸದ್ಯ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ ಎಚ್​ಎಂಪಿವಿ ಹೊಸದೇನಲ್ಲ. ಇದನ್ನು ಮೊದಲು 2001 ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಆದಾಗ್ಯೂ, ಕೆಲವು ಸೆರೋಲಾಜಿಕ್ ಪುರಾವೆಗಳು ವೈರಸ್ 1958 ರಿಂದಲೇ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ನಿರೂಪಿಸಿರುವುದಾಗಿ ತಜ್ಞರು ಹೇಳಿದ್ದಾರೆ. ಸದ್ಯ ಎಚ್​ಎಂಪಿವಿ ವೈರಸ್ ಹರಡುವಿಕೆ ತಡೆಗೆ ಯಾವುದೇ ಲಸಿಕೆ ಇಲ್ಲ. ಭಾರತದಲ್ಲಿ ಸದ್ಯ ಯಾವುದೇ ರೀತಿಯಲ್ಲಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಹೇಳಿದೆ.

Continue Reading

STATE

ಬೈಕ್ ವ್ಹೀಲಿಂಗ್ ಮಾಡಿ ವಿಡಿಯೋ ಅಪ್ಲೋಡ್: ಆರೋಪಿ ವಶ

Published

on

ಉಡುಪಿ : ಮಣಿಪಾಲದ ರಜತಾದ್ರಿ ರಸ್ತೆಯಲ್ಲಿ ಬೈಕ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್‌ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಬೈಕ್‌ ನಲ್ಲಿ ಹಿಂಬದಿಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕುರಿಸಿಕೊಂಡು ಮಣಿಪಾಲದ NH 169 ಹಾಗೂ ರಜತಾದ್ರಿ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್‌ ಮಾಡುತ್ತಿರುವುದು ಕಂಡು ಬಂದಿದ್ದು, ಈ ವಿಡಿಯೋ ವೈರಲ್‌ ಆಗಿತ್ತು.

ಇದನ್ನೂ ಓದಿ : ವೇಶ್ಯಾವಾಟಿಕೆ: ಇಬ್ಬರು ಆರೋಪಿಗಳ ಬಂಧನ, ಯುವತಿಯ ರಕ್ಷಣೆ

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಮಣಿಪಾಲ ಠಾಣಾ ಪಿ.ಐ ದೇವರಾಜ್‌ ಟಿ.ವಿ ನೇತೃತ್ವದಪೊಲೀಸ್‌ ತಂಡ ಆರೋಪಿ ಮಹಮ್ಮದ್‌ ಆಶಿಕ್(19) ವಶಕ್ಕೆ ಪಡೆದು ವಿಲಿಂಗ್ ಮಾಡಿದ ಸ್ಕೂಟರ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.

Continue Reading

LATEST NEWS

Trending

Exit mobile version