ಲಿಫ್ಟ್‌ನಲ್ಲಿ ಸಿಲುಕಿ ಒದ್ದಾಟ: ಇಬ್ಬರನ್ನು ರಕ್ಷಿಸಿದ ಅಗ್ನಿಶಾಮಕ ದಳ
Published
5 years agoon
By
Adminಲಿಫ್ಟ್‌ನಲ್ಲಿ ಸಿಲುಕಿ ಒದ್ದಾಟ: ಇಬ್ಬರನ್ನು ರಕ್ಷಿಸಿದ ಅಗ್ನಿಶಾಮಕ ದಳ
ಕಾರ್ಕಳ: ಮಣಿಪಾಲ ರೋಟರಿ ಆಸ್ಪತ್ರೆ ಮುಂಭಾಗದ ಲಿಜಾ ಪ್ಲಾಜಾ ಅಪಾಟ್ ಮೆಂಟ್ ನ ಲಿಪ್ಟ್ ನೊಳಗೆ ಇಬ್ಬರು ಸಿಲುಕಿಕೊಂಡು ಘಟನೆಯೊಂದು ಮಂಗಳವಾರ ತಡರಾತ್ರಿ ನಡೆದಿದೆ.
ಶಾಕಿಬ್ 21 ಹಾಗೂ ಹಿಮಾದ್ ಎಂಬುವರು ಸುಮಾರು 45 ನಿಮಿಷಗಳ ಕಾಲ ಲಿಪ್ಟನಲ್ಲಿ ಸಿಲುಕಿಕೊಂಡಿದ್ದು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಇಬ್ಬರನ್ನು ರಕ್ಷಿಸಿ ಹೊರತಂದಿದ್ದಾರೆ. ನಿರ್ವಹಣೆ ಇಲ್ಲದೆ ತಾಂತ್ರಿಕ ದೋಷದಿಂದಾಗಿ ಈ ಅವಘಡ ಸಂಭವಿಸಿದೆ. ಲಿಜಾ ಪ್ಲಾಜಾ ಕಟ್ಟಡದ ಲಿಪ್ಟ ನಲ್ಲಿ ಸಿಲುಕಿ ಕೊಂಡಿರುವುದು ಹೊಸತೇನಲ್ಲ.
ಕಾರ್ಯಾಚರಣೆಯಲ್ಲಿ ಅಗ್ನಿಯ ಶಾಮಕ ಠಾಣಾಧಿಕಾರಿ ಬಿ ಎಂ ಸಂಜೀವ , ದಪ್ತೇದರ್ ರೂಪೇಶ್, ಸಿಬ್ಬಂದಿಗಳಾದ ರೂಪೇಶ್, ಚಂದ್ರಶೇಖರ್, ಮಹಮ್ಮದ್ ರಪೀಕ್, ಮನೋಹರ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
You may like
ಬಜಪೆ: ಎಲೆಕ್ಟ್ರಾನಿಕ್ ಅಂಗಡಿ, ಬೇಕರಿ, ತರಕಾರಿ ಅಂಗಡಿ ಹಾಗೂ ಬಂಡ ಶಾಲೆಯ ಒಂದು ಗೂಡಂಗಡಿಗೆ ಶುಕ್ರವಾರದ ರಾತ್ರಿ ವೇಳೆಯಲ್ಲಿ ಕಳ್ಳರು ನುಗ್ಗಿ, ಮೊಬೈಲ್, ಎಲೆಕ್ಟ್ರಾನಿಕ್ ಸಾಮಾಗ್ರಿ, ಚಿನ್ನದ ಉಂಗುರ, ನಗದು, ಬೇಕರಿಯಿಂದ ತಿಂಡಿ, ನಗದು, ತರಕಾರಿ ಅಂಗಡಿಯಿಂದ ನಗದು ನಾಣ್ಯ, ಸಿಗರೇಟ್, ಗೂಡಂಗಡಿಯಿಂದ ಬಿಸ್ಕತ್‌ನ್ನು ಕಳವು ಮಾಡಿರುವ ಘಟನೆ ಗುರುಪುರ ಪೇಟೆಯಲ್ಲಿ ನಡೆದಿದೆ.
ಗುರುಪುರ ಪೇಟೆಯ ಉಮೇಶ್ ಭಟ್ ರ ಎಲೆಕ್ಟ್ರಾನಿಕ್ ಅಂಗಡಿಗೆ ನುಗ್ಗಿ 12 ಮೊಬೈಲ್ ಫೋನ್, 20 ಸಾವಿರ ರೂಪಾಯಿ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳು, 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಉಂಗುರ, ಸುಮಾರು 25 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ. ಉಮೇಶ್ ನ ಸಹೋದರ ರಮೇಶ್ ಭಟ್ ರ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಬೇಕರಿ ತಿಂಡಿಗಳನ್ನು ಹಾಗೂ ನಗದುಗಳನ್ನು ಶಟರ್ ಬೀಗ ಒಡೆದು ಕಳವು ಮಾಡಿದ್ದಾರೆ. ಸಂಶುದ್ದೀನ್ ನ ತರಕಾರಿ ಅಂಗಡಿಯ ಮರದ ಬಾಗಿಲಿನ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ಡಬ್ಬಿಯಲ್ಲಿದ್ದ ಹತ್ತು ರೂಪಾಯಿಯ ನ್ಯಾಣ ಸುಮಾರು 10 ಸಾವಿರ ರೂಪಾಯಿ ನಗದು, ಸುಮಾರು 10ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಸಹಿತ 20 ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವು ಮಾಡಿದ ಕಳ್ಳರು ಅಂಗಡಿಯಲ್ಲಿನ ಫ್ರೀಜ್‌ನಲ್ಲಿದ್ದ ಮೊಸರನ್ನು ಕುಡಿದಿದ್ದಾರೆ ಹಾಗೂ ಚೆಲ್ಲಿದ್ದಾರೆ. ಅಂಗಡಿಯಲ್ಲಿದ್ದ ಅನಾನಸನ್ನು ತುಂಡು ಮಾಡಿ,ತಿಂದಿದ್ದಾರೆ. ಇಲ್ಲಿ ಕಳ್ಳರು ಹಲವು ಹೊತ್ತು ಕಾಲ ಕಳೆದಿರುವುದು ಕಂಡು ಬಂದಿದೆ.ಬಂಡಸಾಲೆಯಲ್ಲಿ ಧರ್ಮಣ ಪೂಜಾರಿ ಗೂಡಂಗಡಿಯ ಶಟರ್‌ನ ಬೀಗ ಮುರಿದು ಬಿಸ್ಕತ್‌ನ್ನು ಕಳವು ಮಾಡಿದ್ದಾರೆ.
ಸುಮಾರು ರಾತ್ರಿ 2 ರಿಂದ 3 ಗಂಟೆಯೊಳಗೆ ಈ ಕಳವು ನಡೆದಿದೆ. ಇದು ಒಂದು ಕಳ್ಳರ ತಂಡವಾಗಿದ್ದು, ಗುರುಪುರ ಪೇಟೆಯಲ್ಲಿ ಸಿಸಿ ಕ್ಯಾಮಾರದಲ್ಲಿ ಕಳ್ಳರ ಸುಳಿವು ಸಿಗುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ಪಡೆದು ಹೇಳಿಕೆ ತೆಗೆದುಕೊಂಡು ಹೋಗಿದ್ದಾರೆ.
LATEST NEWS
ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ
Published
18 minutes agoon
06/01/2025By
NEWS DESK2ಬೆಂಗಳೂರು: ಮುಂದಿನ ಮೂರು ದಿನ ಕರ್ನಾಟಕದ ಹಲವು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಇನ್ನು ರಾಜ್ಯಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಕೆಲವೆಡೆ 15 ಡಿಗ್ರಿಗಿಂತ ಕೆಳಗೆ ತಾಪಮಾನ ಕುಸಿದಿದೆ. ಮುಂದಿನ 3 ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕನಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ ಮಂಜು ಮುಸುಕಿನ ವಾತಾವರಣ ಮುಂದುವರೆಯಲಿದೆ.
LATEST NEWS
ಟೀಂ ಇಂಡಿಯಾಗೆ ಮತ್ತೊಂದು ಆಘಾತ; ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Published
50 minutes agoon
06/01/2025By
NEWS DESK3ಮಂಗಳೂರು/ಮುಂಬೈ : ಟೀಂ ಇಂಡಿಯಾ ಮತ್ತು ಹಿಮಾಚಲ ಪ್ರದೇಶದ ಆಲ್ ರೌಂಡರ್, 2013ರ ಐಪಿಎಲ್ ವಿಜೇತ ರಿಷಿ ಧವನ್ ಅವರು ಭಾರತೀಯ ಸೀಮಿತ ಓವರ್ ಗಳ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
34 ವರ್ಷದ ಆಲ್ ರೌಂಡರ್ ಇನ್ಮುಂದೆ ಏಕದಿನ ಮತ್ತು ಟಿ20 ಕ್ರಿಕೆಟ್ ಆಡುವುದಿಲ್ಲ. ದೇಶೀಯ ಕ್ರಿಕೆಟ್ ನಲ್ಲಿ ಹಿಮಾಚಲ ಪ್ರದೇಶದ ಪರ ಆಡುತ್ತಿರುವ ರಿಷಿ ಧವನ್, ಭಾರತಕ್ಕಾಗಿ ಮೂರು ಏಕದಿನ ಮತ್ತು ಒಂದು ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
2016ರಲ್ಲಿ ಟೀಂ ಇಂಡಿಯಾಗೆ ಕಾಲಿಟ್ಟಿದ್ದರು. ಧವನ್ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಪ್ರಾರಂಭಿಸಿದರು. ಇನ್ನೂ ಸೀಮಿತ ಓವರ್ ಗಳ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧವನ್ ದೇಶಿಯ ಕ್ರಿಕೆಟ್ ನಲ್ಲಿ ಒಟ್ಟು 9000 ರನ್ ಗಳಿಸಿದ್ದಾರೆ. 650ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಗುಜರಾತ್ ನಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ
ಐಪಿಎಲ್ ನಲ್ಲಿ, ಧವನ್ ಕಿಂಗ್ಸ್ ಇಲೆವೆನ್ ಪಂಜಾಬ್ (2014-2024) ಮತ್ತು ಮುಂಬೈ ಇಂಡಿಯನ್ಸ್ (2013) ಅನ್ನು ಪ್ರತಿನಿಧಿಸಿದರು. 39 ಪಂದ್ಯಗಳಲ್ಲಿ 25 ವಿಕೆಟ್ ಮತ್ತು 210 ರನ್ ಗಳಿಸಿದ್ದರು.
LATEST NEWS
ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆ
ಸಾರ್ವಜನಿಕ ಶೌಚಾಲಯದಲ್ಲಿದ್ದ ಮಹಿಳೆಯ ಪೋಟೋ ತೆಗೆದು ಪರಾರಿಯಾದ ಕಿಡಿಗೇಡಿ
ವೇಶ್ಯಾವಾಟಿಕೆ: ಇಬ್ಬರು ಆರೋಪಿಗಳ ಬಂಧನ, ಯುವತಿಯ ರಕ್ಷಣೆ
ಸಾಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಡಾ ನಾ ಡಿ ಸೋಜ ಅಂತಿಮ ದರ್ಶನ
ಶೀತ, ಜ್ವರವಿದ್ದರೆ ಸಾರ್ವಜನಿಕ ಸ್ಥಳಕ್ಕೆ ಹೋಗಬಾರದು; ರಾಜ್ಯಸರ್ಕಾರದ ಮಾರ್ಗಸೂಚಿ
ಎಡಪದವು : ಇರುಮುಡಿ ಕಟ್ಟಿ, ಶಬರಿಮಲೆಗೆ ಹೊರಟ ಅಯ್ಯಪ್ಪ ಮಾಲಾಧಾರಿಗಳು
Trending
- DAKSHINA KANNADA5 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- DAKSHINA KANNADA3 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- LATEST NEWS6 days ago
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
- DAKSHINA KANNADA4 days ago
ಚಲಿಸುತ್ತಿದ್ದ ಅಟೋ ಗೆ ಅಡ್ಡ ಬಂದ ನಾಯಿ; ಅ*ಪಘಾತ ತಪ್ಪಿಸುವ ಯತ್ನದಲ್ಲಿ ಯಕ್ಷಗಾನ ಕಲಾವಿದನಿಗೆ ಗಾಯ