ಬಂಟ್ವಾಳ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಡೆದಾಟದಲ್ಲಿ ಗಾಯಗೊಂಡಿದ್ದ ಓರ್ವನ ಸ್ಥಿತಿ ಗಂಭೀರವಾಗಿದೆ.
ಬಂಧಿತರನ್ನು ಗಣೇಶ(27), ದಿನೇಶ(19) ವಿನೀತ್(19), ಶಶಿಕುಮಾರ್ ಬಂಧಿತರು. ಉಳಿದವರೆಲ್ಲರೂ ತಲೆಮರೆಸಿಕೊಂಡಿದ್ದಾರೆ.
ಸಾಲೆತ್ತೂರಿನ ಅಗರಿಯಲ್ಲಿ ಹಿಂದೂ ಸಂಘಟನೆಯ ಪ್ರಶಾಂತ್ ಹಾಗೂ ಚಂದ್ರಹಾಸ ಕನ್ಯಾನ ಎಂಬ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿತ್ತು.
ಇತ್ತಂಡಗಳೂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ನೇತೃತ್ವದ ತಂಡ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಘಟನೆಯಲ್ಲಿ ಗಾಯಗೊಂಡ ಪ್ರಶಾಂತ್‌ಗೆ ಪೊಲೀಸ್ ಅಧೀನದಲ್ಲಿ ಚಿಕಿತ್ಸೆ ಮುಂದುವರೆದಿದೆ. ಆತನ ಸ್ಥಿತಿ ಗಂಭೀರವಾಗಿದ್ದು, ಕಿಡ್ನಿ ಮತ್ತು ಹೊಟ್ಟೆ ಭಾಗದಲ್ಲಿ ರಕ್ತಸ್ರಾವವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಶಾಂತ್ ಈ ಹಿಂದೆ ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ.
ಅಂತೆಯೇ ಪಿಂಕಿ ನವಾಜ್‌ನನ್ನು ಕಾಟಿಪಳ್ಳದ 2ನೇ ಬ್ಲಾಕ್‌ನಲ್ಲಿರುವ ಟಿಕ್‌ಟಾಕ್ ಗಾರ್ಡನ್ ಬಳಿ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಂಡ ಮಾರಕಾಸ್ತ್ರದಿಂದ ಅಟ್ಟಾಡಿಸಿ ಕೊಲೆಗೆ ಯತ್ನಿಸಿದ್ದರು. ಈ ತಂಡದಲ್ಲಿ ಪ್ರಶಾಂತ್ ಕೂಡ ಭಾಗಿಯಾಗಿದ್ದ. ಮತ್ತು ಪೊಲೀಸರು ಈತನನ್ನು ಬಂಧಿಸಿದ್ದರು.