ನವದೆಹಲಿ: ಕುಡಿದ ಮತ್ತಿನಲ್ಲಿ ಅಂಗಡಿಯವನ ಜೊತೆ ವೈದ್ಯರಿಬ್ಬರು ಗಲಾಟೆ ಮಾಡಿದ ಪ್ರಕರಣ ದೆಹಲಿಯ ಗೌತಮ್ ನಗರದಲ್ಲಿ ನಡೆದಿದ್ದು, ಏಮ್ಸ್‌ಯ ಇಬ್ಬರು ವೈದ್ಯರು ಸೇರಿದಂತೆ ನಾಲ್ವರು ಗಾಯಗೊಂಡ ವರದಿಯಾಗಿದೆ.
ಈ ಘಟನೆ ಬುಧವಾರ ಘಟನೆ ನಡೆದಿದ್ದು, ಭಗತ್ ಸಿಂಗ್ ವರ್ಮಾ ಎಂಬವರ ಅಂಗಡಿಗೆ ಏಮ್ಸ್‌ನ ಇಬ್ಬರು ವೈದ್ಯರು ಮದ್ಯ ಸೇವಿಸಿ ಹೋಗಿದ್ದರು. ಈ ವೇಳೆ ವೈದ್ಯರು ಮತ್ತು ಅಂಗಡಿಯವರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಎರಡೂ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಹೇಳಿದ್ದಾರೆ.
ಘಟನೆಯಲ್ಲಿ ಏಮ್ಸ್‌ನ ಇಬ್ಬರು ವೈದ್ಯರು ಮತ್ತು ಅಂಗಡಿ ಮಾಲೀಕ ಭಗತ್ ಸಿಂಗ್ ವರ್ಮಾ ಮತ್ತು ಪುತ್ರ ಅಭಿಷೇಕ್ ಗಾಯಗೊಂಡಿದ್ದು, ಪ್ರಕರಣ ದಾಖಲಾಗಿದೆ.