Connect with us

LATEST NEWS

ಮಕ್ಕಳ ಜೀವಕ್ಕೆ ಕುತ್ತು ತಂದ ಇಲಿ ಪಾಷಾಣ

Published

on

ಮನೆಯಲ್ಲಿ ಇಲಿ ಕಾಟ ಹೆಚ್ಚಿದೆ ಎಂದು ಪೋಷಕರು ರೂಮಿನಲ್ಲಿ ಇಲಿ ಪಾಷಾಣವನ್ನಿಟ್ಟು ಮಲಗಿದ್ದಾರೆ, ಬೆಳಗಾಗುವಷ್ಟರಲ್ಲಿ ಇಲಿಗಳ ಬದಲು ಇಬ್ಬರು ಮಕ್ಕಳು ಕೊನೆಯು*ಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದೆ,. ರಾತ್ರಿ ಇಲಿ ಪಾಷಾಣವನ್ನು ಪುಡಿ ರೂಪದಲ್ಲಿ ರೂಮಿನಲ್ಲಿರಿಸಿದ್ದರು. ಚೆನ್ನೈ ಹೊರವಲಯದಲ್ಲಿರುವ ಕುಂದ್ರತೂರಿನ ಮನಂಚೇರಿ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ನಾಲ್ವರು ಕುಟುಂಬ ಸದಸ್ಯರು ಕೋಣೆಯಲ್ಲಿ ಇಲಿ ವಿಷವನ್ನು ಪುಡಿಮಾಡಿಟ್ಟು ಮಲಗಿದ್ದರು. ಫ್ಯಾನ್​ನಿಂದಾಗಿ ಆ ಪುಡಿಯನ್ನು ಅವರು ಗಾಳಿಯ ಮೂಲಕ ಉಸಿರಾಡಿದ್ದ ಕಾರಣ ಇಬ್ಬರು ಸಾ*ವನ್ನಪ್ಪಿದ್ದಾರೆ.

ಮರುದಿನ ಅಕ್ಕಪಕ್ಕದ ಮನೆಯವರು ಗಿರಿಧರನ್, ಪವಿತ್ರಾ, ಅವರ ಒಂದು ವರ್ಷದ ಮಗ ಮತ್ತು ಆರು ವರ್ಷದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಎಲ್ಲರೂ ವಾಂತಿ ಮಾಡಿಕೊಂಡಿದ್ದರು. ಮಗ ಸಾಯಿ ಸುದರ್ಶನ್ ಮತ್ತು ಮಗಳು ವಿಶಾಲಿನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಗಿರಿಧರನ್ ಮತ್ತು ಪವಿತ್ರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಕುಂದ್ರತ್ತೂರು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕೀಟ ನಿಯಂತ್ರಣ ಕಂಪನಿಯ ಇಬ್ಬರು ಸಿಬ್ಬಂದಿ ಇಲಿ ವಿಷವನ್ನು ಹಾಕಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ತೋರಿಸುತ್ತವೆ.

ಈ ಇಲಿ ವಿಷವನ್ನು ಪುಡಿಯ ರೂಪದಲ್ಲಿ ಇರಿಸಿದ್ದರು. ಮುಚ್ಚಿದ ಹವಾನಿಯಂತ್ರಿತ ಕೋಣೆಯಾಗಿದ್ದ ಕಾರಣ ಆ ವಿಷ ಇಡಿ ರೂಮನ್ನು ಆಕ್ರಮಿಸಿತ್ತು. ನಾಲ್ವರೂ ರಾತ್ರಿಯಿಡೀ ತಿಳಿಯದೆ ವಿಷಗಾಳಿಯನ್ನು ಉಸಿರಾಡಿದ್ದರು. ಕೀಟ ನಿಯಂತ್ರಣ ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

LATEST NEWS

ತೆಂಗಿನಕಾಯಿ ತುರಿಯುವಾಗ ಮೈಮೇಲಿನ ಶಾಲು ಗ್ರೈಂಡರ್‌ಗೆ ಸಿಲುಕಿ ಮೈಮುನಾ ಮೃ*ತ್ಯು

Published

on

ಕಾಸರಗೋಡು: ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಮೈಮೇಲಿನ ಸಾಲು ಗ್ರೈಂಡರ್‌ಗೆ ಸಿಲುಕಿ ಕತ್ತು ಬಿಗಿದು ಗೃಹಿಣಿ ಮೃ*ತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.

ಉಪ್ಪಳಗೇಟ್ ಅಪ್ಪಾಗಲ್ಲಿ ನಿವಾಸಿ ಇಬ್ರಾಹಿಂ ಎಂಬುವವರ ಪತ್ನಿ ಮೈಮುನಾ (17) ಮೃ*ತಪಟ್ಟ ಮಹಿಳೆ.

ಗ್ರೈಂಡರ್‌ನ ಟಾಪ್ ನಲ್ಲಿ ತೆಂಗಿನಕಾಯಿ ತುರಿಯುವ ಉಪಕರಣವಿದ್ದು, ಅದರಲ್ಲಿ ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಕುತ್ತಿಗೆಯಲ್ಲಿ ಧರಿಸಿದ್ದ ಶಾಲು ಗ್ರೈಂಡರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಗ್ರೈಂಡರ್‌ ಶಾಲನ್ನು ಎಳೆದುಕೊಂಡಿದ್ದು, ಮಹಿಳೆಯ ಕುತ್ತಿಗೆಯನ್ನು ಗಟ್ಟಿಯಾಗಿ ಬಿಗಿದುಕೊಂಡಿದ್ದು ಅವರು ಜೋರಾಗಿ ಕಿರುಚಿಕೊಂಡಿದ್ದಾರೆ.

ತಕ್ಷಣ ಅವರ ನೆರವಿಗೆ ಧಾವಿಸಿದ ಮನೆಯವರು ಕೂಡಲೇ ಅವರನ್ನು ಉಪ್ಪಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಬಳಿಕ ಮೃ*ತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರ*ಣೋ*ತ್ತರ ಪರೀಕ್ಷೆ ನಡೆಸಲಾಯಿತು.

ಮೃ*ತರ ಪತಿ ಇಬ್ರಾಹಿಂ ಪೂಣದಲ್ಲಿ ವ್ಯಾಪಾರಿಯಾಗಿದ್ದಾರೆ. ಮೃ*ತರು ಪತಿ, ಮಕ್ಕಳಾದ ಸಾಬಿತ್, ಸಫ, ಸಾವಿಲ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗ*ಲಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

ಕಾರ್ಕಳ : ಪತಿ ತೀ*ರಿದ ನೋ*ವಿನಿಂದ ಆತ್ಮಹ*ತ್ಯೆ ಮಾಡಿಕೊಂಡ ಪತ್ನಿ

Published

on

ಕಾರ್ಕಳ:ಪತಿ ಅ*ಗಲಿಕೆಯ ನೋ*ವಿನಿಂದ ಅಂಗನವಾಡಿ ಟೀಚರ್ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ. ಸೌಮ್ಯ(39) ಆ*ತ್ಮಹ*ತ್ಯೆ ಮಾಡಿಕೊಂಡ ಮಹಿಳೆ.

ಮಿಯ್ಯಾರು ಚರ್ಚ್ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಸೌಮ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಒಂದು ತಿಂಗಳ ಹಿಂದೆ ಮೃ*ತಪಟ್ಟಿದ್ದರು. ಇದರಿಂದ ಮಾ*ನಸಿಕವಾಗಿ ನೊಂದಿದ್ದ ಸೌಮ್ಯ, ಮನೆ ಸಮೀಪದ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!

ಮೃ*ತದೇಹವನ್ನು ಕಾರ್ಕಳ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶ*ವಗಾರದಲ್ಲಿ ಇರಿಸಲಾಗಿದೆ. ಮೃ*ತ  ಸೌಮ್ಯ ಇಬ್ಬರು ಹೆಣ್ಣು ಮಕ್ಕಳನ್ನು ಅ*ಗಲಿದ್ದಾರೆ.

Continue Reading

LATEST NEWS

ಮದುವೆಯಾಗಿ ಉಳಿದ ಹಣದಿಂದ ಶಾಲೆಗೆ ಶುದ್ಧ ನೀರಿನ ಯಂತ್ರ ವಿತರಣೆ !!

Published

on

ಮಂಗಳೂರು/ ಹಾಸನ : ಇಂಜಿನಿಯರ್ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್​ 11 ರಂದು ಸರಳ ವಿವಾಹವಾಗುವ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ ಗಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.

ಅತ್ಯಂತ ಅದ್ದೂರಿ

ಮತ್ತು ಆಡಂಭವಾಗಿ ಮದುವೆಯಾಗುವ ಈ ಕಾಲದಲ್ಲಿ, ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಶೇಷ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನಿಡುವ ಮೂಲಕ ಸಮಾಜ ಸೇವೆ ಗೈದಿದ್ದಾರೆ. ಈ ಸತ್ಕಾರ್ಯಕ್ಕೆ ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಪ್ರೇರಣೆ ಎಂದು ಹೇಳಿದ್ದಾರೆ.

ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಳಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.

Continue Reading

LATEST NEWS

Trending

Exit mobile version