DAKSHINA KANNADA
ಹನಿಟ್ರಾಪ್ ಜಾಲ ಭೇಧಿಸಿದ ಮಂಗಳೂರು ಸಿಸಿಬಿ: ಇಬ್ಬರ ಬಂಧನ-ಚಿನ್ನಾಭರಣ ವಶ
Published
3 years agoon
By
Adminಮಂಗಳೂರು: ಹನಿಟ್ರಾಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಾಸನ ಅರಕಲಗೂಡು ತಾಲೂಕಿನ ಕುಮಾರ್ ಯಾನೆ ರಾಜು ಮತ್ತು ಕೊಡಗು ಶನಿವಾರ ಸಂತೆ ಮೈಲಾಪುರ ಗ್ರಾಮದ ಭವ್ಯಾ ದಂಪತಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಮಂಗಳೂರಿನ ಪದವಿನಂಗಡಿಯ ಬಾಡಿಗೆ ಮನೆಯ ದಂಪತಿ ನಡುವಿನ ಸಮಸ್ಯೆಯನ್ನು ಪರಿಹರಿಸಲು ಮನೆಯಲ್ಲಿ ಪೂಜೆ ಮಾಡಬೇಕೆಂದು ಪುರೋಹಿತರನ್ನು ಕರೆಸಿ ಹನಿಟ್ರಾಪ್ ಮಾಡಿ ವ್ಯಕ್ತಿಯನ್ನು ಸುಲಿಗೆ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ.
ಆರೋಪಿಗಳು ಇದೇ ರೀತಿ ಹಲವರಿಗೆ ಸುಲಿಗೆ ಮಾಡಿರುವ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳಿಂದ 37 ಸಾವಿರ ರೂಪಾಯಿ ಮೌಲ್ಯದ 2 ಚಿನ್ನದ ರಿಂಗ್, ನಗದು ಹಣ ಹಾಗೂ 31 ಸಾವಿರ ರೂಪಾಯಿ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಜೊತೆ ಇನ್ನೂ ಹಲವರು ಭಾಗಿಯಾಗಿದ್ದಾರೆ, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್ ಇನಸ್ಪೆಕ್ಟರ್ ಅವರ, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿರುವುದಲ್ಲದೇ, ಇನ್ನಷ್ಟು ಹಣವನ್ನು ನೀಡದೇ ಇದ್ದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಪೋಟೊ ಮತ್ತು ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದರು ಎಂದರು.
ಹನಿಟ್ರಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು.
ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು ಈ ಕೃತ್ಯವೆಸಗಿದ ನಂತರ ಫಿರ್ಯಾದಿದಾರರಿಂದ ಸುಲಿಗೆ ಮಾಡಿದ ಹಣದಲ್ಲಿ ರೂ 10 ಲಕ್ಷ ಹಣವನ್ನು ನೀಡಿ ಫ್ಲಾಟ್‌ವೊಂದನ್ನು ಲೀಸ್‌ಗೆ ಪಡೆದುಕೊಂಡಿರುವುದಲ್ಲದೇ, ಈ ಫ್ಲಾಟ್ ಗೆ ಸುಮಾರು 7 ಲಕ್ಷ ಮೌಲ್ಯದ ಮನೆ ಸಾಮಾಗ್ರಿಗಳನ್ನು ಖರೀದಿಸಿದ್ದಾರೆ.
ಅಲ್ಲದೇ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಿದ್ದಾರೆ.
ಆರೋಪಿ ಭವ್ಯಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದರು.
DAKSHINA KANNADA
ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ; ಮೂವರಿಗೆ ಗಾಯ
Published
2 hours agoon
30/11/2024By
NEWS DESK4ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ ಯಾಗಿ ಇಬ್ಬರು ಗಾ*ಯಗೊಂಡಿದ್ದು, ಓರ್ವ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ನಡೆದಿದೆ.
ಆಟೋ ಚಾಲಕ ಪಕ್ಷಿಕೆರೆ ಕಾಪಿಕಾಡು ನಿವಾಸಿ ರಾಮಚಂದ್ರ ( 45) ಮತ್ತು ಪ್ರಯಾಣಿಕ ಶೇಕ್ ಸಾಹೇಬ್ (60) ಗಾಯಗೊಂಡವರು.
ಇದನ್ನೂ ಓದಿ : ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
ಶೇಕ್ ಸಾಹೇಬ್ ಪಕ್ಷಿಕೆರೆಯಿಂದ ಆಟೋ ಮೂಲಕ ಮೂಲ್ಕಿ ಕಡೆಗೆ ಹೋಗುತ್ತಿದ್ದಾಗ ಕೆರೆಕಾಡು ಬಳಿ ನಾಯಿ ಅಡ್ಡ ಬಂದಿದ್ದು ಅಪಘಾ*ತ ತಪ್ಪಿಸಲು ಯತ್ನಿಸಿದಾಗ ಆಟೋ ಪ*ಲ್ಟಿಯಾಗಿದೆ. ಅಪ*ಘಾತದ ರಭಸಕ್ಕೆ ಆಟೋದಲ್ಲಿದ್ದವರು ಗಾ*ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
DAKSHINA KANNADA
ಅ*ನ್ಯಕೋಮಿನ ಯುವಕನಿಂದ ವಿದ್ಯಾರ್ಥಿನಿಗೆ ಕಿ*ರುಕುಳ; ದೂರು ದಾಖಲಿಸಲು ಪೊಲೀಸರ ಹಿಂದೇಟು !!
Published
4 hours agoon
30/11/2024ಕುಂಬಳೆ: ಬೆಳಗಿನ ಜಾವ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಹಿಂದು ವಿಧ್ಯಾರ್ಥಿನಿಗೆ ಅ*ನ್ಯಕೋಮಿನ ಯುವಕನೊಬ್ಬ ಕಿ*ರುಕುಳ ನೀಡಲು ಪ್ರಯತ್ನಿಸಿದ ವೇಳೆ ಆತನನಿಂದ ತಪ್ಪಿಸಿಕೊಂಡು ಯುವತಿ ತನ್ನ ಮನೆಯವರು ಹಾಗು ಹಿಂದು ಐಕ್ಯವೇದಿ ನೇತಾರರ ಜೊತೆಗೆ ಹೋಗಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.
ಕಿ*ರುಕುಳ ನೀಡಲು ಯತ್ನಿಸಿದ ಯುವಕ ತಂಗಲ್ ವೀಡ್ ಪರಿಸರದ ಕುಂಬಳೆ ಸಿ. ಎಚ್. ಸಿ ರೋಡ್ ನಿವಾಸಿ ನೌಫಲ್ ಎಂಬಾತನೆಂದು ತಿಳಿದುಬಂದಿದೆ.
ಈತ ಪ್ರಸ್ತುತ ತಂಗಳಬೀಡು ಪರಿಸರವಾಸಿ ಎಂದು ಗುರುತಿಸಲಾಗಿದ್ದು, ಈ ವಿಚಾರದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ ವೇಳೆ ಪೊಲೀಸರು ಪ್ರಕರಣ ದಾಖಲಿಸದೆ ನೌಫಾಲ್ ನನ್ನು ಕೇಸಿನಿಂದ ಪಾರು ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ವಿಷಯವನ್ನು ಅರಿತ ಹಿಂದು ಐಕ್ಯ ವೇದಿ ನೇತಾರರು ಮತ್ತು ಮನೆಯವರು ಈ ವಿಚಾರವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯ ಗಮನಕ್ಕೆ ತಂದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದಂತೆ ಕುಂಬಳೆ ಪೊಲೀಸರು ದೂರು ದಾಖಲಿಸಿ ಕೊಂಡರು.
*ಒಂದೊಂದು ಮತದವರಿಗೆ ಒಂದೊಂದು ಕಾನೂನು ಎಂದು ಹೇಳಲು ಕೇರಳ ರಾಜ್ಯವೆಂಬುದು ಒಂದು ಪ್ರತ್ಯೇಕ ಮತ ರಾಜ್ಯವಲ್ಲ* ಎಂದು ಹಿಂದು ಐಕ್ಯ ವೇದಿ ಕುಂಬಳೆ ಪಂಚಾಯತ್ ಸಮಿತಿಯು ಅಭಿಪ್ರಾಯವನ್ನು ಹಿಂದೂ ಐಕ್ಯವೇದಿ ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದೆ. ಇಂತಹ ಕುಕೃತ್ಯಗಳನ್ನು ಮಾಡುವವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಜರುಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಶುಕ್ರವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 92ನೇ ವರ್ಷದ ಸರ್ವ ಧರ್ಮ ಸಮ್ಮೇಳನ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಲು ಆಗಮಿಸಿದ್ದ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್, ಅಧ್ಯಕ್ಷತೆಯನ್ನು ವಹಿಸಿದ್ದ ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಸಹಿತ ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ದೀಪ ಬೆಳಗಿ ಉದ್ಘಾಟಿಸಿದರು. ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ವಿಶ್ವಮಾನ್ಯತೆ ದೊರಕಿದ ಹಿನ್ನೆಲೆಯಲ್ಲಿ ಡಾ ವೀರೇಂದ್ರ ಹೆಗ್ಗಡೆ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಡಾ ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ತನ್ನ ಅಜ್ಜ ಮಂಜಯ್ಯ ಹೆಗ್ಗಡೆ ಅವರು ಆರಂಭಿಸಿದ ಈ ಸಮ್ಮೇಳನವನ್ನು ತಂದೆ ರತ್ನವರ್ಮ ಹೆಗ್ಗಡೆ ಮುನ್ನಡೆಸಿದ್ದು, ಇದೀಗ 91 ವರ್ಷಗಳು ಸಂದು ಹೋದವು ಎಂದರು. ಈ ವೇದಿಕೆಯಲ್ಲಿ ಹಲವು ಮಂದಿ ಹಿರಿಯ ವಿದ್ವಾಂಸರು, ಮಾನವೀಯ, ಆದರ್ಶದ ಹಾದಿಯನ್ನು ನಾವು ಮುನ್ನಡೆಯಬೇಕೆಂದು ಹಿತವಚನ ನಿಡಿದರು. ಜನವರಿ 1ರಿಂದ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಉಚಿತವಾಗಿ ಸಿಗಲಿದೆ. ವರ್ಷಕ್ಕೆ 10,000 ಬಡ ರೋಗಿಗಳಿಗೆ ನೆರವಾಗಲಿದೆ ಎಂದರು.
ಗೃಹ ಮಂತ್ರಿ ಜಿ ಪರಮೇಶ್ವರ, ಸ್ವಾಮೀಜಿ ಮತ್ತು ಅತಿಥಿಗಳಿಗೆ ಹೆಗ್ಗಡೆ ಗೌರವಾಭಿನಂದನೆ ಸಲ್ಲಿಸಿದರು. ಡಾ ಪರಮೇಶ್ವರ ಮಾತನಾಡಿ, ಸರಕಾರಗಳು ಮಾಡದಿರುವ ಕೆಲಸಗಳನ್ನು ಇಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಮಾಡಿದ್ದಾರೆ. ಸರ್ವಧರ್ಮದ ಸಂದೇಶ ಇಂದಿನ ದಿನ ಬಹಳ ಅಗತ್ಯವಿದೆ. ದೇಶಕ್ಕೆ ಸಂವಿಧಾನ ಬರುವ ಮುಂಚೆಯೇ ಧರ್ಮಸ್ಥಳದಲ್ಲಿ ಸರ್ವಧರ್ಮ ಸಂದೇಶ ಸಾರುವ ಕಾರ್ಯ ನಡೆಯುತ್ತಿದೆ ಎಂದರು.
ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಜಗತ್ತೇ ಪರಮೇಶ್ವರ ಮಯ. ಈ ಜ್ಞಾನ ಇರುವವರು ಸಮಾನತೆ ಅನುಸರಿಸುತ್ತಾರೆ. ಇಲ್ಲದದವರು ದ್ವೇಷ ಸಾಧಿಸುತ್ತಾರೆ. ಸಹಬಾಳ್ವೆ ದೂರ ಮಾಡುವ ಯಾವುದಾದರೂ ಮತವಿದ್ದರೆ ಅದಕ್ಕೆ ಭೂಮಿಯಲ್ಲಿರುವಅಧಿಕಾರವೇ ಇಲ್ಲ. ಅಂತಹ ಮತವನ್ನು ಪರಿಷ್ಕರಿಸಬೇಕು ಎಂದರು.
ಸಂಶೋಧಕ ಡಾ ಜಿ ಬಿ ಹರೀಶ್, ಮಾಜಿ ಪ್ರಾಂಶುಪಾಲ ಡಾ ಜೋಸೆಫ್ ಎನ್ ಎಂ, ವಿಜಯಪುರದ ಮೆಹತಾಬಾ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಿದರು. ಡಿ ಸುರೇಂದ್ರ ಕುಮಾರ್, ಡಿ. ಹರ್ಷೇoದ್ರ ಕುಮಾರ್, ಹೇಮಾವತಿ ವೀ. ಹೆಗ್ಗಡೆ, ಶ್ರದ್ದಾ ಅಮಿತ್, ಸುಪ್ರಿಯಾ ಹರ್ಷೇoದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುನೀಲ್ ಪಂಡಿತ್ ಮೊದಲಾದವರಿದ್ದರು. ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಪ್ರಾಧ್ಯಾಪಕ ಡಾ ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.
LATEST NEWS
ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ: ಸರ್ಕಾರದ ಮಹತ್ವದ ಯೋಜನೆ
‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ
ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಹುಲ್ಲು ತರಲು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶ*ವವಾಗಿ ಪತ್ತೆ; ಚಿರತೆ ದಾ*ಳಿ ಶಂಕೆ
ಆರ್ಸಿಬಿಗೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ !
ಕಟಪಾಡಿ: ಪತ್ನಿ ನಿ*ಧನದ ಬೆನ್ನಲ್ಲೇ ಆಘಾತದಿಂದ ಪತಿ ಸಾ*ವು
Trending
- BANTWAL2 days ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- FILM1 day ago
ಪುತ್ರಿಯೊಂದಿಗೆ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ; ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ
- Ancient Mangaluru3 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
- LATEST NEWS2 days ago
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !