ಕರಾವಳಿಯ ಪ್ರತಿಭಾನ್ವಿತ ನಟ ತುಳುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಸೀಸನ್ 9ರ (Bigg Boss Kannada Season 9) ವಿನ್ನರ್ ಆಗಿದ್ದಾರೆ.
ಬೆಂಗಳೂರು : ಕರಾವಳಿಯ ಪ್ರತಿಭಾನ್ವಿತ ನಟ ತುಳುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ಸೀಸನ್ 9ರ (Bigg Boss Kannada Season 9) ವಿನ್ನರ್ ಆಗಿದ್ದಾರೆ.
ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ.
ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.
ರಾಕೇಶ್ ಅಡಿಗಗೆ (Rakesh Adiga) ಟಫ್ ಫೈಟ್ ಕೊಟ್ಟು, ಬಿಗ್ ಬಾಸ್ ವಿನ್ನರ್ ಟೈಟಲ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ’ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ದಕ್ಕಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ. ಕಟ್ ಆಗಲಿದೆ.
ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42 ಲಕ್ಷ ರೂಪಾಯಿ ಸಿಗಲಿದೆ. ಹತ್ತು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ.
ಒಟ್ನಲ್ಲಿ ರೂಪೇಶ್ ಶೆಟ್ಟಿ ಗೆಲವು ಕನ್ನಡಿಗರಿಗೆ, ತುಳುನಾಡಿನ ಸಮಸ್ತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.