ಬೆಂಗಳೂರು: ‘ಕಾಂತಾರ’ ಸಿನಿಮಾ ಬಿಡುಗಡೆಗೊಂಡ ಬಳಿಕ ದೈವಾರಾಧನೆಗೆ ಸಂಬಂಧಪಟ್ಟಂತೆ ಅನೇಕ ವಾದ ವಿವಾದಗಳು ವಿಭಿನ್ನವಾದ ಮಜಲುಗಳನ್ನು ಪಡೆದುಕೊಳ್ಳುತ್ತಿದೆ. ಇದೇ ಸಂದರ್ಭ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ದೈವಾರಾಧನೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು ಕರಾವಳಿಗರು ಸಿಡಿದೆದ್ದಿದ್ದಾರೆ.
ಫೋಟೋ: ಪಬ್ಲಿಕ್ ಟಿವಿ ಕೃಪೆ
ನಿನ್ನೆ ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವರಾಧನೆಯ ಕಾರ್ಯಕ್ರಮವಿತ್ತು. ಇದರಲ್ಲಿ ತೇಜಸ್ವಿ ಅವರು ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದು ಪೋಸ್ ಕೊಟ್ಟಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ದೈವವನ್ನು ಪೂಜ್ಯ ಭಾವದಿಂದ ಆರಾಧಿಸಿಕೊಂಡು ಬರುತ್ತಿರುವ ತುಳುನಾಡಿನ ಜನರೂ ಕೂಡಾ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಫೋಟೋ ವೈರಲ್ ಬೆನ್ನಲ್ಲೇ ದೈವಾರಾಧನೆಗೆ ತೇಜಸ್ವಿ ಅವಮಾನ ಮಾಡಿದ್ದಾರೆ ಎನ್ನುವ ಆಕ್ರೋಶಭರಿತ ಹೇಳಿಕೆಗಳು ಹೊರಬಿದ್ದಿದೆ.
ಸದ್ಯ ಈ ಫೋಟೊವನ್ನು ಸಾಮಾಜಿಕ ಜಾಲತಾಣದಿಂದ ಸಂಸದರು ಡಿಲೀಟ್ ಮಾಡಿದ್ದಾರೆ.
ದೋಸೆ ಸೂರ್ಯ, ದೋಸೆ ಸೂರ್ಯಾ, ದೂಸೇ ಸೂರ್ಯಾ, ದೋಸೇ ಸೂರ್ಯಾ
Looks he removed shoe… He is wearing shocks.