ಮಂಗಳೂರು: ಹೊರದೇಶದಲ್ಲಿದ್ದರೂ ಕೂಡ ಸದಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಹೆಸರುವಾಸಿಯಾದ ಸಂಘ ತುಳುಕೂಟ ಕುವೈಟ್.
ಅದೇ ರೀತಿ ಸರ್ವ ಧರ್ಮದ ಬಂಧುಗಳನ್ನ ಒಟ್ಟು ಸೇರಿಸಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವಲ್ಲಿ ಈ ಸಂಘದ ಕಾರ್ಯ ಪ್ರಶಂಸನೀಯ.
ವರ್ಷಂಪ್ರತಿ ಪರಶುರಾಮನ ಸೃಷ್ಟಿಯ ತುಳು ಭೂಮಿಯ ತುಳು ಪರ್ಬ ಅನ್ನುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ತುಳುಕೂಟ ಕುವೈಟ್ ನಡೆಸಿಕೊಂಡು ಬರುತ್ತಿದೆ,
ಈ ಅರ್ಥಪೂರ್ಣ ಕಾರ್ಯಕ್ರಮ ಈ ಬಾರಿಯೂ ನಾಳೆ ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಮತ್ತು ಕುವೈಟ್ ಕಾಲಮಾನ ಸಂಜೆ 4 ಗಂಟೆಗೆ ನಡೆಯಲಿದೆ.
ಈ ಬಾರಿಯ ತುಳು ಪರ್ಬದಲ್ಲಿ ಸಂಗೀತ-ಹಾಸ್ಯ–ನಾಟ್ಯ-ವೈಭವದ ಸಂಗಮ ನಡೆಯಲಿದ್ದು, Excellence dance instituteನಿಂದ ನೃತ್ಯ ವೈವಿಧ್ಯ ಮತ್ತು ತುಳುನಾಡ ಬೀರೆದಿ ರಾಣಿ ಅಬ್ಬಕ್ಕ-ನೃತ್ಯ ರೂಪಕ ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಪಡೆದ ರಾಜ್ ಗೋಪಾಲ್ ತಂಡದಿಂದ ಸಂಗಿತ ರಸ ಮಂಜರಿ ಕಾರ್ಯಕ್ರಮ ಹಾಗೂ ತುಳುನಾಡಿನ ಪ್ರಸಿದ್ಧ ಹಾಸ್ಯ ಕಲಾವಿದರಿಂದ ‘ಮನಸ್ ಗೆಂದಿ ಮನ್ಮಥೆ’ ಎನ್ನುವ ವಿನೂತನ ಹಾಸ್ಯ ಪ್ರಹಸನ ನಡೆಯಲಿದೆ.
ಬರೋಬ್ಬರಿ 22 ವರ್ಷಗಳಿಂದ ಅರಬ್ ನಾಡಿನಲ್ಲಿ ತುಳುನಾಡಿನ ಕಂಪನ್ನು ಪಸರಿಸುತ್ತಿರುವ ತುಳು ಕೂಟ ಕುವೈಟ್ ನ ಈ ಕಾರ್ಯಕ್ರಮ ಕಳೆದ ಬಾರಿ ನಮ್ಮ ಕುಡ್ಲವಾಹಿನಿಯಲ್ಲಿ ಲಕ್ಷಾಂತರ ಜನರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು,
ಈ ಬಾರಿಯೂ ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಈ ಕಾರ್ಯಕ್ರಮವನ್ನು ವರ್ಚುವಲ್ ಮಾಧ್ಯಮದಲ್ಲಿ ನಡೆಸುತ್ತಿದ್ದು, ನಮ್ಮ ಕುಡ್ಲ ವಾಹಿನಿ ಟಿವಿ, ಯೂಟ್ಯೂಬ್, ಹಾಗೂ ತುಳು ಕೂಟ ಕುವೈಟ್ ಫೇಸ್ ಬುಕ್, ಯೂಟೂಬ್ ನಲ್ಲಿ ನೇರಪ್ರಸಾರವಾಗಲಿದೆ.