Saturday, November 26, 2022

 ಅಕ್ಟೋಬರ್ 28, ತುಳುಕೂಟ ಕುವೈತ್ ನ ಹೆಮ್ಮೆಯ ಸಾಂಸ್ಕೃತಿಕ ಕಾರ್ಯಕ್ರಮ “ತುಳು ಪರ್ಬ -2022”

ಕುವೈಟ್ :  ಹೊರದೇಶದಲ್ಲಿದ್ದರೂ ಸದಾ ಸಮಾಜಮುಖಿ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿರುವ ತುಳುನಾಡಿನ ಹೆಮ್ಮೆಯ ತಂಡ ತುಳುಕೂಟ ಕುವೈಟ್. 

ಪ್ರತಿ ವರ್ಷ ತುಳು ಪರ್ಬ ಅನ್ನುವ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಜನಮನ್ನಣೆಗೆ ಪಾತ್ರವಾಗಿರುವ ಈ ಕಾರ್ಯಕ್ರಮ ಅಕ್ಟೋಬರ್ 28 ರಂದು ಅಮೇರಿಕನ್ ಇಂಟರ್‌ನ್ಯಾಶನಲ್ ಸ್ಕೂಲ್, ಮೈದಾನ ಹವಳ್ಳಿಯಲ್ಲಿ ಸಂಭ್ರಮ ಸಡಗರದಿಂದ ನಡೆಯಲಿದೆ.

ತುಳು ಕೂಟ ಕುವೈತ್ ಸಮಾಜಮುಖಿ ಚಟುವಟಿಕೆಗಳ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಸಂಸ್ಥೆ. ಈ ವರ್ಷ ತುಳು ಕೂಟ ಕುವೈತ್ ವಿವಿಧ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ‘ಪ್ರಾಜೆಕ್ಟ್ ಶಿಕ್ಷಣ’ ಅಡಿಯಲ್ಲಿ ಶಾಲೆಗೆ ಬೇಕಾಗಿರುವ ಉಪಕರಣಗಳು, ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ವಿದ್ಯಾರ್ಥಿ ವೇತನ, ಜೊತೆಗೆ ರಕ್ತದಾನ ಶಿಬಿರ, ಉದ್ಯಾನವನ ಸ್ವಚ್ಛತಾ ಕಾರ್ಯಕ್ರಮ, ಒಳಾಂಗಣ ಕಬಡ್ಡಿ, ಥ್ರೋಬಾಲ್ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.

ಅದೇ ರೀತಿ ಪ್ರತಿ ವರ್ಷ ನಡೆಯುವ ತುಳು ಕೂಟ ಕುವೈತ್ ಹೆಮ್ಮೆಯ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ತುಳು ಪರ್ಬ -2022 ಅಕ್ಟೋಬರ್ 28 ರಂದು ಅಮೇರಿಕನ್ ಇಂಟರ್‌ನ್ಯಾಶನಲ್ ಸ್ಕೂಲ್, ಮೈದಾನ ಹವಳ್ಳಿಯಲ್ಲಿ ಈ ಬಾರಿ 23 ನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಸಂಧರ್ಭ ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥ ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟಗಾರರ, ಪ್ರಮುಖ ವ್ಯಕ್ತಿಗಳ ಕೊಡುಗೆಗಳನ್ನು ಬಿಂಬಿಸುವ ರಾಷ್ಟ್ರ ಪ್ರೇಮವನ್ನು ಪಸರಿಸುವ ಸಲುವಾಗಿ 100 ಕ್ಕೂ ಹೆಚ್ಚು ಟಿಕೆಕೆ ಸದಸ್ಯರು ಏಕಕಾಲದಲ್ಲಿ ವೇದಿಕೆಯಲ್ಲಿ ‘ಭರತ ವರ್ಷ’ ಭವ್ಯ-ನೃತ್ಯ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಜೊತೆಗೆ ತುಳುನಾಡಿನ ಹೆಮ್ಮೆಯ ಕಾಪುವಿನ ರಂಗ ತರಂಗದ ಅತಿಥಿ ಕಲಾವಿದರ ತಂಡದಿಂದ ತುಳು ನಾಟಕ ಅಧ್ಯಕ್ಷೆ ಪ್ರದರ್ಶನಗೊಳ್ಳಲಿದ್ದು, ಕಾರ್ಯಕ್ರಮವು ವೀಕ್ಷಕರಿಗೆ ಸಂಪೂರ್ಣ ಮನರಂಜನೆಯೊಂದಿಗೆ ಉತ್ತಮ ಸಾಂಸ್ಕೃತಿಕ ಹಬ್ಬವಾಗಿದ್ದು, ಎಲ್ಲಾ ಸಮಿತಿಯ ಸದಸ್ಯರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತುಳು ಕೂಟ ಕುವೈತ್ ನ ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ ಸರ್ವರಿಗೂ ಪ್ರೀತಿಯ ಸ್ವಾಗತವನ್ನು ಕೋರಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ..! 2 ದಿನದಲ್ಲಿ ಇಬ್ಬರು ಬಲಿ..!

ಬೆಳ್ತಂಗಡಿ:  ಬೆಳ್ತಂಗಡಿಯಲ್ಲಿ 2 ದಿನದಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಜೀವಕಳಕೊಂಡಿದ್ದಾರೆ. ಎಳೆ ವಯಸ್ಸಿನ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ಕೊಡುವ ಪೋಷಕರಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ.  ಮಡಂತ್ಯಾರು ಸೆಕ್ರೆಡ್ ಹಾರ್ಟ್...

ಮಂಗಳೂರು ಬಲ್ಮಠ ರಸ್ತೆಯಲ್ಲಿ ಕಾರ್ ಬೆಂಕಿಗಾಹುತಿ..!

ಮಂಗಳೂರು : ನಗರದ ಬಲ್ಮಠ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ಇಂದು ಅಪರಾಹ್ನ ಸಂಭವಿಸಿದೆ.ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಲಾಗಿದ್ದ ಫೋರ್ಡ್‌ ಕಂಪೆನಿ ಕಾರು ಬೆಂಕಿಗಾಹುತಿಯಾಗಿದೆ.ಕಾರಿನ ಇಂಜಿನ್...