ತುಳು ಪಾತೆರ್ ಗ ತುಳು ಒರಿಪಾಗ ದುಬೈ ಇದರ 10ನೇ ವರ್ಷದ ಗೌಜಿ ಗಮ್ಮತ್ ತುಳುನಾಡ ಗೊಬ್ಬುಳೆದ ಲೇಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದುಬೈ ಕರಮದ ಝಾಬೀಲ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ದುಬೈ : ತುಳು ಪಾತೆರ್ ಗ ತುಳು ಒರಿಪಾಗ ದುಬೈ ಇದರ 10ನೇ ವರ್ಷದ ಗೌಜಿ ಗಮ್ಮತ್ ತುಳುನಾಡ ಗೊಬ್ಬುಳೆದ ಲೇಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದುಬೈ ಕರಮದ ಝಾಬೀಲ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಕೂಟದ ಹಿರಿಯ ಸದಸ್ಯರುಗಳಾದ ಪ್ರಭಾಕರ ಶೆಟ್ಟಿ, ನೋವನ್ ಡಿ ಅಲ್ಮೇಡ, ಅಜ್ಮಲ್ ದುಬೈ, ಸತೀಶ್ ಉಳ್ಳಾಲ್, ಸಂದೀಪ್ ಕೋಟ್ಯಾನ್, adyasharada ಪ್ರೇಮ್ ಜಿತ್ ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಶುಭ ಹಾರೈಸಿದರು .
ಮಾರ್ಚ್ 12ಕ್ಕೆ ದುಬೈ ಕರಮದ ಝಾಬೀಲ್ ಪಾರ್ಕ್ ನಲ್ಲಿ ಬೆಳ್ಳಗ್ಗೆ 9:30 ರಿಂದ ಸಂಜೆ 6:00 ಗಂಟೆಯ ತನಕ ನಡೆಯಲಿರುವ ತುಳುನಾಡಿನ ಆಟಗಳದ ಹಗ್ಗ ಜಗ್ಗಾಟ, ಲಗೋರಿ, ಕಬ್ಬಡ್ಡಿ, ಸೈಕಲ್ ಚಕ್ರ ಓಡಿಸುವುದು, ಹೀಗೆ ನಾನಾ ತರದ ಆಟಗಳು ಹಾಗೂ 10 ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿರುವುದು.
ದುಬೈ ಯ ತುಳುವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಂದಗಾಣಿಸಿ ಕೊಡಬೇಕಾಗಿ ವಿನಂತಿಸಿಕೊಂಡು ತಂಡದ ಪ್ರಧಾನ ಕಾರ್ಯದರ್ಶಿ ರಿತೇಶ್ ಅಂಚನ್ ರವರು ತಿಳಿಸಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ಕೂಟದ ಸದಸ್ಯರುಗಳಾದ ಸತೀಶ್ ಪೂಜಾರಿ, ಕವಿರಾಜ್, ದೀಪಕ್ ಸನಿಲ್, ಮನೋಜ್ ಕುಲಾಲ್, ಶೋಬಿತ ಪ್ರೇಮ್ ಜಿತ್, ಚೇತನ್ ಕುಲಾಲ್, ಅಕ್ಷಯ್ ಕುಲಾಲ್, ಪ್ರೇಮಶ್ರೀ , ವಿಜೇಶ್, ಸುಧೀರ್ ನೀರ್ ಮಾರ್ಗ, ಪ್ರಕಾಶ್ ಭಟ್, ಆದರ್ಶ್ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.