ಮಂಗಳೂರು: ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆಯು ಸರಕಾರದ ಗಮನಕ್ಕೆ ಬಂದಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ತಿಳಿಸಿದ್ದಾರೆ.
ಈ ಸಂಬಂಧಿತ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಪ್ರಶ್ನೆಗೆ ಸದನದಲ್ಲಿ ಲಿಖೀತ ಉತ್ತರ ನೀಡಿರುವ ಸಚಿವರು, ತುಳು ಸೇರಿದಂತೆ ಇನ್ನಿತರ ಹಲವು ಭಾಷೆಗಳು 8 ನೇ ಪರಿಚ್ಛೇದಕ್ಕೆ ಸೇರಿಸಲು ಕಾಲಕಾಲಕ್ಕೆ ಬೇಡಿಕೆಗಳು ಬರುತ್ತಿವೆ. ಯಾವುದೇ ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಸ್ಥಿರ ಮಾನದಂಡಗಳಿಲ್ಲ. ಹಾಗೆಯೇ ನಿರ್ದಿಷ್ಟ ಮಾನದಂಡ ವಿಧಿಸುವುದೂ ಕಷ್ಟಕರವಾಗಿದೆ. ಆದರೆ ತುಳು ಸಹಿತ ಇತರ ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆಗಳು ಹಾಗೂ ಅದರ ಅಗತ್ಯದ ಬಗ್ಗೆ ಸರಕಾರ ಜಾಗೃತವಾಗಿದೆ ಎಂದು ತಿಳಿಸಿದ್ದಾರೆ.
ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಜನರು ಒತ್ತಾಯಿಸುತ್ತಿರುವುದು ಸರಕಾರದ ಗಮನದಲ್ಲಿ ಇದೆಯೇ ? ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ? ಎಂದು ಸಂಸದ ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪತ್ರ (2003) ಸಮಿತಿಯ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು 8ನೇ ಪರಿಚ್ಛೇದದ ಅಡಿಯಲ್ಲಿ ಹೆಚ್ಚಿನ ಭಾಷೆಗಳ ಸೇರ್ಪಡೆಗಾಗಿ ವಿನಂತಿಗಳನ್ನು ಪರಿಗಣಿಸಲು ಯಾವೆಲ್ಲ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚೌಟ ಪ್ರಶ್ನಿಸಿದ್ದರು.
ಈಗಾಗಲೇ 22 ಭಾಷೆಗಳನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಿದ್ದು ತುಳುವನ್ನು ಸೇರಿಸಬೇಕೆಂಬ ಹಕ್ಕೊತ್ತಾಯ ಕರಾವಳಿಯಲ್ಲಿ ಹೆಚ್ಚಿದೆ.
ಮಂಗಳೂರು : ಸ್ಪೀಕರ್ ಯು.ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆದ ನರಿಂಗಾನ 3ನೇ ವರ್ಷದ “ಲವ – ಕುಶ” ಜೋಡುಕರೆ ಕಂಬಳ ಇಂದು(ಜ.13) ಬೆಳಗ್ಗೆ ಸಮಾರೋಪ ಕಂಡಿದೆ. ನರಿಂಗಾನ ಕಂಬಳದಲ್ಲಿ ದಾಖಲೆ ಸಂಖ್ಯೆ ಕೋಣಗಳು ಭಾಗವಹಿಸಿವೆ. ಒಟ್ಟು 265 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದು ಕಂಬಳ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯಾಗಿದೆ. ಈ ಹಿಂದೆ ಪುತ್ತೂರು ಕಂಬಳದಲ್ಲಿ 268 ಜೊತೆ ಕೋಣಗಳು ಭಾಗವಹಿಸಿದ್ದವು.
ಕನೆಹಲಗೆ 10 ಜೊತೆ, ಅಡ್ಡಹಲಗೆ 10 ಜೊತೆ, ಹಗ್ಗ ಹಿರಿಯ 28 ಜೊತೆ, ನೇಗಿಲು ಹಿರಿಯ 28 ಜೊತೆ, ಹಗ್ಗ ಕಿರಿಯ 25 ಜೊತೆ , ನೇಗಿಲು ಕಿರಿಯ 60 ಜೊತೆ, ಸಬ್ ಜೂನಿಯರ್ ನೇಗಿಲು 104 ಜೊತೆ ಸೇರಿದಂತೆ ಒಟ್ಟು 265 ಜೋಡಿ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶ ವಿವರ :
ಕನೆ ಹಲಗೆ : ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು : ಬೈಂದೂರು ರಾಗಿಹಿತ್ಲು ರಾಘವೇಂದ್ರ
ಕಾಂತಾವರ ಬೇಲಾಡಿ ಬಾವ ಪ್ರಜೋತ್ ಶೆಟ್ಟಿ
ಹಲಗೆ ಮುಟ್ಟಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ
ಅಡ್ಡ ಹಲಗೆ :
ಪ್ರಥಮ : ನಾರಾವಿ ಯುವರಾಜ್ ಜೈನ್ “ಎ” (12.18)
ಹಲಗೆ ಮುಟ್ಟಿದವರು : ಭಟ್ಕಳ ಹರೀಶ್
ದ್ವಿತೀಯ : ಬೋಳಾರ ತ್ರಿಶಾಲ್ ಕೆ ಪೂಜಾರಿ (12.45)
ಹಲಗೆ ಮುಟ್ಟಿದವರು : ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ
ಹಗ್ಗ ಹಿರಿಯ :
ಪ್ರಥಮ : ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ “ಎ” (11.83)
ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ : ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.89)
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ಹಗ್ಗ ಕಿರಿಯ :
ಪ್ರಥಮ : ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಎ”
ಓಡಿಸಿದವರು : ಭಟ್ಕಳ ಶಂಕರ್
ದ್ವಿತೀಯ : ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ”
ಓಡಿಸಿದವರು : ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ನೇಗಿಲು ಹಿರಿಯ :
ಪ್ರಥಮ : ಬೋಳ್ಯಾರು ಪೊಯ್ಯೆ ನರ್ಮದ ಉಮೇಶ್ ಶೆಟ್ಟಿ (11.56)
ಓಡಿಸಿದವರು : ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ : ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ (11.87)
ಓಡಿಸಿದವರು : ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ನೇಗಿಲು ಕಿರಿಯ :
ಪ್ರಥಮ : ಭಟ್ಕಳ ಎಚ್.ಎನ್ ನಿವಾಸ ಪಿನ್ನುಪಾಲ್ (12.07)
ಓಡಿಸಿದವರು : ಸೂರಾಲು ಪ್ರದೀಪ್ ನಾಯ್ಕ್
ದ್ವಿತೀಯ : ಮೂಡುಬಿದ್ರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ (12.13)
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಎನ್ಐಟಿಕೆ, ನೇತ್ರಾವತಿ ಸೇತುವೆ, ಅದೆಷ್ಟೋ ಹೈವೇಗಳು…ಅದೆಷ್ಟೋ ಶಾಲಾ-ಕಾಲೇಜುಗಳು… ಇದರೆಲ್ಲದರ ಹಿಂದೆ ಇರುವ ಒಂದೇ ಒಂದು ಹೆಸರು ಉಳ್ಳಾಲ ಶ್ರೀನಿವಾಸ ಮಲ್ಯ.
ಯು.ಎಸ್ ಮಲ್ಯ 1902 ರಲ್ಲಿ ನಮ್ಮ ಮಂಗಳೂರಿನ ಕಾರ್ ಸ್ಟ್ರೀಟ್ ಹತ್ತಿರದ ಗೌಡ ಸಾರಸ್ವತಿ ಕುಟುಂಬದಲ್ಲಿ ಹುಟ್ಟಿದರು. ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿತು ಬಳಿಕ ಕೆನರಾ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ಸ್ವಾತಂತ್ರ್ಯ ಹೋರಾಟದ ಆ ಸಮಯದಲ್ಲಿ ಕಾರ್ನಾಡ್ ಸದಾಶಿವ ರಾವ್ ಅವರ ದೇಶಭಕ್ತರ ತ್ಯಾಗವನ್ನು ನೋಡಿ ಪ್ರೇರಿತರಾದ ಶ್ರೀನಿವಾಸ ಮಲ್ಯ ಇವರೂ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಾರೆ.
ಕ್ವಿಟ್ ಇಂಡಿಯಾ, ದಂಡಿಯಾತ್ರೆ ಇದರೆಲ್ಲದರಲ್ಲೂ ಪಾಲು ಪಡೆಯುತ್ತಾರೆ. ಹೀಗೆ ಹೋರಾಟದಲ್ಲೇ ಮುಂದೆ ಹೋದಂತಹ ಮಲ್ಯರಿಗೆ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ ಇವರೆಲ್ಲರೂ ಆಪ್ತರಾಗುತ್ತಾರೆ. ಭಾರತ ಸ್ವಾತಂತ್ರ್ಯ ಆದ ನಂತರ ಆದಂತಹ ಚುನಾವಣೆಯಲ್ಲಿ 1952, 1957 ಮತ್ತು 1962 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾರೆ.
ಜನಪ್ರತಿನಿಧಿ ಒಬ್ಬನಿಗೆ ಕೆಲಸ ಮಾಡುವ ಇಚ್ಛಾಶಕ್ತಿ ಒಂದಿದ್ದರೆ ಯಾವ ರೀತಿಯ ಕ್ರಾಂತಿಯನ್ನು ಮಾಡಬಹುದು ಎಂಬುದಕ್ಕೆ ಯು.ಎಸ್ ಮಲ್ಯರು ದೊಡ್ಡ ಉದಾಹರಣೆ. ಹೌದು, ಯು. ಎಸ್ ಮಲ್ಯರು ಸಂಸದರಾಗಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು-ಹಾಸನ-ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಸುರತ್ಕಲ್ನಲ್ಲಿರುವ ಎನ್ಐಟಿಕೆ, ನವಮಂಗಳೂರು ಬಂದರು, ಆಕಾಶವಾಣಿ, ಎಂ.ಸಿ.ಎಫ್, ಮಂಗಳೂರಿನ ಸಕ್ಯೂಟ್ ಹೌಸ್, ಮಂಗಳೂರು ಪುರಭವನ, ವೆನ್ಲಾಕ್ ಆಸ್ಪತ್ರೆಯ ಅಭಿವೃದ್ಧಿ, ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಗಂಗೊಳ್ಳಿ ಈ ಎಲ್ಲದರ ಸೇತುವೆ ನಿರ್ಮಾಣ, ಆಲ್ ಇಂಡಿಯಾ ಹ್ಯಾಂಡಿ ಕ್ಯಾಪ್ ಬೋರ್ಡ್, ಇಂಡಿಯಾ ಕಾರ್ಪೋರೇಟರ್ ಯೂನಿಯನ್ ಮುಖೇನ ಲಕ್ಷಾಂತರ ಜನರಿಗೆ ಉದ್ಯೋಗ ಹೀಗೆ ಹೇಳಿಕೊಂಡು ಹೋದರೆ ಅದೆಷ್ಟೋ ಇವೆ.
ಇಂತಹ ಮಹಾನ್ ವ್ಯಕ್ತಿ 1965 ರಲ್ಲಿ ಡಿಸೆಂಬರ್ 19 ರಂದು ದೆಹಲಿಯಿಂದ ಮಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಸಮಯದಲ್ಲಿ ಹೃದಯಾ*ಘಾತವಾಗುತ್ತದೆ. ಈ ಸುದ್ದಿಯನ್ನು ಕೇಳಿದಂತಹ ಅಂದಿನ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ದೆಹಲಿಗೆ ಅವರು ಇದ್ದಂತಹ ಸ್ಥಳಕ್ಕೆ ಓಡಿ ಬರುತ್ತಾರೆ. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕಳುಹಿಸುತ್ತಾರೆ.
ಒಂದು ಕಡೆಯಲ್ಲಿ ಭಾರತ-ಪಾಕಿಸ್ತಾನ ಯುದ್ಧ ಆಗುತ್ತಿದ್ದಂತಹ ಸಮಯ ಅದು. ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ಪಲ್ಪ ಹೊತ್ತು ಸಾರ್ವಜನಿಕ ವೀಕ್ಷಣೆಗಾಗಿ ಅವರ ಶರೀರವನ್ನು ಇಡುತ್ತಾರೆ. ಆ ಮೂಲಕವಾಗಿ ಯು.ಎಸ್. ಮಲ್ಯ ಎನ್ನುವ ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾಗುತ್ತಾರೆ.
ನಮ್ಮ ಜಿಲ್ಲೆಯ ಅಭಿವೃದ್ಧಿಯ ವಿಷಯ ಬರುವಾಗ ಉಳ್ಳಾಲ ಶ್ರೀನಿವಾಸ ಮಲ್ಯ ಎನ್ನುವ ಹೆಸರು ಯಾವಾಗಲೂ ಚಿರಸ್ಥಾಯಿ. ಇವತ್ತಿಗೂ ನಾವು ನವ ಮಂಗಳೂರು ಬಂದರಿನ ಪ್ರವೇಶ ದ್ವಾರ, ಪದುವ ಹೈಸ್ಕೂಲ್ನ ಎದುರುಗಡೆ, ಸುರತ್ಕಲ್ ಎನ್ಐಟಿಕೆ ಸ್ಮಾರಕ ಭವನ, ಪಡೀಲ್ ಸರ್ಕಲ್ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಅವರ ಶಾಶ್ವತ ಪ್ರತಿಮೆ ಹಾಗೂ ಹೆಸರನ್ನು
ನಾವು ಕಾಣಬಹುದು. ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿರುವ ಒಂದು ಅಶ್ವಥ ಮರವಿದೆ. ಇದು ಯು.ಎಸ್ ಮಲ್ಯರಿಗೆ 60 ವರ್ಷ ಆದಾಗ ಅವರು ನೆಟ್ಟಂತಹ ಸಸಿ. ಒಂದು ರೀತಿಯಲ್ಲಿ ಈ ಮರವನ್ನು ಅವರ ಪ್ರತಿನಿಧಿ ಎಂದು ಹೇಳಬಹುದು.
ತನ್ನ ಸ್ವಂತಕ್ಕಾಗಿ ಯಾವುದನ್ನೂ ಮಾಡದೆ ಈ ಊರು ಒಳ್ಳೆಯದಾಗಬೇಕು, ಊರಿನ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಭಾವನೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತವಾದಂತಹ ಕೊಡುಗೆಯನ್ನು ನೀಡಿದಂತಹ ಮಹಾನ್ ವ್ಯಕ್ತಿ ಉಳ್ಳಾಲ ಶ್ರೀನಿವಾಸ ಮಲ್ಯ ನಮ್ಮ ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ ಎನ್ನುವಂತದ್ದೇ ಹೆಮ್ಮೆ ಪಡುವ ಸಂಗತಿ.
ಉಳ್ಳಾಲ : ಕೊಣಾಜೆ ದೇರಳಕಟ್ಟೆ ಸಮೀಪದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಲವ- ಕುಶ ಜೋಡುಕರೆ ನರಿಂಗಾನ ಜೋಡುಕರೆ ಕಂಬಳೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಿದ್ದರು.
ಸಿಎಂ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಲಾಯಿತು. ಸ್ಪೀಕರ್ ಯು ಟಿ ಖಾದರ್ ಸಿಎಂ ಅವರನ್ನು ವೇದಿಕೆಗೆ ಕರೆದುಕೊಂಡು ಬಂದರು. ಸಭಾ ಕಾರ್ಯಕ್ರಮವನ್ನು ಸಿಎಂ ಅವರು ಉದ್ಘಾಟಿಸಿದರು.
ಇಂದಿನ ಕಂಬಳ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಶಾನ್ವಿ ಶ್ರೀವಾಸ್ತವ್, ಕಂಬಳದ ಓಟವನ್ನು ಬೆರಗುಗಣ್ಣಿನಿಂದ ವೀಕ್ಷಣೆ ಮಾಡಿದರು. ಮಾತ್ರವಲ್ಲದೆ ಕಂಬಳದ ಓಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡರು.