Friday, August 12, 2022

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ ‘ತುಳು ಕೂಟ ಸಿಡ್ನಿ’ಯು ಜು.17ರಂದು ಸಿಡ್ನಿಯಲ್ಲಿ ‘ಆಟಿಡ್‌ ಒಂಜಿ ದಿನ’ ಆಯೋಜಿಸಿದೆ.


ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ ಆರ್ಕೇಡಿಯಾದ ಕಮ್ಯೂನಿಟಿ ಸೆಂಟರ್‌ನಲ್ಲಿ ನಡೆಯಲಿದೆ.

ಇದು ಉಚಿತ ಪ್ರವೇಶವಾಗಿದ್ದು, ಅಂದು ತುಳುವರೇ ಸೇರಿಕೊಂಡು ತುಳುನಾಡ ಖಾದ್ಯಗಳಾದ ಚಿಕನ್‌ ಸುಕ್ಕ, ಚಿಕನ್‌ ಸಾರು, ಕುಡುತ ಸಾರ್‌, ಕುಡು ಚಟ್ನಿ, ಪದೆಂಗಿ ಗಸಿ, ಕಡಲೆ ಮಣೊಲಿ, ಸೇಮಿಗೆ, ತೆಂಗಿನ ಸಾರು, ಪುಂಡಿ, ಕಾಣೆ ಪುಳಿ ಮಂಚಿ, ನುಂಗೆಲ್‌ ಚಟ್ನಿ, ಕುಚ್ಚಲ ಅಕ್ಕಿಯ ಊಟ, ಕಡ್ಲೆ ಬೇಳೆ ಪಾಯಸ ಹಾಗೂ ಸಿಹಿ ತಿಂಡಿಗಳನ್ನು ತಯಾರಿಸಲಿದ್ದಾರೆ.

‘ಸಿಡ್ನಿ ಸ್ಪೋರ್ಟ್‌ ಕ್ಲಬ್‌’ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಲಿದೆ ಎಂದು ‘ತುಳು ಕೂಟ ಸಿಡ್ನಿ’ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿರುವ ತುಳುವರನ್ನು ಒಗ್ಗೂಡಿಸಲು ತುಳುವರಿಂದ ತುಳುವರಿಗೋಸ್ಕರ ಪ್ರಾರಂಭವಾಗಿರುವ ‘ತುಳು ಕೂಟ ಸಿಡ್ನಿ’ ಯು ಕೆಲ ತಿಂಗಳ ಹಿಂದೆಯಷ್ಟೇ ವಾಟ್ಸಪ್‌ ಮೂಲಕ ಪ್ರಾರಂಭವಾಗಿದೆ.

ಸದ್ಯ ಅವಕಾಶ್‌ ಚಂದ್‌ ಹಾಗೂ ಸುಮೀತ್‌ ಪ್ರಭಾಕರ್‌ ಎಂಬ ಇಬ್ಬರು ತುಳುವರು ಹೆಚ್ಚಿನ ಆಸಕ್ತಿ ವಹಿಸಿ ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಈ ಹಿಂದೆ ಇದೇ ತಂಡ ‘ರಾಜ್‌ ಸೌಂಡ್ಸ್‌ &ಲೈಟ್ಸ್’ ಎಂಬ ತುಳು ಚಿತ್ರವನ್ನು ಸಿಡ್ನಿಯಲ್ಲಿ ಬಿಡುಗಡೆ ಮಾಡಲು ಸಹಾಯ ಮಾಡಿತ್ತು. ಆ ಚಿತ್ರವು ಹೌಸ್‌ಫುಲ್‌ ಪ್ರದರ್ಶನ ಕೂಡಾ ಕಂಡಿತ್ತು.

LEAVE A REPLY

Please enter your comment!
Please enter your name here

Hot Topics

ಕಾಪು: ಫ್ರಿಡ್ಜ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌-ಸುಟ್ಟು ಭಸ್ಮವಾದ ಸೊತ್ತುಗಳು

ಕಾಪು: ಮನೆಯೊಂದರಲ್ಲಿ ಫ್ರಿಡ್ಜ್‌ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮನೆಯ ಸೊತ್ತುಗಳು ಸುಟ್ಟು ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ ಕಾಪುವಿನ ಪೊಲಿಪುವಿನಲ್ಲಿ ಸಂಭವಿಸಿದೆ.ದಿನೇಶ್ ಪೂಜಾರಿ ಅವರ ವಸತಿ ಸಂಕೀರ್ಣದ ಮೇಲಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗುರುರಾಜ್ ಅವರು...

ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಆಯ್ಕೆ

ಮಂಗಳೂರು: ಕದ್ರಿ ವಲಯ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಕದ್ರಿ ಮಲ್ಲಿಕಟ್ಟೆ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಘೋಷಿಸಲಾಯಿತು.ಅದರಲ್ಲಿ ಶಿವಳ್ಳಿ ಸ್ಪಂದನ ಉಪಾಧ್ಯಕ್ಷರು- ಸದಾನಂದ...

ಮಂಗಳೂರು ಪಾಲಿಕೆಯ ಸದಸ್ಯ ಎ.ಸಿ ವಿನಯ್ ರಾಜ್‌ಗೆ ಪುತ್ರ ವಿಯೋಗ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಪಕ್ಷ ನಾಯಕ ಎ.ಸಿ ವಿನಯ್ ರಾಜ್ ಅವರ ಪುತ್ರ ರಾಹುಲ್ ವಿನಯರಾಜ್ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಸಂಜೆ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ. ಆಂತೋನಿ...