ಕರಿಪುರ(kerala) : ಎಂಟು ಚಿನ್ನಾಭರಣಗಳನ್ನು ಬಾಯಲ್ಲಿ ಬಚ್ಚಿಟ್ಟುಕೊಂಡ ಪ್ರಯಾಣಿಕನೊಬ್ಬ ಕೇರಳದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆಬಿದ್ದಿದ್ದಾನೆ. ಕಾಸರಕೋಟ್ ಪೆರುಂಬಳ ವಲಿಯಮೂಲ ನಿವಾಸಿ ಅಬ್ದುಲ್ ಅಫ್ಜಲ್ (24) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಈ ಬರೋಬ್ಬರಿ 8 ಚಿನ್ನದ ನಾಣ್ಯಗಳನ್ನು ಬಾಯಲ್ಲಿಟ್ಟುಕೊಂಡು ಏರ್‌ಪೋರ್ಟಿಗೆ ಬಂದಿದ್ದ.
ಶಾರ್ಜಾದಿಂದ ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಫ್ಜಲ್ ವಿಮಾನ ನಿಲ್ದಾಣದೊಳಗೆ ತಪಾಸಣೆ ನಡೆಸಿ ಹೊರಗೆ ಬಂದಾಗ ಕರಿಪುರ ಪೊಲೀಸರು ಬಂಧಿಸಿದ್ದಾರೆ.
233 ಗ್ರಾಂ (29 ಪವನ್) ಚಿನ್ನವನ್ನು ನಾಲಿಗೆ ಮತ್ತು ಇತರ ಸ್ಥಳಗಳಲ್ಲಿ ಮರೆಮಾಡಲಾಗಿತತ್ತು.
ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಸುಜಿತ್ ದಾಸ್ ನೀಡಿದ ಸುಳಿವಿನ ಮೇರೆಗೆ ಕಸ್ಟಮ್ಸ್ ತಪಾಸಣೆ ಮುಗಿಸಿ ಏನೂ ತಿಳಿಯದವರಂತೆ ಮಾಸ್ಕ್ ಧರಿಸಿ ಹೊರ ಬಂದಿದ್ದ ಅಫ್ಜಲ್‌ನನ್ನು ವಶಕ್ಕೆ ಪಡೆದಾಗ ಚಿನ್ನ ಪತ್ತೆಯಾಗಿದೆ.