Friday, July 1, 2022

ರೈತರಿಗೆ ಬೆಂಬಲವಾಗಿ ನಿಂತ ಟ್ರಕ್ ಮಾಲಕರು:ಡಿ.8ರಿಂದ ಉ.ಭಾ ಕಾರ್ಯಾಚರಣೆ ಸ್ಥಗಿತ:ಎ.ಐ.ಎಂ.ಟಿ.ಸಿ..!

ರೈತರಿಗೆ ಬೆಂಬಲವಾಗಿ ನಿಂತ ಟ್ರಕ್ ಮಾಲಕರು:ಡಿ.8ರಿಂದ ಉ.ಭಾ ಕಾರ್ಯಾಚರಣೆ ಸ್ಥಗಿತ:ಎ.ಐ.ಎಂ.ಟಿ.ಸಿ..! 

ನವದೆಹಲಿ: ಕೇಂದ್ರದ ವಿರುದ್ದ ರೈತರು ಆರಂಭಿಸಿದ್ದ ಪ್ರತಿಭಟನೆ ಮುಂದುವೆರೆದಿದ್ದು, ಇದೀಗ ರೈತರಿಗೆ ಬೆಂಬಲವಾಗಿ ಟ್ರಕ್ ಮಾಲಕರು ಅಖಾಡಕ್ಕೆ ಇಳಿದಿದ್ದಾರೆ.

ಬೆಂಬಲವಾಗಿ ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸರಕು ಸಾರಿಗೆ ವಾಹನಗಳ ಪ್ರಮುಖ ಸಂಸ್ಥೆ ಎ.ಐ.ಎಂ.ಟಿ.ಸಿ. ಹೇಳಿದೆ.ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆ   95 ಲಕ್ಷ ಟ್ರಕ್ ಮತ್ತು ಇತರೆ ಸರಕು ಸಾಗಾಣೆ ವಾಹನ ಪ್ರತಿನಿಧಿಸುವ ಉನ್ನತ ಸಂಸ್ಥೆಯಾಗಿದೆ.

ರೈತರು ಹೋರಾಟ ಆರಂಭಿಸಿದ ಮೊದಲ ದಿನದಿಂದಲೂ ಬೆಂಬಲ ನೀಡುತ್ತಿರುವ ಈ ಸಂಸ್ಥೆ ಡಿಸೆಂಬರ್ 8 ರಿಂದ ಉತ್ತರ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.

ರೈತರ ಸಮಸ್ಯೆಯನ್ನು ಬಗೆಹರಿಸದಿದ್ದರೆ  ಸರಕು ಸಾರಿಗೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗುವುದು.  ಅನ್ನದಾತ ರೈತರಿಗೆ ಆಹಾರ ಪೂರೈಕೆದಾರರಾದ ಲಾರಿ ಮಾಲೀಕರು ಸಂಪೂರ್ಣ ಬೆಂಬಲ ನೀಡುತ್ತಾರೆ.

ರೈತರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಡಿಸೆಂಬರ್ 8 ರಿಂದ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ರಾಜಸ್ಥಾನ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಸರಬರಾಜು ಸಾರಿಗೆ ಸಂಚಾರ ನಿಲ್ಲಿಸುತ್ತೇವೆ ಎಂದು ಎಐಎಂಟಿಸಿ ಕೋರ್ ಕಮಿಟಿ ಅಧ್ಯಕ್ಷ ಬಾಲ್ ಮಲ್ಕಿತ್ ಸಿಂಗ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ನೂಪುರ್‌ ಶರ್ಮಾ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದ ಸುಪ್ರೀಂ ಕೋರ್ಟ್‌

ನವದೆಹಲಿ: ಶರ್ಮಾ ಅವರ ಹಿಡಿತವಿಲ್ಲದ ನಾಲಿಗೆ ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ದೇಶದ ಭದ್ರತೆಗೇ ಆತಂಕ ಉಂಟುಮಾಡಿದೆ. ಶರ್ಮಾ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ.ಪ್ರವಾದಿ...

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿ ಜೀವಾಂತ್ಯ

ಉಡುಪಿ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಮತ್ತೆ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ನಿನ್ನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಾನಸ (17)...