Connect with us

LATEST NEWS

ಟ್ರಕ್‌ನಿಂದ ಡ್ರೈವರ್‌ ಅನ್ನು ಬಿಸಾಡಿ 9 ಸಾವಿರ ಮೊಬೈಲ್‌ ಎಗರಿಸಿದ ದುಷ್ಕರ್ಮಿಗಳು

Published

on

ಮಥುರಾ: ಸುಮಾರು 7 ಕೋಟಿ ರೂಪಾಯಿ ಮೌಲ್ಯದ 9 ಸಾವಿರ ಮೊಬೈಲ್​ ಫೋನ್​​ಗಳನ್ನು ಒಯ್ಯುತ್ತಿದ್ದ ಟ್ರಕ್​​​ ಡ್ರೈವರ್‌ ಅನ್ನು ಹೊರಗೆ ಬಿಸಾಡಿ, ಟ್ರಕ್‌ನಲ್ಲಿದ್ದ ಮೊಬೈಲ್‌ ಅನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆ.


ಪ್ರಕರಣದ ಬಗ್ಗೆ ಮಥುರಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಟಂಡ್​ ಪ್ರಕಾಶ್​ ಸಿಂಗ್​ ವಿವರಿಸಿದ್ದಾರೆ. ಲಾರಿ ಲೂಟಿಯಾಗಿರುವ ಬಗ್ಗೆ ಒಪ್ಪೊ ಮೊಬೈಲ್​ ಕಂಪನಿಯ ಮ್ಯಾನೇಜರ್​ ಸಚಿನ್​ ಮಾನವ್​ ಎಂಬುವರು ದೂರು ನೀಡಿದ್ದಾರೆ.

ಲಾರಿ ಚಾಲಕ ಮನೀಶ್ ಯಾದವ್​ ಉತ್ತರಪ್ರದೇಶದ ಫಾರೂಖಾಬಾದ್​ ಜಿಲ್ಲೆಯವನು. ಅಕ್ಟೋಬರ್​ 5ರಂದು ಮುಂಜಾನೆ ಬೆಂಗಳೂರಿನಿಂದ ಸುಮಾರು 9 ಸಾವಿರ ಮೊಬೈಲ್​​ ಫೋನ್​​ಗಳನ್ನು ಟ್ರಕ್​​ನಲ್ಲಿ ತುಂಬಿಕೊಂಡು ನೊಯ್ಡಾಕ್ಕೆ ಹೊರಟಿದ್ದ.

ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿರುವ ಬೈಪಾಸ್​ ಬಳಿ ಈತನ ಲಾರಿಗೆ ಇಬ್ಬರು ಪ್ರಯಾಣಿಕರು ಹತ್ತಿದ್ದರು. ಲಾರಿ ಝಾನ್ಸಿಯ ಬಬಿನಾ ಟೋಲ್​ ದಾಟುತ್ತಿದ್ದಂತೆ ಈ ಪ್ರಯಾಣಿಕರ ಸೋಗಿನಲ್ಲಿ ಲಾರಿ ಹತ್ತಿದ್ದ ಇಬ್ಬರು ಚಾಲಕನಿಗೆ ಥಳಿಸಲು ಶುರು ಮಾಡಿದರು.

ನಂತರ ಆತನನ್ನು ಲಾರಿಯಿಂದ ಎತ್ತಿ ಬಿಸಾಕಿದ್ದಾರೆ. ಟ್ರಕ್​​​ನೊಂದಿಗೆ ಪರಾರಿಯಾಗಿದ್ದಾರೆ. ಅಂದಹಾಗೆ ಈ ಟ್ರಕ್​​ ಶಿಯೋಪುರ್​​​ನ ಮನ್​​ಪುರ್​​ನಲ್ಲಿ ಸಿಕ್ಕಿದ್ದು, ಖಾಲಿಯಾಗಿತ್ತು.

ಅದರಲ್ಲಿರುವ ಮೊಬೈಲ್​​​ಗಳು ಯಾವುದೂ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಒಪ್ಪೋ ಕಂಪನಿ ಮ್ಯಾನೇಜರ್​ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದರು.

ಆದರೆ ಘಟನೆ ನಡೆದದ್ದು ಮಥುರಾ ಗಡಿಯ ಬಳಿ ಆಗಿದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅವರು ಹೋಗಿ ಮಥುರಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ತನಿಖೆ ನಡೆಸಲು ಪೊಲೀಸ್​ ತಂಡವನ್ನು ರಚಿಸಲಾಗಿದೆ. ಮಧ್ಯಪ್ರದೇಶ ಪೊಲೀಸರೂ ಕೂಡ ಕಾರ್ಯಾಚರಣೆಗೆ ಇಳಿದಿದ್ದಾರೆ.

ಸಿಸಿಟಿವಿ ಫೂಟೇಜ್​​​ಗಳನ್ನು ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳ ಲೊಕೇಶನ್​ ಪತ್ತೆ ಕಾರ್ಯವೂ ನಡೆಯುತ್ತಿದೆ

LATEST NEWS

ಈ ಶ್ರೀನಿವಾಸನ ವಿಗ್ರಹಕ್ಕೆ ಸೂರ್ಯನ ಕಿರಣಗಳು ಬೀಳುವ ಹಾಗಿಲ್ಲ..!

Published

on

ಆಂಧ್ರಪ್ರದೇಶ: ತಿರುಪತಿ ತಿಮ್ಮಪ್ಪನಿಗೆ ಇರೋವಷ್ಟು ಭಕ್ತರು ಬಹುಶಃ ಯಾವ ದೇವರಿಗೂ ಇಲ್ಲ ಅಂತಾನೇ ಹೇಳಬಹುದು . ಇದೇ ಕಾರಣದಿಂದ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಆದ್ರೆ ಈ ದೇವಸ್ಥಾನದಲ್ಲಿರೋ ಅದೊಂದು ರಹಸ್ಯ ಮಾತ್ರ ದೇವಸ್ಥಾನಕ್ಕೆ ಬೇಟಿ ನೀಡೋ ಬಹುತೇಕ ಭಕ್ತರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಭಕ್ತರು ಕಾಣುವ ಶ್ರೀನಿವಾಸ ಮಂದಸ್ಮಿತನಾಗಿದ್ದರೆ, ಗರ್ಭಗುಡಿಯಲ್ಲಿರೋ ಶ್ರೀನಿವಾಸ ಕೋಪಿಷ್ಠನಾಗಿದ್ದು, ಹುಬ್ಬುಗಳನ್ನು ಗಂಟು ಹಾಕಿಕೊಂಡಿದ್ದಾನೆ. ವರ್ಷಕ್ಕೊಂದು ಬಾರಿ ಮಾತ್ರ ಹೊರ ಬರುವ ಈತನ ಮೇಲೆ ಸೂರ್ಯ ರಶ್ಮಿ ಬಿದ್ರೆ ಜಗತ್ತಿಗೆ ಅಪಾಯ ಇದೆ ಅಂತಾರೆ.

ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಈ ಉತ್ಸವ ಮೂರ್ತಿಯನ್ನು ವರ್ಷಕ್ಕೊಂದು ಬಾರಿ ಮಾತ್ರ ಆಚೆ ತರಲಾಗುತ್ತದೆ. ಸೂರ್ಯೋದಯಕ್ಕೂ ಮೊದಲೇ ಆಚೆ ತಂದು ಹಲವು ದೃವ್ಯಗಳಿಂದ ಶುದ್ದೀಕರಣ ಮಾಡಲಾಗುತ್ತದೆ. ಹಾಲು ಮೊಸರು ತುಪ್ಪ ಅರಶಿನ ಮೊದಲಾದವುಗಳಿಂದ ದೇವರ ವಿಗ್ರಹವನ್ನು ಶುದ್ಧೀಕರಣ ಮಾಡಲಾಗುತ್ತದೆ. ಕೈಕಿಷ ದ್ವಾದಶಿ ದಿನದಂದು ಈ ಪ್ರಕ್ರಿಯೆ ನಡೆಯುವುದು ವಾಡಿಕೆಯಾಗಿದ್ದು, ಸೂರ್ಯನ ಕಿರಣ ಭೂಮಿಯನ್ನು ತಲುಪುವ ಮೊದಲು ಎಲ್ಲಾ ವಿದಿವಿಧಾನಗಳು ಪೂರ್ಣಗೊಂಡು ಮೂರ್ತಿಗಳು ಮತ್ತೆ ಗರ್ಭಗುಡಿ ಸೇರುತ್ತದೆ. ವಿಶೇಷ ಅಂದ್ರೆ ಕೇವಲ ಶ್ರೀನಿವಾಸ ಮಾತ್ರವಲ್ಲದೆ ಆತನ ಅಕ್ಕಪಕ್ಕದಲ್ಲಿರುವ ಶ್ರೀದೇವಿ ಹಾಗೂ ಭೂ ದೇವಿಯ ಮುಖಭಾವ ಕೂಡಾ ಶ್ರೀನಿವಾಸನಂತೆ ಮುಖಭಾವದಂತೆ ಕೋಪದಲ್ಲಿದೆ.

ತಿರುಪತಿ ತಿಮ್ಮಪ್ಪನ ಗರ್ಭಗುಡಿಯಲ್ಲಿ ಇರುವ ಶ್ರೀನಿವಾಸನ ಈ ಉತ್ಸವ ಮೂರ್ತಿಯ ಹೆಸರು ವೆಂಟತುರೈವಾರ್. ತಿರುಪತಿಯಲ್ಲಿ ಭಕ್ತರು ಕಾಣವು ಶ್ರೀನಿವಾಸ ವಿಗ್ರಹ ಹೊರತು ಪಡಿಸಿದ್ರೆ ಇಲ್ಲಿರೋ ಅತ್ಯಂತ ಪುರಾತನ ವಿಗ್ರಹ ಇದಾಗಿದೆ. ಸರಿ ಸುಮಾರು 14 ನೇ ಶತಮಾನದ ವರೆಗೂ ಬ್ರಹ್ಮೋತ್ಸವದಲ್ಲಿ ಇದೇ ಮೂರ್ತಿಯನ್ನು ಹೊತ್ತೊಯ್ಯಲಾಗುತ್ತಿತ್ತು. ಆದ್ರೆ ಆ ಕಾಲದಲ್ಲಿ ನಡೆದಿದ್ದ ಒಂದು ಘಟನೆಯಿಂದ ಈ ವಿಗ್ರಹವನ್ನು ಬ್ರಹ್ಮೋತ್ಸವದಲ್ಲಿ ತರುವುದನ್ನು ನಿಲ್ಲಿಸಲಾಯಿತು.

14 ನೇ ಶತಮಾನದಲ್ಲಿ ನಡೆದಿದ್ದ ಬ್ರಹ್ಮೋತ್ಸವದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಹಲವಾರು ಮನೆಗಳು ಸುಟ್ಟು ಬಸ್ಮವಾಗಿತ್ತಂತೆ. ಈ ವೇಳೆ ಭಕ್ತನೊಬ್ಬನಿಗೆ ಅಶರೀರವಾಣಿಯೊಂದು ಕೇಳಿಸಿದ್ದು, ಅದು ಶ್ರೀನಿವಾಸ ದೇವರದ್ದೇ ಎನ್ನಲಾಗಿದೆ. ಆ ಅಶರೀರವಾಣಿಯಲ್ಲಿ ಕೋಪದಲ್ಲಿ  ಉಗ್ರ ಸ್ವರೂಪಿಯಾಗಿ ಕಾಣಿಸುವ ಈ ಶ್ರೀನಿವಾಸ ವಿಗ್ರಹವನ್ನು ಬೆಳಕಿನ ಆಚೆಗೆ ತರದಂತೆ ಎಚ್ಚರಿಕೆ ನೀಡಲಾಗಿತ್ತಂತೆ. ಇನ್ನು ಮುಂದೆ ಸೂರ್ಯನ ಬೆಳಕು ಈ ವಿಗ್ರಹದ ಮೇಲೆ ಬಿದ್ದರೆ ಇಡೀ ಪ್ರಪಂಚಕ್ಕೆ ಬೆಂಕಿ ಹತ್ತಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಲಾಗಿತ್ತಂತೆ. ಅಂದಿನಿಂದ ಈ ಉಗ್ರ ಸ್ವರೂಪಿ ಶ್ರೀನಿವಾಸನನ್ನು ಸೂರ್ಯನ ಬೆಳಕಿಗೆ ಆಚೆ ತರೋದು ನಿಲ್ಲಿಸಲಾಗಿದೆ. ವರ್ಷಕ್ಕೊಂದು ಬಾರಿ ಶುಚಿ ಮಾಡಲು ಹೊರತಂದ್ರೂ ಸೂರ್ಯೋದಯದ ಮೊದಲೇ ಶುಚಿಗೊಳಿಸಿ ಗರ್ಭಗುಡಿ ಸೇರಿಸಲಾಗುತ್ತದೆ.

Continue Reading

FILM

ನಾಳೆ ದ್ವಾರಕೀಶ್ ಅಂತ್ಯಕ್ರಿಯೆ.. ಸ್ಥಳ.. ಸಮಯ.. ಇಲ್ಲಿದೆ ಮಾಹಿತಿ

Published

on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ​​ಇಂದು ಕತ್ತಲು ಆವರಿಸಿದೆ. ಹಿರಿಯ ನಟ ದ್ವಾರಕೀಶ್ ಇಂದು ಸಾವನ್ನಪ್ಪಿದ್ದಾರೆ. ಅನೇಕ ನಟರು ಈ ಹಿರಿಯ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.

81ನೇ ವಯಸ್ಸಿನಲ್ಲಿ ನಟ ದ್ವಾರಕೀಶ್​ ಸಾವನ್ನಪ್ಪಿದ್ದಾರೆ. ಪತ್ನಿ ಅಂಬುಜ ಸಾವನ್ನಪ್ಪಿದ ದಿನ, ತಿಂಗಳಂದೇ ದ್ವಾರಕೀಶ್​ ಕೊನೆಯುಸಿರೆಳೆದಿದ್ದಾರೆ. ಮಗನ ಬಳಿ ಕೊಂಚ ಹೊತ್ತು ಮಗಲುತ್ತೇನೆಂದು ಹೇಳಿದವರು ಇಹಲೋಕ ತ್ಯಜಿಸಿದ್ದಾರೆ.

ದ್ವಾರಕೀಶ್​ ಪಾರ್ಥಿವ ಶರೀರ ಕಾಣಲು ಅನೇಕ ಮಂದಿ ಅವರ ಮನೆಯತ್ತ ತೆರಳುತ್ತಿದ್ದಾರೆ. ಹಿರಿಯ ನಟರು ಕೂಡ ದ್ವಾರಕೀಶ್​​ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ನಟನನ್ನು ಕಾಣಲು ಸಾರ್ವಜನಿಕರಿಗೂ ಅವಕಾಶ ಮಾಡಲಾಗಿದ್ದು, ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ದರ್ಶನ ಪಡೆಯಬಹುದಾಗಿದೆ.

ನಾಳೆ ಬೆಳಗ್ಗೆ 6 ಕ್ಕೆ ಮನೆಯಿಂದ ಹೊರಟು 7 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತೆ. 11 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ಚಾಮರಾಜಪೇಟೆಯ ಟಿಆರ್ ಮೀಲ್ ನತ್ತ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ನಂತರ ಅವರ ಅಂತ್ಯಕ್ರಿಯೆ ನೆರವೇರಲಿದೆ. 1 ಗಂಟೆಯ ನಂತರ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗುತ್ತದೆ.

Continue Reading

LATEST NEWS

ದಿನದಲ್ಲಿಎರಡು ಬಾರಿ ಕಣ್ಮರೆಯಾಗುತ್ತೆ ಈ ದೇವಾಲಯ..! ಇಲ್ಲಿಗೆ ಬಂದ್ರೆ ಆಗುತ್ತೆ ಪಾಪ ವಿಮೋಚನೆ!

Published

on

ಗುಜರಾತ್ : ಈ ದೇವಸ್ಥಾನ ದಿನದಲ್ಲಿ ಎರಡು ಬಾರಿ ಕಣ್ಮರೆಯಾಗುತ್ತೆ. ಭಕ್ತಾದಿಗಳು ದೇವರ ದರ್ಶನಕ್ಕಾಗಿ ಕೆಲವೊಮ್ಮೆ ಗಂಟೆಗಟ್ಟಲು ಕಾದು ಕುಳಿತಿರುತ್ತಾರೆ. ಹೌದು, ನಿಮಗೆ ಇದನ್ನು ಕೇಳಿದ್ರೆ ಆಶ್ಚರ್ಯ ಆದ್ರು ಇದು ಸತ್ಯ!

ಹೇಗಿದೆ ಈ ದೇವಸ್ಥಾನ?

ಗುಜರಾತ್‌ನ  ಜಂಬೂಸರ್‌ನ ಕವಿ ಕಾಂಬೋಯಿ ಗ್ರಾಮದಲ್ಲಿರುವ ಶ್ರೀ ಸ್ತಂಭೇಶ್ವರ ಮಹಾದೇವ ದೇವಾಲಯ ದಿನಕ್ಕೆ ಎರಡು ಬಾರಿ ಮಾತ್ರ ಗೋಚರಿಸುತ್ತದೆ. ಇದು ಮಹಾದೇವನಿಗೆ ಅರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಶಿವನ ಮೂರ್ತಿಯ ಜೊತೆ ಶಿವಲಿಂಗವನ್ನು ಸ್ಥಾಪನೆ ಮಾಡಲಾಗಿದೆ. ಸ್ತಂಭಗಳ ಮೇಲೆ ಶಿವನಿರುವುದರಿಂದ ಈ ದೇವಾಲಯವನ್ನು ಸ್ತಂಭೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಸಮುದ್ರದ ಉಬ್ಬರ ಹೆಚ್ಚಾದಾಗ ದೇವಾಲಯ ನೀರಿನಲ್ಲಿ ಮುಳುಗಿ ಕಣ್ಮರೆಯಾಗುತ್ತದೆ. ಇದನ್ನು ಕಣ್ಮರೆಯಾಗುವ ಶಿವನ ದೇವಾಲಯ ಅಂತಾನೂ ಕರೀತಾರೆ.

ಸಮುದ್ರದ ಮಧ್ಯದಲ್ಲಿದೆ ಈ  ಶಿವಾಲಯ :
ಹೌದು, ಈ ದೇವಾಲಯ ಹಲವು ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತಿದೆ. ಇದು ಪುರಾತನ ದೇವಾಲಯವಾಗಿದ್ದು, ಸುಮಾರು 150 ವರ್ಷಗಳಷ್ಟು ಹಳೆಯದು ಎಂಬ ಉಲ್ಲೇಖವಿದೆ. ಈ ದೇವಾಲಯವು ದಿನಕ್ಕೆ ಎರಡು ಬಾರಿ ಮಾತ್ರ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾದಾಗಲೆಲ್ಲಾ ಈ ದೇವಾಲಯವು ಗೋಚರಿಸುವುದಿಲ್ಲ. ಅದೇ ಸಮಯದಲ್ಲಿ, ನೀರಿನ ಮಟ್ಟ ಕಡಿಮೆಯಾದಾಗ, ದೇವಾಲಯವು ಗೋಚರಿಸುತ್ತದೆ ಎಂದು ಹೇಳಲಾಗಿದೆ. ಈ ವೇಳೆ ಶಿವನಿಗೆ ಅಭಿಷೇಕವನ್ನು ಸಮುದ್ರ ರಾಜನೇ ಮಾಡುತ್ತೇನೆ. ಈ ದೇವಾಲಯವು ಅರಬ್ಬಿ ಸಮುದ್ರ ಹಾಗೂ ಕ್ಯಾಂಬೆ ಕೊಲ್ಲಿಯ ನಡುವೆ ಇದೆ. ತೀರದಿಂದ ಕೆಲವೇ ಮೀಟರ್ ದೂರದಲ್ಲಿದೆ. ದೇವಾಲಯದ ವಾಸ್ತುಶೈಲಿಯಿಂದಲ್ಲದೇ ಇದ್ದರೂ, ಅದರ ವಿಶಿಷ್ಟ ಸ್ಥಳದಿಂದಾಗಿ ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ತಾರಕಾಸುರನಿಗೂ ಈ ದೇವಾಲಯಕ್ಕೂ ಇದೆ ಸಂಬಂಧ :

ಈ ಪುರಾತನ ದೇವಾಲಯದ ಸುತ್ತ ಹಲವು ದಂತಕತೆಗಳಿವೆ. ತಾರಕಾಸುರನಿಗೂ ಈ ದೇಗುಲಕ್ಕೂ ಸಂಬಂಧವಿದೆ ಎನ್ನಲಾಗಿದೆ.  ತಾರಕಾಸುರ ಒಬ್ಬ ರಾಕ್ಷಸ. ಆದರೆ ಶಿವ ಭಕ್ತ. ಅವನ ಅಚಲವಾದ ಭಕ್ತಿಯನ್ನು ಭಗವಾನ್ ಶಿವ ಮೆಚ್ಚುತ್ತಾನೆ. ಒಮ್ಮೆ ಶಿವ ದೇವರಲ್ಲಿ ರಾಕ್ಷಸ ವರವನ್ನು ಕೇಳಿದಾಗ, ಶಿವನು ತನ್ನ ಆರು ದಿನದ ಮಗನಿಂದ ಮಾತ್ರ ನಿನ್ನ ಜೀವವನ್ನು ಕೊನೆಗೊಳಿಸಲು ಸಾಧ್ಯ ಎಂದು ವರ ನೀಡುತ್ತಾನೆ. ಭಗವಾನ್ ಶಿವನ ಮೂರನೇ ಕಣ್ಣಿನ ಜ್ವಾಲೆಯಿಂದ ಭಗವಾನ್ ಕಾರ್ತಿಕೇಯನ ಸೃಷ್ಟಿಯಾಗುತ್ತದೆ. ಕಾರ್ತಿಕೇಯ ತಾರಕಾಸುರನ ವಧಿಸುವ ವೇಳೆ ರಾಕ್ಷಸನ ಭಕ್ತಿಗೆ ಪ್ರೇರೇಪಿತನಾಗುತ್ತಾನಂತೆ. ಹಾಗಾಗಿ ಶಿವನ ಅಪ್ಪಟ ಭಕ್ತನನ್ನು ವಧಿಸಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಶಿವನ ಧ್ಯಾನವನ್ನು ಮಾಡುತ್ತಾನೆ. ಬಳಿಕ ಇದೇ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪನೆ ಮಾಡುತ್ತಾನೆ ಎಂದು ಪುರಾಣ ಹೇಳುತ್ತದೆ.

READ MORE..; ಅರ್ಚಕರಿಂದಲೇ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ..!! ವಿಡಿಯೋ ವೈರಲ್

ಮೋಕ್ಷ ಪ್ರಾಪ್ತಿ :

ಶಿವನ ಅನುಮತಿಯಿದ್ದರೆ ಮಾತ್ರ ಈ ದೇವಾಲಯವನ್ನು ನೋಡಲು ಸಾಧ್ಯ ಎಂಬ ನಂಬಿಕೆ ಇದೆ. ಇಲ್ಲಿಗೆ ಬಂದವರು ತಮ್ಮ ಪಾಪ ವಿಮೋಚನೆಯನ್ನು ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ. ಇಲ್ಲಿಗೆ ಬಂದರೆ ತಮಗೆ ಮೋಕ್ಷ ಕೂಡಾ ಲಭಿಸುತ್ತೆ ಎಂದು ಹೇಳಲಾಗುತ್ತದೆ. ಆದರೆ, ಈ ದೇವಾಲಯಕ್ಕೆ ಪ್ರವಾಸಿಗರು ಮಧ್ಯಾಹ್ನ 2 ರಿಂದ 3 ಗಂಟೆವಯರೆಗೆ ಮಾತ್ರ ಭೇಟಿ ಕೊಡಬಹುದಾಗಿದೆ. ಉಳಿದ ಸಮಯ ಸಮುದ್ರದ ಉಬ್ಬರ ಹೆಚ್ಚಿರುವುದರಿಂದ ಪ್ರವಾಸಿಗರಿಗೆ ದೇವಾಲಯದ ಒಳಗೆ ಪ್ರವೇಶ ನೀಡಲಾಗುವುದಿಲ್ಲ.

 

Continue Reading

LATEST NEWS

Trending