Connect with us

LATEST NEWS

ಶಿರಾಡಿ ಘಾಟ್’ನಲ್ಲಿ ಬೆಂಕಿಗಾಹುತಿಯಾದ ಲಾರಿ..!

Published

on

ನೆಲ್ಯಾಡಿ: ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಡಬಲ್ ಟರ್ನ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಈಚರ್ ಲಾರಿಯಲ್ಲಿ ಶಿರಾಡಿ ಘಾಟಿಯ ಡಬಲ್ ಟರ್ನ್ ಬಳಿ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಚಾಲಕ ಲಾರಿಯನ್ನು ಹೆದ್ದಾರಿ ಬದಿ ನಿಲ್ಲಿಸಿ ಕೆಳಕ್ಕಿಳಿದಿದ್ದಾರೆ. ಬಳಿಕ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟುಹೋಗಿದೆ ಎಂದು ವರದಿಯಾಗಿದೆ.

LATEST NEWS

‘ಸಹಕಾರೋತ್ಸವ’ಕ್ಕೆ ಅಣಿಯಾಗಿದೆ ಕಡಲನಗರಿ; 32 ಕಲಾತಂಡಗಳು ಜಾಥಾದಲ್ಲಿ ಭಾಗಿ

Published

on

ಮಂಗಳೂರು: ಸ್ಮಾರ್ಟ್ ಸಿಟಿ, ಕಡಲನಗರಿ ಮಂಗಳೂರಿನ ರಾಜಬೀದಿಯುದ್ದಕ್ಕೂ ಸಹಕಾರಿ ತೋರಣ. ಕರಾವಳಿ ಉತ್ಸವ ಮೈದಾನದಲ್ಲಿ ಮೈದಳೆದು ನಿಂತ ವಿಶಾಲವಾದ ಚಪ್ಪರ, ಆಕರ್ಷಕವಾಗಿ ಅಲಂಕೃತಗೊಂಡ ವೇದಿಕೆ. ಇದು ನ.16ರಂದು ನಡೆಯಲಿರುವ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹಕ್ಕೆ ಬಂದರು ನಗರಿ ಮಂಗಳೂರು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಮಹಾಉತ್ಸವ ನಡೆಯಲಿದೆ.

15 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸಪ್ತಾಹಕ್ಕೆ ವಸ್ತು ಪ್ರದರ್ಶನ, ಬೃಹತ್ ಸಹಕಾರ ಜಾಥಾ ಮೆರುಗು ನೀಡಲಿದೆ. ಬೃಹತ್ ವೇದಿಕೆಯ ಮುಂಭಾಗ 4 ಹಂತದಲ್ಲಿ ಸಹಕಾರಿ ಬಂಧುಗಳು ಕುಳಿತುಕೊಳ್ಳಲು ವಿಶಾಲವಾದ ಚಪ್ಪರ ಹಾಕಲಾಗಿದೆ. ಪ್ರಥಮ ಹಂತದಲ್ಲಿ ವಿವಿಐಪಿ, ವಿಐಪಿಗಳು, ಮಾಧ್ಯಮ ಬಂಧುಗಳಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ನಾನಾ ಹಂತಗಳನ್ನು ವಿಭಜಿಸಲಾಗಿದೆ. ಸಭಾಂಗಣವಿಡೀ ತಂಪನ್ನಾಗಿಸಲು ಬೃಹತ್ ಗಾತ್ರ ಫ್ಯಾನ್‌ಗಳನ್ನು ಜೋಡಿಸಲಾಗಿದೆ.

ಸಹಕಾರ ಮಾಣಿಕ್ಯ ಪ್ರಶಸ್ತಿ :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ 2024ನೇ ಸಾಲಿನಿಂದ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಪ್ರಶಸ್ತಿ ಜತೆಗೆ 5 ಗ್ರಾಂ ಚಿನ್ನದ ಪದಕ, 10 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ, ಕ್ರೆಡಿಟ್ ಸೊಸೈಟಿ, ಮೀನುಗಾರ ಸಹಕಾರ ಸಂಘ, ಸೌಹಾರ್ದ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ ಒಂದು ಹಾಗೂ 2013-24ನೇ ಸಾಲಿನಲ್ಲಿ ಶತಮಾನೋತ್ಸವ ಪೂರೈಸಿದ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗೌರವಿಸಲಾಗುವುದು.

ಜಾಥಾದಲ್ಲಿ ತಂಡಗಳ ಆಕರ್ಷಣೆ (ಬಾಕ್ಸ್) :

ಸಹಕಾರ ಜಾಥಾ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ ಜಾಥಾ ಮೆರವಣಿಗೆ ನಡೆಯಲಿದೆ. ಈ ಜಾಥಾದಲ್ಲಿ ಸಹಕಾರಿ ರಥ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆ, ಮೊಳಹಳ್ಳಿ ಶಿವರಾವ್ ಟ್ಯಾಬ್ಲೋ, ಬ್ಯಾಂಕಿಂಗ್ ವ್ಯವಹಾರದ ಸ್ತಬ್ಧಚಿತ್ರ, ಹೈನುಗಾರಿಕೆಯ ಸ್ತಬ್ಧಚಿತ್ರ, ಮೀನುಗಾರಿಕೆಯ ಸ್ತಬ್ಧಚಿತ್ರ, ಕೃಷಿ ಉಪಕರಣಗಳ ಮಾರಾಟದ ಸ್ತಬ್ಧಚಿತ್ರ, ನಂದಿನಿ ಅನ್ ವಿಲ್ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್, ರಾಣಿ ಅಬ್ಬಕ್ಕನ ಸ್ತಬ್ಧಚಿತ್ರ, ರಬ್ಬರ್ ಟ್ಯಾಪಿಂಗ್‌ನ ಸ್ತಬ್ಧಚಿತ್ರ, ನವೋದರ ಗುಂಪಿನ ಸ್ತಬ್ಧಚಿತ್ರ, ಪತ್ತಿನ ಸಂಘಗಳ ಹಣಕಾಸಿನ ವ್ಯವಹಾರದ ಸ್ತಬ್ಧಚಿತ್ರ, ಚೆಂಡೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ನೇತ್ರಾವತಿ ಮತ್ತು ಕುಮಾರಧಾರ ನದಿಯ ಸಂಗಮದ ಸ್ತಬ್ಧಚಿತ್ರ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಅಕ್ಕಿ ಮಿಲ್ಲಿನ ಸ್ತಬ್ಧಚಿತ್ರ, ರಸಗೊಬ್ಬರ ಮಾರಾಟ ಮತ್ತು ಬ್ಯಾಂಕಿಂಗ್ ವ್ಯವಹಾರದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ತುಳುನಾಡ ವೈಭವದ ಸ್ತಬ್ಧಚಿತ್ರ, ಕಂಬಳದ ಸ್ತಬ್ಧಚಿತ್ರ, ಹಳ್ಳಿ ಮನೆಯ ಸ್ತಬ್ಧಚಿತ್ರ ಸೇರಿದಂತೆ ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕ್ ವಾಹನ ಸೇರಿದಂತೆ 32ಕ್ಕೂ ಅಧಿಕ ಸ್ತಬ್ಧಚಿತ್ರಗಳು ಜಾಥದಲ್ಲಿ ಭಾಗವಹಿಸಲಿದೆ.

Continue Reading

LATEST NEWS

ಆಸ್ಪತ್ರೆಯಲ್ಲಿ ಭೀಕರ ಅ*ಗ್ನಿ ದುರಂತ; 10 ನವಜಾತ ಶಿಶುಗಳು ಸ*ಜೀವ ದ*ಹನ

Published

on

ಮಂಗಳೂರು/ಉತ್ತರ ಪ್ರದೇಶ : ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್ನಲ್ಲಿ ಭಾರೀ ಅ*ಗ್ನಿ ಅವಘ*ಡ ಸಂಭವಿಸಿದೆ. ಈ ದುರಂ*ತದಲ್ಲಿ 10 ನವಜಾತ ಶಿಶುಗಳು ಸಜೀವ ದ*ಹನವಾಗಿವೆ. ಶುಕ್ರವಾರ(ನ.15) ತಡರಾತ್ರಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂ*ಕಿ ಕಾಣಿಸಿಕೊಂಡಿದೆ.


ತೀವ್ರ ನಿಗಾ ಘಟಕದ ಸುತ್ತಲೂ ಬೆಂ*ಕಿ ಆವರಿಸಿದ್ದು, ಬೆಂ*ಕಿ ಹೊತ್ತಿಕೊಂಡಂತೆಯೇ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡ ತೊಡಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾ*ತಕ್ಕೊಳಗಾಗಿದ್ದು, ವೈದ್ಯರು ಮತ್ತು ಇತರೆ ಸಿಬ್ಬಂದಿ ವಾರ್ಡ್ನ ಕಿಟಕಿ ಗಾಜುಗಳನ್ನು ಒಡೆದು ಅವುಗಳ ಮೂಲಕ ರೋಗಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟರಲ್ಲಾಗಲೇ 10 ಶಿಶುಗಳು ಸಜೀವ ದಹನವಾಗಿವೆ.

 

ಇದನ್ನೂ ಓದಿ : ಆಸ್ಪತ್ರೆಯೊಳಗೆ ಅಗ್ನಿ ಅವಘಡ; ಓರ್ವ ರೋಗಿ ಸಾ*ವು

 

ಸ್ಥಳಕ್ಕೆ ಅ*ಗ್ನಿಶಾಮಕ ಸಿಬ್ಬಂದಿ ತಲುಪುವ ವೇಳೆಗಾಗಲೇ ಎನ್ಐಸಿಯು ವಾರ್ಡ್ ದಟ್ಟ ಹೊಗೆಯಿಂದ ತುಂಬಿಕೊಂಡಿತ್ತು. ದುರ್ಘಟನೆಯಲ್ಲಿ ಸುಮಾರು 10 ನವಜಾತ ಶಿಶುಗಳು ಸುಟ್ಟು ಕರಕಲಾಗಿವೆ. ಈ ನಡುವೆ ವಾರ್ಡ್ನ ಕಿಟಕಿ ಒಡೆದು ಕೆಲವು ಶಿಶುಗಳನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಹಲವು ಮಕ್ಕಳಿಗೆ ಗಂ*ಭೀರ ಗಾ*ಯಗಳಾಗಿದ್ದು, ಸ್ಥಿತಿ ಗಂ*ಭೀರವಾಗಿದೆ ಎಂದು ತಿಳಿದುಬಂದಿದೆ.

Continue Reading

LATEST NEWS

‘ತುಳುಕೂಟ ಕುವೈಟ್ ನ ಬೆಳ್ಳಿ ಹಬ್ಬ’ ತುಳು ಪರ್ಬ-2024 ಗ್ರ್ಯಾಂಡ್ ಸಕ್ಸಸ್-ಈಶ್ವರ್ ಮಲ್ಪೆ, ಕಾಪಿಕಾಡ್ ಗೆ ಗೌರವ..!

Published

on

ಕುವೈಟ್: ತುಳುನಾಡಿನ ಶ್ರೀಮಂತ ಸಂಸ್ಕೃತಿ ಆಚಾರ ವಿಚಾರವನ್ನು ಹೊರದೇಶದಲ್ಲಿ ಪಸರಿಸುತ್ತಿರುವ, ಹೊರದೇಶದಲ್ಲಿದ್ದರೂ ಕೂಡ ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರುವಾಸಿಯಾದ ಸಂಘ ತುಳುಕೂಟ ಕುವೈಟ್ ಗೆ ಬೆಳ್ಳಿಹಬ್ಬದ ಸಂಭ್ರಮ. ಈ ಹಿನ್ನೆಲೆ ತುಳುನಾಡಿನ ಶ್ರೀಮಂತ ಸಂಸ್ಕೃತಿ ಆಚಾರ ವಿಚಾರವನ್ನು ಹೊರದೇಶದಲ್ಲಿ ಪಸರಿಸುತ್ತಿರುವ ತುಳುಕೂಟ ಕುವೈಟ್ ನ ತುಳು ಪರ್ಬ ಕಾರ್ಯಕ್ರಮ ಅ.25ರಂದು ಕುವೈಟ್ ಹವಾಲಿಯ ಅಮೆರಿಕನ್ ಇಂಟರ್ ನ್ಯಾಷನಲ್ ಆಡಿಟೋರಿಯಂನಲ್ಲಿ ಅದ್ದೂರಿಯಾಗಿ ನಡೆಯಿತು.

ಬರೋಬ್ಬರಿ 25 ವರ್ಷಗಳಿಂದ ಅರಬ್ಬೀಸ್ಥಾನದಲ್ಲಿ ತುಳುನಾಡಿನ ಕಂಪನ್ನು ಪಸರಿಸುತ್ತಿರುವ ತುಳು ಕೂಟ ಕುವೈಟ್ ನ ಯಶಸ್ವೀ ಕಾರ್ಯಕ್ರಮ ತುಳುಪರ್ಬವನ್ನು ಸಂಘದ ಪ್ರಥಮ ಅಧ್ಯಕ್ಷ ಸುಧಾಕರ್ ಶೆಟ್ಟಿ ಮತ್ತು ಎಲ್ಲಾ ನಿಕಟಪೂರ್ವ ಅಧ್ಯಕ್ಷರುಗಳು ಹಾಗೂ ಪ್ರಸಕ್ತ ಅಧ್ಯಕ್ಷರಾದ ನಿಟ್ಟೆ ಅಬ್ದುಲ್ ರಜಾಕ್ ಸೇರಿ ಸಂಘದ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಇನ್ನು ದೀಪ ಬೆಳಗಿಸಿ ಮಾತನಾಡಿದ ತುಳುಕೂಟ ಕುವೈಟ್ ಅಧ್ಯಕ್ಷರಾದ ನಿಟ್ಟೆ ಅಬ್ದುಲ್ ರಜಾಕ್ ನಮ್ಮ ಸಂಘ 4,000ನೋಂದಾಯಿತ ಸದಸ್ಯ ರನ್ನೊಳಗೊಂಡಿದ್ದು, ಸಾವಿರ ಸಾವಿರ ತುಳುವರ ಕೂಡುಕುಟುಂಬವಾಗಿದ್ದು, ತುಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ, ಈ ನಿಟ್ಟಿನಲ್ಲಿ ನಮ್ಮ ಸಂಘ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯು ಸಾಮಾಜಿಕ ಸೇವಾ ಚಟುವಟಿಕೆ, ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ನಿರಂತರವಾಗಿಮಾಡಿಕೊಂಡು ಬಂದಿದೆ. ಪ್ರಾಜೆಕ್ಟ್ ಎಜುಕೇಶನ್ಯೋಜನೆಯಡಿ ತುಳುನಾಡಿನ ಹಲವಾರು ಶಿಕ್ಷಣ ಸಂಸ್ಥೆ ಗಳಿಗೆ ಹಣಕಾಸು ನೆರವು ಒದಗಿಸಿದೆ. ಈ ವರ್ಷ ಎಸೆಸ್ಸೆ ಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 17 ಸರ್ಕಾರಿ ಶಾಲೆಗಳ 33 ವಿದ್ಯಾ ರ್ಥಿಗಳಿಗೆ ವಿದ್ಯಾ ರ್ಥಿವೇತನ ನೀಡಲಾಗಿದೆ. ಹಲವು ಶಾಲೆಗಳ ವಿದ್ಯಾ ರ್ಥಿಗಳಿಗೆ ಪುಸ್ತಕ, ಸಮವಸ್ತ್ರ ನೀಡಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ , ಶಾಲೆಗಳಿಗೆ ಶೌಚಗೃಹಗಳ ನಿರ್ಮಾಣ, ಕಂಪ್ಯೂ ಟರ್, ಪೀಠೋಪಕರಣ ಕೊಡುಗೆ ನೀಡಲಾಗಿದೆ. ಆಶ್ರಯ ಯೋಜನೆಯಡಿ ಬಡಕುಟುಂಬಗಳಿಗೆ 3 ಮನೆ ನಿರ್ಮಿಸಿ ಕೊಡಲಾಗಿದ್ದು ಮತ್ತೊಂದು ಮನೆ ನಿರ್ಮಾಣ ಯೋಜನೆ ಪ್ರ ಗತಿಯಲ್ಲಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭ ಮಾತೃ ಭಾಷೆ ತುಳುವಿಗೆ ಅಧಿಕೃತ ಸ‍್ಥಾನಮಾನ ನೀಡುವ ಕೆಲಸ ಆದಷ್ಟು ಬೇಗ ಆಗಲಿ ಎಂದರು.

ಈ ಬಾರಿಯ ತುಳು ಪರ್ಬದಲ್ಲಿ ಹಾಸ್ಯ–ನಾಟ್ಯ-ಸಾಂಸ್ಕೃತಿಕ ವೈಭವದ ಸಂಗಮವಾಗಿದ್ದು ಸಂಘದ ಸದಸ್ಯರು, ಕುವೈಟ್ ನ ತುಳುವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಮತ್ತು ಜೊತೆಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಖ್ಯಾತ ರಂಗಭೂಮಿ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ತಂಡ ‘ನಮಸ್ಕಾ ರ ಮೇಸ್ಟ್ರೆ ’ ಸೂಪರ್ ಹಿಟ್ ತುಳು ನಾಟಕ ಪ್ರದರ್ಶನಗೊಂಡು ವೀಕ್ಷಕರನ್ನು ನಗೆಗೆಡಲಿನಲ್ಲಿ ತೇಲುವಂತೆ ಮಾಡಿತು.

ಈ ಸಂಧರ್ಭ ತುಳುಕೂಟ ಕುವೈಟ್ನಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ತುಳು ಜಾನಪದ ವಿದ್ವಾಂಸರಾದ ಗಣೇಶ‍್ ಅಮೀನ್ ಸಂಕಮಾರ್, ಸಮಾಜಸೇವಕ ಆಪತ್ಬಾಂದವ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಇದೇ ಸಂಧರ್ಭ ಈಶ್ವರ್ ಮಲ್ಪೆ ಅವರ ನಿಸ್ವಾರ್ಥ ಸೇವೆಗೆ 1 ಲಕ್ಷ ರೂ.ಗಳನ್ನು ನೀಡಿ ಅವರ ಸಮಾಜ ಸೇವಾ ಕಾರ್ಯಕ್ಕೆ ಪ್ರೋತ್ಸಾಹಿಸಲಾಯಿತು.

ವರ್ಷಂಪ್ರತಿ ತುಳು ಪರ್ಬ ಅನ್ನುವ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ತುಳುಕೂಟ ಕುವೈಟ್ ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿ ಈ ಬಾರಿಯೂ ಸರ್ವ ಧರ್ಮದ ಬಂಧುಗಳನ್ನ ಒಟ್ಟು ಸೇರಿಸಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿದ್ದು ಸಾವಿರಾರು ತುಳುವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರ ಮರಚ್ಚುಗೆ ಪ್ರಶಂಸೆಗೆ ಪಾತ್ರವಾಯಿತು.

Continue Reading

LATEST NEWS

Trending

Exit mobile version